»   » ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ

ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ

Posted By:
Subscribe to Filmibeat Kannada

ಲಕ್ಕಿ ಸ್ಟಾರ್ ರಮ್ಯಾ ಇಂದು ವಾಪಸ್ಸಾಗುತ್ತಾರೆ, ನಾಳೆ ಬರ್ತಾರೆ, ಮುಂದಿನ ತಿಂಗಳು ಇಲ್ಲಿರ್ತಾರೆ, ಅಲ್ಲಿದಾರೆ, ಇಲ್ಲಿದ್ದಾರೆ ಅಂತ ವರ್ಷದಿಂದಲೂ ಬರೀ ಗುಲ್ಲು, ಗುಲ್ಲೋ ಗುಲ್ಲು.

ತಮ್ಮ ಪ್ರೀತಿಯ ಅಭಿಮಾನಿಗಳಿಗೆ ರಮ್ಯಾ ಸರ್ ಪ್ರೈಸ್ ನೀಡಿದ್ದು ನಿನ್ನೆ, ಅಂದ್ರೆ ಬುಧವಾರ (ಜುಲೈ 1) ಸಂಜೆ. ಇದು ಮತ್ತೆ ಗಾಸಿಪ್ ಸುದ್ದಿ ಅಂದುಕೊಳ್ಳಬೇಡಿ. 100% ನಿಜ. ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ಒನ್ ಮಾಲ್ ಗೆ ನಿನ್ನೆ ನಟಿ ರಮ್ಯಾ ಭೇಟಿ ಕೊಟ್ಟಿದ್ದರು. ಆಗ ಸಿಕ್ಕಿಬಿದ್ದರು, ಹಹಾ!

Ramya aka Divya Spandana in Bengaluru

ಮೇಕಪ್ ಧರಿಸದೆ ಸೀದಾ ಸಾದಾ ಉಡುಪಿನಲ್ಲಿ ತುಂಬಾ ಹೋಮ್ಲಿಯಾಗಿ ರಮ್ಯಾ ಎಲ್ಲರ ಕಣ್ಣಿಗೂ ಬಿದ್ದರು. ಆಗ, ಮಾಲ್ ನಲ್ಲಿ ರಮ್ಯಾನನ್ನ ನೋಡಿದ ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಅಂತಹ ಒಂದು ಫೋಟೋ ಇಲ್ಲಿದೆ. [ಬ್ರೇಕಿಂಗ್ ನ್ಯೂಸ್ ; ತಾಯ್ನಾಡಿಗೆ ಮರಳಿದ ರಮ್ಯಾ]

ಅಸಲಿಗೆ ಏಪ್ರಿಲ್ ನಲ್ಲೇ ಬೆಂಗಳೂರಿಗೆ ಬರುತ್ತೇನೆ ಅಂತ ರಮ್ಯಾ ಟ್ವಿಟ್ಟರ್ ನಲ್ಲಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು. ಆದ್ರೆ, ಜುಲೈ ತಿಂಗಳಲ್ಲಿ ಅಭಿಮಾನಿಗಳ ಮುಂದೆ ಸಿಲಿಕಾನ್ ಸಿಟಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.[ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!]

ಮೂಲಗಳ ಪ್ರಕಾರ ರಮ್ಯಾ ಬೆಂಗಳೂರಿಗೆ ಬಂದು ತಿಂಗಳು ಕಳೆದಿದೆ. ಆದ್ರೆ, ಅವರಿಗೆ ಅವರದ್ದೇ ಆದ ಕೆಲ ಸಮಯ ಅನಿವಾರ್ಯವಾಗಿದ್ದರಿಂದ ಎಲ್ಲೂ ಹೊರಗೆ ಬಂದಿರಲಿಲ್ಲ.

ಅದೇನೇ ಇರಲಿ, ರಮ್ಯಾ ಇಲ್ಲಿಗೆ ಬಂದಾಯ್ತು. ಎಲ್ಲರ ಮುಂದೆ ನಿಂತಾಯ್ತು. ಮತ್ತೆ ಬಣ್ಣ ಹಚ್ಚಲಿ ಅಂತ ಈಗ ಎಲ್ಲರೂ ಕೇಳುವ ಪ್ರಶ್ನೆ. ಅದಕ್ಕೆ ರಮ್ಯಾ ಮೇಡಂ ಉತ್ತರ ಏನು ಅನ್ನೋದೇ ಸಸ್ಪೆನ್ಸ್.

English summary
Sandalwood Queen, Kannada Actress, Congress Politician Ramya aka Divya Spandana spotted in Bengaluru mall, One mall near Trinity circle in the evening of Wednesday, 1st July. Welcome Back Ramya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada