For Quick Alerts
  ALLOW NOTIFICATIONS  
  For Daily Alerts

  ಒಂದು ಕಾಲದಲ್ಲಿ ಪೈಪೋಟಿಗೆ ಬಿದ್ದಿದ್ದ ರಮ್ಯಾ ಮತ್ತು ರಕ್ಷಿತಾ ಈಗ ಫ್ರೆಂಡ್ಸ್!

  |

  ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದ ನಟಿಯರೆಂದರೆ ಮೂವರು 'ಆರ್‌'ಗಳು. ಸ್ಟಾರ್ ನಟರ ಚಿತ್ರಗಳಲ್ಲಿ ರಮ್ಯಾ, ರಕ್ಷಿತಾ ಮತ್ತು ರಾಧಿಕಾ ಮೂವರಲ್ಲಿ ಒಬ್ಬರು ಇರಲೇಬೇಕು ಎನ್ನುವ ಕಾಲವಿತ್ತು. ಅದರಲ್ಲಿಯೂ ರಮ್ಯಾ ಮತ್ತು ರಕ್ಷಿತಾ ನಡುವೆ ಸ್ಟಾರ್ ವಾರ್ ನಡೆಯುತ್ತಿದೆ ಎಂಬುದು ಸುದ್ದಿಯಾಗಿತ್ತು. ಆ ಸಮಯದಲ್ಲಿ ಬಹುತೇಕ ಸ್ಟಾರ್ ನಟರೊಂದಿಗೆ ಇಬ್ಬರೂ ನಟಿಸಿದ್ದರು. ಅಷ್ಟೇ ಅಲ್ಲ, ಇಬ್ಬರೂ ತಮ್ಮದೇ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದರು.

  KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಇಬ್ಬರೂ ಚಿತ್ರರಂಗದಿಂದ ದೂರವಾಗಿ ಹಲವು ವರ್ಷಗಳೇ ಕಳೆದಿವೆ. ರಮ್ಯಾ ಚಿತ್ರರಂಗಕ್ಕೆ ಮರಳುತ್ತಾರೆ ಎಂಬ ಸುದ್ದಿ ಆಗಾಗ ಹರಡಿದರೂ ಅದಿನ್ನೂ ನಿಜವಾಗಿಲ್ಲ. ರಾಜಕೀಯ ಕ್ಷೇತ್ರದಲ್ಲಿ ತೊಡಗಿದ್ದ ರಮ್ಯಾ ಈಗ ಅದರಿಂದಲೂ ದೂರವಾಗಿದ್ದಾರೆ. ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ರಕ್ಷಿತಾ ಕೂಡ ರಾಜಕೀಯ ಕ್ಷೇತ್ರಕ್ಕೆ ಬಂದು ನಂತರ ಕಿರುತೆರೆ ಕಾರ್ಯಗಳ ತೀರ್ಪುಗಾರರಾಗಿದ್ದಾರೆ. ಆದರೆ ಇಬ್ಬರಿಗೂ ಇರುವ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಮುಂದೆ ಓದಿ...

  ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ

  ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ

  ರಮ್ಯಾ ಅಥವಾ ರಕ್ಷಿತಾ ಇಬ್ಬರ ನಡುವೆ ನಂಬರ್ ಒನ್ ಯಾರು ಎಂಬ ಪೈಪೋಟಿಯ ಚರ್ಚೆ ಚಿತ್ರರಂಗದಲ್ಲಿ ನಡೆಯುತ್ತಿತ್ತು. ಇಬ್ಬರೂ ಪೈಪೋಟಿಗೆ ಬಿದ್ದವರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅವರ ಸಿನಿಮಾಗಳು ಮಿನಮಮ್ ಗ್ಯಾರಂಟಿಯ ಗೆಲುವನ್ನು ತಂದುಕೊಡುತ್ತಿದ್ದವು. ಈ ಕಾರಣದಿಂದ ಇಬ್ಬರ ನಡುವೆಯೂ ವೃತ್ತಿ ಮಾತ್ಸರ್ಯ ಇರುವುದು ಗುಟ್ಟಾಗೇನೂ ಇರಲಿಲ್ಲ.

  ಫೋಟೊ ತೆಗೆಸಿಕೊಳ್ಳಲು ಇಷ್ಟೆಲ್ಲ ಕಷ್ಟಪಟ್ಟರಂತೆ ಮೋಹಕತಾರೆ ರಮ್ಯಾಫೋಟೊ ತೆಗೆಸಿಕೊಳ್ಳಲು ಇಷ್ಟೆಲ್ಲ ಕಷ್ಟಪಟ್ಟರಂತೆ ಮೋಹಕತಾರೆ ರಮ್ಯಾ

  ಒಟ್ಟಿಗೆ ಸಿನಿಮಾದಲ್ಲಿ ನಟನೆ

  ಒಟ್ಟಿಗೆ ಸಿನಿಮಾದಲ್ಲಿ ನಟನೆ

  ಈ ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಇಬ್ಬರ ಮಧ್ಯೆ ಸ್ನೇಹ ಬೆಳೆಯಲಿಲ್ಲ ಎನ್ನಲಾಗಿತ್ತು. 2006ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ 'ತನನಂ ತನನಂ' ಚಿತ್ರದಲ್ಲಿ ಮೊದಲ ಹಾಗೂ ಕೊನೆಯ ಬಾರಿಗೆ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ತಮಿಳು ನಟ ಶಾಮ್ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

  ಚುನಾವಣೆ ಸ್ಪರ್ಧೆಯ ಸುದ್ದಿ

  ಚುನಾವಣೆ ಸ್ಪರ್ಧೆಯ ಸುದ್ದಿ

  ರಮ್ಯಾ ಚಿತ್ರರಂಗದಿಂದ ದೂರವಾಗಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯುವಾಗ ಅವರಿಗೆ ಎದುರಾಳಿಯಾಗಿ ರಕ್ಷಿತಾ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಜತೆಯಾಗಿ ನಟಿಸಿದ ಮರುವರ್ಷ ಒಂದೆರಡು ಸಿನಿಮಾ ಮಾಡಿದ ರಕ್ಷಿತಾ, ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗಿ ಸಿನಿಮಾರಂಗದಿಂದ ದೂರವಾಗಿದ್ದರು. ಆದರೆ ರಕ್ಷಿತಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿರಲಿಲ್ಲ. ಅತ್ತ ರಾಜಕೀಯದಲ್ಲಿ ಸಕ್ರಿಯರಾದ ರಮ್ಯಾ ಕೂಡ ಸಿನಿ ರಂಗದಿಂದ ದೂರ ಸರಿದರು.

  ಸೆಲ್ಫಿ ಶೇರ್ ಮಾಡಿ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ ರಮ್ಯಾ: ಹೇಗಿದ್ದಾರೆ ಮೋಹಕ ತಾರೆ ನೋಡಿಸೆಲ್ಫಿ ಶೇರ್ ಮಾಡಿ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ ರಮ್ಯಾ: ಹೇಗಿದ್ದಾರೆ ಮೋಹಕ ತಾರೆ ನೋಡಿ

  ಆನ್‌ಲೈನ್‌ನಲ್ಲಿ ಫ್ರೆಂಡ್ಸ್ ಆದ ರಕ್ಷಿತಾ-ರಮ್ಯಾ

  ಆನ್‌ಲೈನ್‌ನಲ್ಲಿ ಫ್ರೆಂಡ್ಸ್ ಆದ ರಕ್ಷಿತಾ-ರಮ್ಯಾ

  ಈಗ ಇಬ್ಬರ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದು ದೊರಕಿದೆ. ಚಿತ್ರರಂಗದಲ್ಲಿ ತಮ್ಮದೇ ಕ್ರೇಜ್ ಸೃಷ್ಟಿಸಿದ್ದ ರಮ್ಯಾ ಮತ್ತು ರಕ್ಷಿತಾ ಇಬ್ಬರೂ ಈಗ ಆನ್‌ಲೈನ್ ಗೆಳತಿಯರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಮ್ಯಾ ಮತ್ತು ರಕ್ಷಿತಾ ಪರಸ್ಪರ ಹಿಂಬಾಲಿಸಲು ಆರಂಭಿಸತೊಡಗಿದ್ದಾರೆ. ಇವರಿಬ್ಬರೂ ಸಿನಿಮಾರಂಗದಲ್ಲಿ ಮುಂಚೂಣಿಯಲ್ಲಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಈ ರೀತಿ ಸಕ್ರಿಯವಾಗಿ ಇರಲಿಲ್ಲ. ಈಗ ಇಬ್ಬರೂ ಸ್ನೇಹಿತರಾಗಿರುವುದು ಕುತೂಹಲ ಮೂಡಿಸಿದೆ.

  English summary
  Actress turned Ramya And Rakshitha were once famous for their screen rivalry have begun following each other on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X