»   » ತವರಲ್ಲಿ ರಮ್ಯಾ; ಟ್ವಿಟ್ಟರ್ ನಲ್ಲಿ ಭರಪೂರ ಸ್ವಾಗತ

ತವರಲ್ಲಿ ರಮ್ಯಾ; ಟ್ವಿಟ್ಟರ್ ನಲ್ಲಿ ಭರಪೂರ ಸ್ವಾಗತ

Posted By:
Subscribe to Filmibeat Kannada

ರಮ್ಯಾ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ನಿನ್ನೆ (ಜುಲೈ 1) ಸಂಜೆ ಬೆಂಗಳೂರಿನ ಟ್ರಿನಿಟಿ ಸರ್ಕಲ್ ನಲ್ಲಿರುವ ಒನ್ ಮಾಲ್ ನಲ್ಲಿ ಶಾಪಿಂಗ್ ಮಾಡುವಾಗ ಅಭಿಮಾನಿಗಳ ಕಣ್ಣಿಗೆ ರಮ್ಯಾ ಸಿಕ್ಕಿಬಿದ್ದಿದ್ದಾರೆ.

ಕಾಡ್ಗಿಚ್ಚಿಗಿಂತ ವೇಗವಾಗಿ ಹಬ್ಬಿದ ಈ ಸುದ್ದಿ ಈಗ ಟ್ವಿಟ್ಟರ್ ನಲ್ಲಿ ಸಂಚಲನ ಹುಟ್ಟುಹಾಕಿದೆ. #WelcomeBackRamya ಅನ್ನುವ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ಲೋಕದಲ್ಲಿ ಟ್ರೆಂಡಿಂಗ್ ಆಗುತ್ತಿದೆ. [ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ]

ವರ್ಷದ ಬಳಿಗೆ ವಾಪಸ್ಸಾಗಿರುವ ರಮ್ಯಾಗೆ ಸುಸ್ವಾಗತ ಕೋರಿ ಸಾವಿರಾರು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ. [ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!]

ನೂರು ಬಾರಿ ಟ್ವೀಟ್..!

ರಮ್ಯಾಗೆ ಕ್ರೇಜಿ ಅಭಿಮಾನಿಗಳು ಇರ್ತಾರೆ ಅನ್ನೋದಕ್ಕೆ ಇಲ್ಲಿದೆ ನೋಡಿ ಬೆಸ್ಟ್ ಎಕ್ಸಾಂಪಲ್. ರಮ್ಯಾ ಮರಳಿರುವ ಸುದ್ದಿ ಕೇಳಿ ಫುಲ್ ಖುಷ್ ಆಗಿರುವ ಅಭಿಮಾನಿಯೊಬ್ಬರು #WelcomeBackRamya ಅಂತ ನೂರು ಬಾರಿ ಟ್ವೀಟ್ ಮಾಡಿದ್ದಾರೆ.

ಕ್ಯೂಟ್ ರಮ್ಯಾ.!

ನಟಿ ರಮ್ಯಾ ರನ್ನ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿ ಮಾಡಿರುವ ಟ್ವೀಟ್ ಇದು.

ಹೆಣ್ಮಕ್ಕಳೇ ಸ್ಟ್ರಾಂಗು.!

ನಟಿ ಅಂದಕೂಡಲೆ ಅವರ ಅಭಿಮಾನಿ ಬಳಗದಲ್ಲಿ ಹುಡುಗರೇ ಹೆಚ್ಚು ಇರುತ್ತಾರೆ. ಆದ್ರೆ, ನಟಿ ರಮ್ಯಾ ವಿಷಯದಲ್ಲಿ ಅಭಿಮಾನಿಗಳಾಗಿರುವ ಹುಡುಗಿಯರೇ ಹೆಚ್ಚು.

ಅಭಿಮಾನಿಗಳು ಫುಲ್ ಖುಷ್

ಬೇರೆ ಯಾವ ವಿಷಯಕ್ಕೆ ಇಷ್ಟು ಖುಷಿಯಾಗಿರುತ್ತಿದ್ದರೋ, ಇಲ್ವೋ. ಆದ್ರೆ, ರಮ್ಯಾ ವಾಪಸ್ಸಾಗಿರುವ ಸುದ್ದಿ ಕೇಳಿ ಅಭಿಮಾನಿಗಳ ದಿಲ್ ಖುಷ್ ಆಗಿದೆ.

ರಮ್ಯಾ ಕೆಲಸಕ್ಕೆ ಶ್ಲಾಘನೆ

ರಮ್ಯಾ ಮರಳುತ್ತಿದ್ದಂತೆ, ಅವರು ರಾಜಕಾರಣಿ ಆಗಿ ಮಾಡಿದ ಕೆಲಸಗಳನ್ನ ಶ್ಲಾಘಿಸಿಕೊಂಡ ಅಭಿಮಾನಿಗಳೂ ಇದ್ದಾರೆ.

ಟ್ವಿಟ್ಟರ್ ನಲ್ಲಿ ಸೆನ್ಸೇಷನ್

ಇವೆಲ್ಲಾ ಬರೀ ಸ್ಯಾಂಪಲ್ ಅಷ್ಟೆ. ಇಂತಹ ಸಾವಿರಾರು ಟ್ವೀಟ್ ಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ರಮ್ಯಾ ಮೇಲೆ ಅಭಿಮಾನಿಗಳು ಇಟ್ಟಿರುವ ಬೆಟ್ಟದಷ್ಟು ಪ್ರೀತಿಗೆ ಇದೇ ಸಾಕ್ಷಿ.

English summary
Sandalwood Queen, Kannada Actress, Congress Politician Ramya aka Divya Spandana spotted in Bengaluru yesterday (July 1st). Ramya hardcore fans have taken their twitter account to welcome the Actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada