»   » ಅಭಿಮಾನಿಗಳಿಗೆ ಬಕೆಟ್ ತಣ್ಣೀರೆರಚಿದ ನಟಿ ರಮ್ಯಾ

ಅಭಿಮಾನಿಗಳಿಗೆ ಬಕೆಟ್ ತಣ್ಣೀರೆರಚಿದ ನಟಿ ರಮ್ಯಾ

Posted By:
Subscribe to Filmibeat Kannada

''ಅಭಿಮಾನಿಗಳೇ ದೇವರು'' ಅಂತ ನಟಸಾರ್ವಭೌಮ ಡಾ.ರಾಜ್ ಕುಮಾರ್ ಹೇಳುತ್ತಿದ್ದರು. ನಟ-ನಟಿಯರನ್ನ ಆರಾಧ್ಯದೈವದಂತೆ ಪೂಜಿಸುವ ಅಭಿಮಾನಿಗಳಿಗೆ ಸೆಲೆಬ್ರಿಟಿಗಳು ಕೊಡುವ ಪ್ರಾಮುಖ್ಯತೆ ಅಷ್ಟರಲ್ಲೇ ಇದೆ.

ತಮ್ಮ ಹುಟ್ಟುಹಬ್ಬ, ತಮ್ಮನ್ನ ಹೆತ್ತ ತಂದೆ ತಾಯಿ ಹುಟ್ಟುಹಬ್ಬಗಳನ್ನ ಅಷ್ಟು ಚೆನ್ನಾಗಿ ಮಾಡುತ್ತಾರೋ ಇಲ್ಲವೋ, ಆದರೆ ತಮ್ಮ ಅಚ್ಚುಮೆಚ್ಚಿನ ಸ್ಟಾರ್ ಗಳ ಹುಟ್ಟುಹಬ್ಬವನ್ನು ಮಾತ್ರ ಅದ್ದೂರಿಯಾಗಿ ಆಚರಿಸುತ್ತಾರೆ ಅಭಿಮಾನಿಗಳು. ಮೊನ್ನೆಯಷ್ಟೇ ನಡೆದ ರಮ್ಯಾ ಹುಟ್ಟುಹಬ್ಬವನ್ನೇ ನೆನಪಿಸಿಕೊಳ್ಳಿ. [ಲಕ್ಕಿ ಸ್ಟಾರ್ ರಮ್ಯಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಚಿತ್ರಾನ್ನ!]

Ramya aka Divya Spandana disappoints her fans on her 32nd birthday1

ಎಲ್ಲರಿಗಿಂತ ಕೊಂಚ ವಿಭಿನ್ನವಾಗಿ 'ರಮ್ಯಾ' ಕಟ್ಟಾ ಅಭಿಮಾನಿಗಳು ಸ್ಯಾಂಡಲ್ ವುಡ್ ಕ್ವೀನ್ ಹುಟ್ಟುಹಬ್ಬವನ್ನು ಆಚರಿಸಿದರು. ಟ್ವಿಟ್ಟರ್ ನಲ್ಲಿ ರಸಪ್ರಶ್ನೆ ಕಾರ್ಯಕ್ರಮ, ವಿದ್ಯಾರಣ್ಯಪುರದಲ್ಲಿ ಕ್ರಿಕೆಟ್ ಪಂದ್ಯವಳಿಯನ್ನು ಆಯೋಜಿಸಿ ರಮ್ಯಾ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಿದ್ರು ಅವರ ಫ್ಯಾನ್ಸ್. [ಎಕ್ಸ್ ಕ್ಯೂಸ್ ಮೀ ಇದು ರಮ್ಯಾ ಅಭಿಮಾನಿಗಳಿಗೆ ಮಾತ್ರ]

ರಮ್ಯಾ ಮೇಡಂಗೆ ವಿಶ್ ಮಾಡುವುದಕ್ಕಂತಲೇ ಟ್ವಿಟ್ಟರ್ ನಲ್ಲಿ ಗ್ರೀಟಿಂಗ್ ಅಭಿಯಾನ ಕೂಡ ಶುರುವಾಗಿತ್ತು. ರಮ್ಯಾ ಹೆಸರಲ್ಲಿ ಇಷ್ಟೆಲ್ಲಾ ಮಾಡಿದರೂ ರಮ್ಯಾ ಬೆಂಗಳೂರಿಗೆ ಬರ್ಲಿಲ್ಲ. ಹೋಗ್ಲಿ ಟ್ವಿಟ್ಟರ್ ನಲ್ಲಾಗಲೀ ಅಥವಾ ಫೇಸ್ ಬುಕ್ ನಲ್ಲಾಗಲೀ ಇಲ್ಲಿವರೆಗೂ ಲಕ್ಕಿ ಸ್ಟಾರ್ ಕಡೆಯಿಂದ ಒಂದು ರಿಪ್ಲೈ ಬಂದಿಲ್ಲ. ತಮ್ಮ ಅಭಿಮಾನಿಗಳು ಮೆರೆದ ಅಭಿಮಾನದ ಪರಾಕಾಷ್ಠೆಗೆ ಕನಿಷ್ಟ ಥ್ಯಾಂಕ್ಸ್ ಅಂತ ಕೂಡ ರಮ್ಯಾ ಹೇಳಿಲ್ಲ. [ಬ್ಯಾಟ್ ಹಿಡಿದು ಮೈದಾನಕ್ಕಿಳಿದ ರಮ್ಯಾ ಅಭಿಮಾನಿಗಳು!]

Ramya aka Divya Spandana disappoints her fans on her 32nd birthday2

ರಮ್ಯಾ ಲಂಡನ್ ನಲ್ಲಿದ್ದಾರೋ, ಇಲ್ಲಾ ನ್ಯೂಯಾರ್ಕ್ ನಲ್ಲಿದ್ದಾರೋ ಅನ್ನುವುದು ಅವರ ಅಭಿಮಾನಿಗಳಿಗೇ ಗೊತ್ತಿಲ್ಲ. ನ್ಯೂಯಾರ್ಕ್ ನ ಸಮಾರಂಭವೊಂದರಲ್ಲಿ ಕ್ಲಿಕ್ ಮಾಡಿದ ಫೋಟೋವನ್ನು ಟ್ವೀಟ್ ಮಾಡಿದ್ದು ಬಿಟ್ಟರೆ ರಮ್ಯಾ ಈಗೆಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ಲಂಡನ್ ನಲ್ಲಿ ರಾಜ್ಯಶಾಸ್ತ್ರ ಪದವಿ ಓದ್ತಿದ್ದಾರೆ ಅಂತ ಹೇಳುವ ರಮ್ಯಾ ಆಪ್ತ ವಲಯ ಯಾವ ವಿಶ್ವವಿದ್ಯಾನಿಲಯದಲ್ಲಿ ಅಂತ ಬಾಯ್ಬಿಟ್ಟಿಲ್ಲ. [ಗೌಡರ ಮನೆ ಸೊಸೆಯಾಗುವರೇ ಲಕ್ಕಿ ಸ್ಟಾರ್ ರಮ್ಯಾ?]

ಇದೆಲ್ಲದರ ನಡುವೆ ಗೌಡರ ಮನೆ ಸೊಸೆಯಾಗುವುದಕ್ಕೆ ತಯಾರಿ ನಡೆಸುತ್ತಿರುವ ರಮ್ಯಾ, ಗೌಡರ ಹುಡುಗನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಅನ್ನುವ ಸುದ್ದಿಯಿದೆ. ರಮ್ಯಾ ಎಲ್ಲೇ ಇದ್ರೂ, ಹೇಗೇ ಇದ್ರೂ, ಅವರ ಮೇಲಿನ ಅಭಿಮಾನಕ್ಕೋಸ್ಕರ ಲಕ್ಕಿ ಸ್ಟಾರ್ ಹುಟ್ಟುಹಬ್ಬಕ್ಕೆ ಒಂದು ತಿಂಗಳ ಹಿಂದಿನಿಂದ ತಲೆಕೆಡಿಸಿಕೊಂಡಿದ್ದ ಅಭಿಮಾನಿಗಳ ಪ್ರೀತಿಗೆ ಬಕೆಟ್ ತಣ್ಣೀರೆರಚಿದ್ದಾರೆ ಸ್ಯಾಂಡಲ್ ವುಡ್ ನ ಸುರಸಂದರಾಂಗಿ ರಮ್ಯಾ. (ಫಿಲ್ಮಿಬೀಟ್ ಕನ್ನಡ)

English summary
Sandalwood Queen Ramya aka Divya Spandana has ditched her fans on her 32nd Birthday (November 29th). Ramya Fans had organised a Quiz Competiton and Cricket Tournament on behalf of the Actress Birthday. But neither ramya turned up for those events nor replied for the thousands of wishes by her fans, which is very disappointing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada