»   » ರಾಜಕೀಯ ಅಖಾಡಕ್ಕೆ ಇಳಿದ ರಜನಿ : ಕನ್ನಡ ಚಿತ್ರರಂಗದ ಅಭಿಪ್ರಾಯ ಏನು?

ರಾಜಕೀಯ ಅಖಾಡಕ್ಕೆ ಇಳಿದ ರಜನಿ : ಕನ್ನಡ ಚಿತ್ರರಂಗದ ಅಭಿಪ್ರಾಯ ಏನು?

Posted By:
Subscribe to Filmibeat Kannada
ರಜಿನಿಕಾಂತ್ ತಮ್ಮ ರಾಜಕೀಯ ಪ್ರವೇಶವನ್ನ ಖಚಿತಪಡಿಸಿದ್ದಾರೆ | Filmibeat Kananda

ನಟ ರಜನಿಕಾಂತ್ ರಿಯಲ್ ರಾಜಕೀಯಕ್ಕೆ ಇಳಿದಿದ್ದಾರೆ. ಇಷ್ಟು ದಿನ ರಾಜಕೀಯದ ಬಗ್ಗೆ ಮಾತನಾಡಿದರು ಕೂಡ ರಜನಿ ರಾಜಕೀಯಕ್ಕೆ ಬರುವ ಬಗ್ಗೆ ಸ್ಪಷ್ಟಪಡಿಸಿದಿಲ್ಲ. ಆದರೆ ಇಂದು ರಜನಿ ತಮ್ಮ ರಾಜಕೀಯ ಎಂಟ್ರಿಯ ಘೋಷಣೆ ಮಾಡಿದ್ದಾರೆ.

ರಜನಿಕಾಂತ್ ರಾಜಕೀಯ ಬಗ್ಗೆ ಕನ್ನಡದ ಕೆಲ ನಟ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ನಟ ರಮೇಶ್ ಅರವಿಂದ್, ದೇವರಾಜ್ ಹಾಗೂ ನಟಿ, ವಿಧಾನ ಪರಿಷತ್ ಸದಸ್ಯ ತಾರ ಅವರು ರಜನಿಕಾಂತ್ ಅವರಿಗೆ ಶುಭಾಶಯ ಕೋರಿದ್ದಾರೆ. ಕರ್ನಾಟದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಪ್ರಜಾಕೀಯ ಶುರು ಮಾಡಿದರು. ಈಗ ರಜನಿ ಕೂಡ ಜನರಿಗಾಗಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ರಜನಿ ಅಭಿಮಾನಿಗಳ ಜೊತೆ ಅವರ ಚಿತ್ರರಂಗದ ಸ್ನೇಹಿತರಿಗೆ ಕೂಡ ರಜನಿ ರಾಜಕೀಯ ವಿಷಯ ಖುಷಿ ನೀಡಿದೆ. ಮುಂದೆ ಓದಿ....

ತುಂಬ ನಿರೀಕ್ಷೆ ಇದೆ - ರಮೇಶ್ ಅರವಿಂದ್

''15 ವರ್ಷಗಳಿಂದ ರಜನಿ ಅವರು ರಾಜಕೀಯಕ್ಕೆ ಬರುತ್ತಾರೆ.. ಬರಲ್ಲ... ಎನ್ನುವ ಚರ್ಚೆ ಇತ್ತು. ಆದರೆ ಇದಕ್ಕೆ ಈಗ ಅವರೇ ಫುಲ್ ಸ್ಟಾಪ್ ಇಟ್ಟಿದ್ದಾರೆ. ಅವರು ತುಂಬ ಪ್ಲಾನ್ ಮಾಡಿಕೊಂಡು ನೀಟ್ ಆಗಿ ರಾಜಕೀಯಕ್ಕೆ ಬರುತ್ತಿದ್ದಾರೆ ಎನಿಸುತ್ತದೆ. ಜನರು ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಮಯದಲ್ಲಿ ಅವರು ರಾಜಕೀಯ ಘೋಷಣೆ ಮಾಡಿರುವುದು ಒಳ್ಳೆಯದು.'' - ರಮೇಶ್ ಅರವಿಂದ್, ನಟ, ನಿರ್ದೇಶಕ

ಹೊಸ ಆಲೋಚನೆ ಇರುವವರು ರಾಜಕೀಯಕ್ಕೆ ಬರಬೇಕು - ದೇವರಾಜ್

''ಬಹಳ ಸಂತೋಷ ಆಯ್ತು. ಚಿತ್ರರಂಗದ ಮುಂಚುಣಿಯಲ್ಲಿರುವ ಒಬ್ಬ ನಟ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವುದು ಒಳ್ಳೆಯ ವಿಷಯ. ಹೊಸ ಆಲೋಚನೆ ಇರುವವರು ರಾಜಕೀಯಕ್ಕೆ ಬರುವುದು ಒಳ್ಳೆಯದು. ನನಗೆ ಕೂಡ ಅವರು ಯಾವ ಪಕ್ಷ ಸೇರಿತ್ತಾರೆ? ಮತ್ತು ಯಾವ ರೀತಿಯ ನಿಯಮಗಳನ್ನು ತರುತ್ತಾರೆ ಎನ್ನುವ ಕುತೂಹಲ ಇದೆ.'' - ದೇವರಾಜ್, ನಟ

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

ರಜನಿ ಅವರ ಸಾಹಸಕ್ಕೆ ಒಳ್ಳೆಯದಾಗಲಿ - ತಾರ

''ಹೊಸ ಪಕ್ಷ ಕಟ್ಟುವುದರ ಜೊತೆಗೆ ರಾಜಕೀಯ ಪ್ರವೇಶವನ್ನು ರಜನಿಕಾಂತ್ ಅವರು ಮಾಡಿದ್ದಾರೆ. ಈ ರೀತಿಯ ಸಾಹಸವನ್ನು ಕನ್ನಡದಲ್ಲಿ ನಟ ಉಪೇಂದ್ರ ಅವರು ಮಾಡಿದ್ದಾರೆ. ರಜನಿ ಅವರ ಸಾಹಸಕ್ಕೆ ಒಳ್ಳೆಯದಾಗಲಿ.'' - ತಾರ, ನಟಿ, ವಿಧಾನ ಪರಿಷತ್ ಸದಸ್ಯೆ

ತಮಿಳು ಚಿತ್ರರಂಗ ಸಾಥ್

ಕರ್ನಾಟಕದಲ್ಲಿ ಈ ರೀತಿ ಆದರೆ ತಮಿಳುನಾಡಿನ ಚಿತ್ರರಂಗದಲ್ಲಿ ಕೂಡ ರಜನಿ ಅವರಿಗೆ ಒಳ್ಳೆಯ ಬೆಂಬಲ ಸಿಕ್ಕಿದೆ. ಕಾಲಿವುಡ್ ಅನೇಕ ಸ್ಟಾರ್ ಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

English summary
Kannada actors Ramesh Aravind, Devaraj, and Thara Anuradha Spoke about Superstar Rajinikanth's political entry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X