»   » ಹೊಸ ವರ್ಷಕ್ಕೆ ಸ್ವಾಗತ, ಸ್ವಮೇಕ್‌ಗೆ ಜೈ ಎನ್ನುವ ಸದ್ದು

ಹೊಸ ವರ್ಷಕ್ಕೆ ಸ್ವಾಗತ, ಸ್ವಮೇಕ್‌ಗೆ ಜೈ ಎನ್ನುವ ಸದ್ದು

Posted By: Staff
Subscribe to Filmibeat Kannada

ಒಮ್ಮೆಗೇ ಆರು ಸಿನಿಮಾ!
ಇದು ರಾಮೋಜಿ ವೆಂಚರ್‌. ದಿನೇಶ್‌ಬಾಬು ನಿರ್ದೇಶನದ 'ಚಿತ್ರ" ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿನ ಬೊಕ್ಕಸದ ರಹಸ್ಯ ಕಂಡುಕೊಂಡಿರುವ ರಾಮೋಜಿ, ಈ ಸಾರಿ ಅರ್ಧ ಡಜನ್‌ ಚಿತ್ರಗಳನ್ನು ಒಮ್ಮೆಗೇ ಕೈಗೆತ್ತಿಕೊಂಡಿದ್ದಾರೆ. ಅಲ್ಲಿಗೆ ಹೊಸ ವರ್ಷದ ಆರಂಭದಲ್ಲೇ 6 ರಿಮೇಕ್‌ ಚಿತ್ರಗಳು ತೆಲುಗು ನಿರ್ಮಾಪಕನ ಮೂಲಕ ಸ್ಯಾಂಡಲ್‌ವುಡ್‌ಗೆ ಜಮೆಯಾದಂತಾಯಿತು. ಜೈ ಭುವನೇಶ್ವರಿ!
ರಾಮೋಜಿ ಅವರ ಆರು ಸಿನಿಮಾಗಳಲ್ಲೊಂದಕ್ಕೆ, ದಿನೇಶ್‌ಬಾಬು ಗರ್ವಭಂಗ ಖ್ಯಾತಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹೀರೋ ಆಗಿ ಆಯ್ಕೆಯಾಗಿದ್ದಾರೆ. ತೆಲುಗಿನಲ್ಲಿ ಬೊಂಬಾಟ್‌ ಹಿಟ್‌ ಆದ '"ಎವುರ್ರಾ ರೌಡಿ?" ಚಿತ್ರದ ಕನ್ನಡ ರೂಪಕ್ಕೆ ರಾಕ್‌ಲೈನ್‌ ನಾಯಕ. ಉಷಾಕಿರಣ್‌ ಮೂವೀಸ್‌ ಲಾಂಛನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಮುಹೂರ್ತ ಕಳೆದ ವಾರ ನಡೆಯಿತು. ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ 'ಪ್ರೊಡಕ್ಷನ್‌ ನಂಬರ್‌ 6."

ಯಾವನೋ ರೌಡಿ ಎನ್ನುವುದು ಎವುರ್ರಾ ರೌಡಿ ಕನ್ನಡ ರೂಪ. ಅಂದರೆ ಇದು ರೌಡಿಯ ಅಥವಾ ರೌಡಿಸಂ ಸುತ್ತ ಸುತ್ತುವ ಕಥೆ. ರಾಕ್‌ಲೈನ್‌ಗೆ ಹೇಳಿ ಮಾಡಿಸಿದ ಪಾತ್ರವಿದು ಎನ್ನುತ್ತದೆ ರಾಮೋಜಿ ಬಳಗ. ಅಂದಹಾಗೆ, ಗ್ರಾಮದೇವತೆಯ ಭಕ್ತ ಸಾಯಿಪ್ರಕಾಶ್‌ ಈ ಸಿನಿಮಾದ ನಿರ್ದೇಶಕ.

English summary
Rockline venkatesh becomes a hero with a remake of Evurra Rowdi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada