For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ರಮ್ಯಾ

  |

  ನಟಿ ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಬಳಿಕ ರಾಜಕಾರಣದಿಂದಲೂ ದೂರಾಗಿಬಿಟ್ಟಿದ್ದಾರೆ.

  ಲೋಕಸಭೆ ಚುನಾವಣೆ ಬಳಿಕ ತಮ್ಮ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದ ರಮ್ಯಾ 'ಸಾಮಾಜಿಕ ಜೀವನ'ದಿಂದ ದೂರ ಉಳಿದಿದ್ದರು. ಆ ನಂತರ ಹಠಾತ್ತನೇ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು.

  ಕೊನೆಯ ಕನ್ನಡ ಸಿನಿಮಾ ನೋಡಿದ ಬಗ್ಗೆ ರಮ್ಯಾ ಹೇಳಿದ್ದೇನು? ಮೋಹಕ ತಾರೆ ಲಿಸ್ಟ್ ನಲ್ಲಿರುವ ಸಿನಿಮಾಗಳಿವುಕೊನೆಯ ಕನ್ನಡ ಸಿನಿಮಾ ನೋಡಿದ ಬಗ್ಗೆ ರಮ್ಯಾ ಹೇಳಿದ್ದೇನು? ಮೋಹಕ ತಾರೆ ಲಿಸ್ಟ್ ನಲ್ಲಿರುವ ಸಿನಿಮಾಗಳಿವು

  ಆದರೆ ಈಗ ಮತ್ತೆ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ನಟಿ ರಮ್ಯಾ. ಹೌದು, ಅವರ ಟ್ವಿಟ್ಟರ್, ಇನ್‌ಸ್ಟಾಗ್ರಾಂ ಖಾತೆಗಳನ್ನು ನಟಿ ರಮ್ಯಾ ನಿಷ್ಕ್ರಿಯಗೊಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

  ರಮ್ಯಾ ಅವರು ಮೊದಲಿನಷ್ಟು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಿಲ್ಲವಾದರೂ ಆಗಾಗ್ಗೆ ಪ್ರಾಣಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ತಾವು ಮಾಂಸಾಹಾರ ತ್ಯಜಿಸಿದ್ದರ ಬಗ್ಗೆ ಬರೆದುಕೊಂಡಿದ್ದರು. ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ದಿಶಾ ರವಿಗೆ ಬೆಂಬಲ ನೀಡಿದ್ದರು. ನಟಿ ಕಂಗನಾ ಟ್ವೀಟ್‌ಗೆ ಟಾಂಗ್ ನೀಡಿದ್ದರು ರಮ್ಯಾ. ಬಾಲಿವುಡ್‌ಗೆ ಬೆನ್ನುಮೂಳೆ ಇಲ್ಲವೆಂದು ಟ್ವೀಟ್ ಮಾಡಿದ್ದರು. ಆದರೆ ಈಗ ಏಕಾ-ಏಕಿ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ.

  2016 ರಲ್ಲಿ ಬಿಡುಗಡೆ ಆದ 'ನಾಗರಹಾವು' ಸಿನಿಮಾವೇ ರಮ್ಯಾ ನಟಿಸಿದ್ದ ಕೊನೆಯ ಸಿನಿಮಾ. ಆ ನಂತರ ರಮ್ಯಾ ಪ್ರೊಡಕ್ಷನ್ ಹೌಸ್ ಪ್ರಾರಂಭಿಸುತ್ತಾರೆ ಎನ್ನಲಾಗಿತ್ತು ಆದರೆ ಅದಾವುದನ್ನೂ ಮಾಡದೆ ರಾಜಕೀಯದಲ್ಲೂ ಸಕ್ರಿಯರಾಗಿರದೆ ಎಲ್ಲದರಿಂದ ದೂರ ಉಳಿದುಬಿಟ್ಟಿದ್ದಾರೆ ಈ ನಟಿ.

  ತೆಲುಗಿನಲ್ಲಿ ಹಾರುತ್ತಿದೆ ಕನ್ನಡ ನಿರ್ದೇಶಕನ ಕೀರ್ತಿ ಪತಾಕೆ | Filmibeat Kannada

  ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವ ರಮ್ಯಾರ ಈ ನಡೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

  English summary
  Actress Ramya again De-Activated her twitter and Instagram accounts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X