ಸುದೀಪ್, ಉಪ್ಪಿ, ರಾಗಿಣಿಯನ್ನು ಹಿಂದಿಕ್ಕಿದ ರಮ್ಯಾ
ಸಪ್ತಕೋಟಿ ಕನ್ನಡಿಗರಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಅವರಿಗೆ ಇರುವುದು ಕೇವಲ ಒಂದೇ ಒಂದು ಲಕ್ಷ ಅಭಿಮಾನಿಗಳೇ? ಎಂದು ಹುಬ್ಬೇರಿಸಬೇಡಿ. ಸಪ್ತಕೋಟಿ ಕನ್ನಡಿಗರಲ್ಲಿ ಅವರ ಅಭಿಮಾನಿ ಬಳಗ ತುಂಬಾ ದೊಡ್ಡದಾಗಿಯೇ ಇದೆ. ಆದರೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ ಒಂದು ಲಕ್ಷ ದಾಟಿದೆ.
ಈ ಮೂಲಕ ರಮ್ಯಾ ಅವರು ಇಲ್ಲೂ ಹೊಸ ದಾಖಲೆ ನಿರ್ಮಿಸಿದ್ದಾರೆ. ಕನ್ನಡದಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ತಾರೆಗಳ ಪೈಕಿ ರಮ್ಯಾ ಅವರಷ್ಟು ಫಾಲೋವರ್ಸ್ ಮತ್ತ್ಯಾರಿಗೂ ಇಲ್ಲ ಎಂಬುದು ವಿಶೇಷ. ಬೆಂಗಳೂರು ಅರಗಿಣಿ ಪ್ರಿಯಾಮಣಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಟ್ಟು 78,000 ಬಳಗವಿದೆ.
ರಾಷ್ಟ್ರಪ್ರಶಸ್ತಿ ವಿಜೇತ ತಾರೆ ಪ್ರಿಯಾಮಾಣಿ ಅವರನ್ನೂ ರಮ್ಯಾ ಹಿಂದಿಕ್ಕಿರುವುದು ವಿಶೇಷ. ರಮ್ಯಾ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದೇ ಈ ಬೆಳವಣಿಗೆಗೆ ಕಾರಣವಾಗಿರುವ ಅಂಶ ಎನ್ನಬಹುದು.

ಕಿಚ್ಚ ಸುದೀಪ್ ಟ್ವಿಟ್ಟರ್ ಅಭಿಮಾನಿಗಳ ಸಂಖ್ಯೆ ಗೊತ್ತಾ?
ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವ ಮತ್ತೊಬ್ಬ ನಟ ಎಂದರೆ ಸುದೀಪ್. ಅವರ ಟ್ವಿಟ್ಟರ್ ಖಾತೆಯಲ್ಲಿ ಸದ್ಯಕ್ಕೆ 39, 598 ಫಾಲೋವರ್ಸ್ ಇದ್ದಾರೆ. ಸುದೀಪ್ ಟ್ವಿಟ್ಟರ್ ಖಾತೆ: @KicchaSudeep

ರಮ್ಯಾ ಬಗ್ಗೆ ಮೂಗುಮುರಿದ ರಾಗಿಣಿ ಟ್ವಿಟ್ಟರ್
ಇತ್ತೀಚೆಗೆ ರಮ್ಯಾರನ್ನು ಆಕೆಯೇನು ಭೂಲೋಕ ಸುಂದರೀನಾ? ರಮ್ಯಾ ಏನು ಪ್ರಧಾನ ಮಂತ್ರಿನಾ? ಆಕೆಯೇನು ಬಾಲಿವುಡ್ ದೊಡ್ಡ ಸ್ಟಾರೇ? ಎಂದು ಕಿಡಿಕಾರಿದ್ದ ರಾಗಿಣಿ ದ್ವಿವೇದಿ ಅವರ ಟ್ವಿಟ್ಟರ್ ಅಭಿಮಾನಿಗಳ ಸಂಖ್ಯೆ ಶೋಚನೀಯವಾಗಿದೆ. ರಾಗಿಣಿ ಅವರಿಗಿರುವ ಟ್ವಿಟ್ಟರ್ ಅಭಿಮಾನಿಗಳ ಸಂಖ್ಯೆ ಕೇವಲ 1,418. ರಾಗಿಣಿ ದ್ವಿವೇದಿ ಟ್ವಿಟ್ಟರ್ ಖಾತೆ: @raginidwivedi24

ಅಳೆದು ತೂಗಿ ಟ್ವಿಟ್ ಮಾಡುತ್ತಿರುವ ದಿಗಂತ್
ದಿಗಂತ್ ಅವರ ಟ್ವಿಟ್ಟರ್ ಖಾತೆ ಅಪ್ ಡೇಟ್ ಆಗುವುದು ಬಲು ಅಪರೂಪಕ್ಕೆ. ಹಾಗಾಗಿ ಅವರ ಫಾಲೋವರ್ಸ್ ಸಂಖ್ಯೆ ಕೂಡ ಒಂದು ಸಾರಿವ ಚಿಲ್ಲರೆಯಷ್ಟಿದೆ. ಟ್ವಿಟ್ಟರ್ ನಲ್ಲಿ ದಿಗಂತ್ ಬಲು ಲೇಜಿ ಎಂಬುದು ಅವರ ಖಾತೆಗೆ ಒಮ್ಮೆ ಭೇಟಿ ನೀಡಿದರೆ ನಿಮಗೇ ಮನದಟ್ಟಾಗುತ್ತದೆ. ದಿಗಂತ್ ಟ್ವಿಟ್ಟರ್ ಖಾತೆ: @diganthmanchale

ತಾರೆ ನಿಧಿ ಸುಬ್ಬಯ್ಯ ನಿಧಾನವೇ ಪ್ರಧಾನ
ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ಗೆ ಜಿಗಿದ ತಾರೆ ನಿಧಿ ಸುಬ್ಬಯ್ಯ ಟ್ವಿಟ್ಟರ್ ನಲ್ಲಿ ನಿಧಾನವೇ ಪ್ರಧಾನ. ಟ್ವಿಟ್ಟರ್ ನಲ್ಲಿ ಆಕೆಯ ಅಭಿಮಾನಿಗಳ ಸಂಖ್ಯೆ ಒಂಭತ್ತು ಸಾವಿರ ಚಿಲ್ಲರೆ. ನಿಧಿ ಸುಬ್ಬಯ್ಯ ತಮ್ಮ ಫಾಲೋವರ್ಸ್ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಿಧಿ ಸುಬ್ಬಯ್ಯ ಟ್ವಿಟ್ಟರ್ ಖಾತೆ: @nidhisubbaiah

ರಿಯಲ್ ಸ್ಟಾರ್ ಉಪೇಂದ್ರ ಟ್ವಿಟ್ಟರ್ ಖಾತೆ
ರಿಯಲ್ ಸ್ಟಾರ್ ಉಪೇಂದ್ರ ಟ್ವಿಟ್ಟರ್ ಖಾತೆ ಕಾಲಕ್ಕೆ ಅಪ್ ಡೇಟ್ ಆಗದಿದ್ದರೂ ಅವರ ಅಭಿಮಾನಿಗಳ ಸಂಖ್ಯೆಯಂತೂ ಗಮನಾರ್ಹವಾಗಿ ಏರಿಕೆಯಾಗುತ್ತಲೇ ಇದೆ. ಉಪೇಂದ್ರ ಟ್ವಿಟ್ಟರ್ ಖಾತೆ ಹೀಗಿದೆ: @realupendra
ಕೆಲವು ತಾರೆಗಳು ಟ್ವಿಟ್ಟರ್ ಖಾತೆಯನ್ನು ಹೊಂದಿದ್ದರೂ ವಾರಕ್ಕೋ ಹದಿನೈದು ದಿನಕ್ಕೊಮ್ಮೆ ಅಪ್ ಡೇಟ್ ಆಗುತ್ತಿರುತ್ತಾರೆ. ಹಾಗಾಗಿ ಅಂತಹ ತಾರೆಗಳಿಗೆ ಟ್ವಿಟ್ಟರ್ ಫಾಲೋವರ್ಸ್ ಸಂಖ್ಯೆ ಅಷ್ಟಾಗಿ ಇರುವುದಿಲ್ಲ.
ರಮ್ಯಾ ಚಿತ್ರಗಳಿಗೆ ಸಂಬಂಧಿಸಿದಂತೆ ವಾದ ವಿವಾದ, ಚರ್ಚೆಗಳು ಟ್ವಿಟ್ಟರ್ ನಲ್ಲಿ ಜೋರಾಗಿಯೇ ನಡೆಯುತ್ತವೆ. ಆಕೆಯ ಅಭಿಮಾನಿಗಳು ಈ ಬಗ್ಗೆ ನಾನಾ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಇವಕ್ಕೆಲ್ಲಾ ರಮ್ಯಾ ಸಮಾಧಾನ ಚಿತ್ತದಿಂದ ಉತ್ತರ ನೀಡುತ್ತಾ ತಮ್ಮ ಟ್ವಿಟ್ಟರ್ ಅಭಿಮಾನಿಗಳನ್ನು ಬೆಳಸಿಕೊಂಡಿದ್ದಾರೆ.
ರಮ್ಯಾ ಅವರು ಮತ್ತೊಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ಅಕೌಂಟನ್ನು ಹೊಂದಿದ್ದರೂ ಟ್ವಿಟ್ಟರ್ ನಷ್ಟು ಜನಪ್ರಿಯವಾಗಿಲ್ಲ. ಕಾರಣ ಟ್ವಿಟ್ಟರ್ ನಲ್ಲಿ ತನ್ನ ಅಭಿಮಾನಿಗಳ ಜೊತೆ ನಡೆದಷ್ಟು ಚರ್ಚೆ ಅಲ್ಲಿ ನಡೆಯುತ್ತಿಲ್ಲ ಎಂಬುದು. ಕೆಲವು ತಾರೆಗಳ ಟ್ವಿಟ್ಟರ್ ಡೀಟೇಲ್ಸ್.


Click it and Unblock the Notifications











