For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರಾಗಿ ರಾಮು: ದೇವರಾಜ್ ಜೊತೆ ಮೊದಲ ಸಿನಿಮಾ, ಪ್ರಜ್ವಲ್ ಜೊತೆ ಕೊನೆ ಸಿನಿಮಾ

  |

  ಖ್ಯಾತ ನಿರ್ಮಾಪಕ ರಾಮು ಕೋವಿಡ್‌ನಿಂದಾಗಿ ಇಂದು ನಿಧನವಾಗಿದ್ದಾರೆ. ರಾಮು ಅಗಲಿಕೆಗೆ ಕನ್ನಡದ ಖ್ಯಾತ ಸಿನಿಮಾ ಸೆಲೆಬ್ರಿಟಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

  ಮಾಲಾಶ್ರೀಗೆ ಬೆಂಬಲವಾಗಿ ನಿಲ್ತೀವಿ ಎಂದ‌ ದೇವರಾಜ್ | Filmibeat Kannada

  ಬಹಳ ಕಿರಿಯ ವಯಸ್ಸಿಗೆ ಸಿನಿಮಾ ನಿರ್ಮಾಪಕರಾದ ರಾಮು, ಮೊದಲಿಗೆ ನಿರ್ಮಾಣ ಮಾಡಿದ್ದು ದೇವರಾಜ್ ನಟನೆಯ 'ಗೋಲಿಬಾರ್' ಸಿನಿಮಾ. ಗೋಲಿಬಾರ್ ಸಿನಿಮಾ ನಿರ್ಮಾಣ ಮಾಡಿದಾಗ ಅವರಿಗಿನ್ನೂ 21 ವರ್ಷ ವಯಸ್ಸು.

  'ಗೋಲಿಬಾರ್' ಯಶಸ್ವಿ ಆಗುತ್ತಿದ್ದಂತೆ ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ರೂಪಾಯಿ ಬಜೆಟ್ ಹಾಕಿ 'ಲಾಕಪ್‌ ಡೆತ್' ಸಿನಿಮಾ ನಿರ್ಮಾಣ ಮಾಡಿದರು ರಾಮು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಕನ್ನಡದಲ್ಲಿ ಸಿನಿಮಾ ನಿರ್ಮಾಣದ ದಿಕ್ಕನ್ನೆ ಬದಲಿಸಿದರು ರಾಮು.

  ಇದೀಗ ರಾಮು ಕೊನೆ ಉಸಿರೆಳಿದಿದ್ದಾರೆ. ವಿಚಿತ್ರವೆಂದರೆ ದೇವರಾಜ್ ಸಿನಿಮಾದ ನಿರ್ಮಾಣದೊಂದಿಗೆ ಸಿನಿಮಾ ವೃತ್ತಿ ಆರಂಭಿಸಿದ್ದ ರಾಮು ಇದೀಗ ನಿರ್ಮಾಣ ಮಾಡಿರುವ ಕೊನೆಯ ಸಿನಿಮಾ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ನಟಿಸಿರುವ 'ಅರ್ಜುನ್ ಗೌಡ'.

  ರಾಮು ನಿರ್ಮಾಣ ಮಾಡಿದ ಕೊನೆಯ ಸಿನಿಮಾ 'ಅರ್ಜುನ್ ಗೌಡ'. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ತಯಾರಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗುವ ಮುನ್ನ ರಾಮು ಎಲ್ಲರನ್ನೂ ಅಗಲಿ ಹೊರಟಿದ್ದಾರೆ.

  ರಾಮು ಅಗಲಿಕೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ದೇವರಾಜ್, 'ನನ್ನದು ರಾಮು ಅವರದ್ದು 30 ವರ್ಷಗಳ ಗೆಳೆತನ. ಮಾಲಾಶ್ರೀ ಸಹ ನನಗೆ ಒಳ್ಳೆಯ ಗೆಳತಿ. ರಾಮು ಒಬ್ಬ ಅದ್ಭುತವಾದ ನಿರ್ಮಾಪಕ. ಪ್ರಜ್ವಲ್ ಸಹ 'ಅರ್ಜುನ್ ಗೌಡ' ಸಿನಿಮಾ ಬಗ್ಗೆ ಮಾತನಾಡುತ್ತಾ, ರಾಮು ಬಹಳ ರಿಚ್ ಆಗಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದ್ದ'' ಎಂದಿದ್ದಾರೆ ದೇವರಾಜ್.

  'ಅರ್ಜುನ್ ಗೌಡ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳನ್ನು ರಾಮು ಇಟ್ಟುಕೊಂಡಿದ್ದ. ಎರಡು ತಿಂಗಳ ಹಿಂದೆ ಸಿನಿಮಾ ಬಗ್ಗೆ ಪ್ರಜ್ವಲ್ ಜೊತೆ ಮಾತನಾಡಲು ಮನೆಗೆ ಬಂದಿದ್ದಾಗ ನಾನು ಭೇಟಿಯಾಗಿದ್ದೆ. ಅದೇ ನನ್ನ-ಅವನ ಕೊನೆಯ ಭೇಟಿ' ಎಂದು ಕೊನೆಯ ಬಾರಿ ರಾಮುರನ್ನು ಭೇಟಿಯಾದ ಸಂದರ್ಭ ನೆನಪು ಮಾಡಿಕೊಂಡರು ದೇವರಾಜ್.

  English summary
  Producer Ramu started his movie journey as producer with actor Devraj. His last produced movie is Prajwal Devraj's Arjun Gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X