»   » ರಮ್ಯಾ ಜೊತೆ ರೊಮಾನ್ಸ್ ಶುರುವಿಟ್ಟ ನಟ ಪ್ರಜ್ವಲ್

ರಮ್ಯಾ ಜೊತೆ ರೊಮಾನ್ಸ್ ಶುರುವಿಟ್ಟ ನಟ ಪ್ರಜ್ವಲ್

Posted By:
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾ 'ದೊಡ್ಡ' ನಾಯಕಿಯಾಗಿ ತಮಗಿಂತ ತುಂಬಾ ಕಿರಿಯ ನಟರೊಬ್ಬರ ಚಿತ್ರದಲ್ಲಿ ನಟಿಸಲಿರುವುದು ಪಕ್ಕಾ ಆಗಿದೆ. ರಮ್ಯಾ ಜೊತೆ ತೆರೆಯ ಮೇಲೆ ರೊಮಾನ್ಸ್ ಮಾಡಲಿರುವ ಕಿರಿಯ ವಯಸ್ಸಿನ ನಟ ಬೇರಾರೂ ಅಲ್ಲ, ಪ್ರಜ್ವಲ್ ದೇವರಾಜ್. ಸೋಮನಾಥ ಪಾಟೀಲ್ ನಿರ್ದೇಶನದ 'ದಿಲ್ ಕಾ ರಾಜಾ' ಚಿತ್ರದ ನಾಯಕಿ ಪಾತ್ರ ರಮ್ಯಾ ಪಾಲಾಗಿದೆ.

ಚಿತ್ರದ ಮುಹೂರ್ತದಂದು ನಿರ್ದೇಶಕ ಸೋಮನಾಥ್ ಪಾಟೀಲ್, ತಮ್ಮ ದಿಲ್ ಕಾ ರಾಜಾ ಚಿತ್ರಕ್ಕೆ 'ದೊಡ್ಡ' ನಟಿಯೊಬ್ಬರು ನಾಯಕಿಯಾಗಲಿದ್ದಾರೆ ಎಂದಿದ್ದರು. ಅವರು ಹೇಳಿದ್ದ 'ದೊಡ್ಡ' ಎಂಬ ಪದ ಸರಿಯಾಗಿದೆ ಎಂಬುದು ಈಗ ಎಲ್ಲರಿಗೂ ಅರ್ಥವಾಗುತ್ತಿದೆ. ರಮ್ಯಾ ಎಲ್ಲಾ ದೃಷ್ಟಿಯಿಂದಲೂ 'ದೊಡ್ಡ'ವರೇ ಬಿಡಿ!. ಪ್ರಜ್ವಲ್ ಅವರಿಗೆ ಬಹುಶಃ 'ಆಕಾಶಕ್ಕೆ ಬರೀ ಆರೇ ಗೇಣು' ಎಂಬಂತಾಗಿರಬಹುದು.

ಈ ಮೊದಲು ರಮ್ಯಾ ತಮಗಿಂತ ವಯಸ್ಸಿನಲ್ಲಿ ಬಹಳಷ್ಟು ಕಿರಿಯ ನಟರ ಜೊತೆ ನಟಿಸಿದ್ದಾರೆ. ಲಕ್ಕಿ ಚಿತ್ರದಲ್ಲಿ ಯಶ್, ಮೀರಾ ಮಾಧವ ರಾಘವ ಹಾಗೂ ಕೋಡಿ ರಾಮಕೃಷ್ಣರ ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ, ಯೋಗಿ ಜೊತೆ ಸಿದ್ಲಿಂಗುವಿನಲ್ಲಿ, ಚಿರಂಜೀವಿ ಸರ್ಜಾ ಜೊತೆ ದಂಡಂ ದಶಗುಣಂ ಚಿತ್ರದಲ್ಲಿ ಹೀಗೆ ಪಟ್ಟಿ ಸಾಕಷ್ಟು ದೊಡ್ಡದಿದೆ.

ಈ ನಟರುಗಳೆಲ್ಲಾ ವಯಸ್ಸಿನಲ್ಲಿ ಮಾತ್ರವಲ್ಲದೇ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು ಕೂಡ ರಮ್ಯಾ ಬಂದ ನಂತರವೇ. ಹೀಗಾಗಿ ಈ ನಟರ ಜೊತೆ ಜೋಡಿಯಾದಾಗ ರಮ್ಯಾರಿಗೆ 'ಸೀನಿಯರ್ ನಟಿ' ಪಟ್ಟ ಕಟ್ಟಿಟ್ಟ ಬುತ್ತಿ. ಈ ನಡುವೆ ರಮ್ಯಾ ಸಾಕಷ್ಟು ನವನಟರ ಚಿತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರ ಗಮನಕ್ಕೆ ಬರುತ್ತಿರುವ ವಿಷಯ. ಆಗಾಗ ಸ್ಟಾರ್ ನಟರ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಂತೂ ಇದ್ದೇ ಇದೆ.

ಅಂತೂ ಪ್ರಜ್ವಲ್ ಯಾರ ದಿಲ್ ಕಾ ರಾಜಾ ಎಂಬುದಕ್ಕೆ ಉತ್ತರ ಸಿಕ್ಕಿದೆ. ಪ್ರಜ್ವಲ್ ದಿಲ್ ರಾಣಿಯಾಗಿ ರಮ್ಯಾ ಡ್ಯುಯೆಟ್ ಹಾಡಲಿದ್ದಾರೆ ಎಂಬುದು ಖಾತ್ರಯಾಗುತ್ತಿದ್ದಂತೆ ಈ ಚಿತ್ರದ ಚಿತ್ರೀಕರಣ ಬರುವ ತಿಂಗಳು, ಆಗಸ್ಟ್ 8, 2012 ಕ್ಕೆ ಎಂಬುದೂ ಕೂಡ ಪಕ್ಕಾ ಆಗಿದೆ. ಈ ಚಿತ್ರವನ್ನು ನಿರ್ಮಿಸಲಿರುವವರು ವಿಶ್ವನಾಥ್ ರೆಡ್ಡಿ ಹಾಗೂ ಗಂಗಾ ಆರ್ ಪಾಟೀಲ್. ಅಂದಹಾಗೆ, ಪ್ರಜ್ವಲ್ ಅಭಿನಯದ ಚಿತ್ರ 'ಸಾಗರ್' ಶಿಘ್ರದಲ್ಲೇ ಬಿಡುಗಡೆಯಾಗಲಿದೆ. (ಒನ್ ಇಂಡಿಯಾ ಕನ್ನಡ)

English summary
Golden Girl Ramya Acts in Prajwal Devaraj upcoming movie 'Dil Ka Raaja'. This movie to direct by Somanatha Patil and produce by Vishwanath Patil and Ganga R Patil. shooting starts from next month 1st week, on August 8, 2012.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada