ವಿನಯ್ ಜೊತೆ ಸುತ್ತಾಟ.. ಊಹಾಪೋಹಗಳಿಗೆಲ್ಲಾ ನಟಿ ರಮ್ಯಾ ಫುಲ್‌ಸ್ಟಾಪ್

ನಟಿ ರಮ್ಯಾ ಹಾಗೂ ನಟ ವಿನಯ್ ರಾಜ್‌ಕುಮಾರ್ ಇತ್ತೀಚೆಗೆ ಒಟ್ಟೊಟ್ಟಿಗೆ ಸುತ್ತಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಇಬ್ಬರೂ ಮ್ಯಾಗಜೀನ್ ಫೋಟೊಶೂಟ್‌ನಲ್ಲಿ ಮಿಂಚಿದ್ದರು. ರಮ್ಯಾ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದಾಗ ವಿನಯ್ ಬೆಂಬಲಕ್ಕೆ ನಿಂತಿದ್ದರು. ಇದನ್ನೆಲ್ಲಾ ನೋಡಿ ಕೆಲವರು ಏನೇನೊ ಊಹಿಸಿಕೊಳ್ಳುತ್ತಿದ್ದಾರೆ.

ನಟ, ನಟಿ ಒಟ್ಟಿಗೆ ಸುತ್ತಾಡಿದರೆ ಡೇಟಿಂಗ್, ಅದು ಇದು ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ಈಗ ರಮ್ಯಾ- ವಿನಯ್ ವಿಚಾರದಲ್ಲೂ ಹೀಗೆ ಆಗಿದೆ. ಅದಕ್ಕೆ ಮೋಹಕ ತಾರೆ ತೆರೆ ಎಳೆದಿದ್ದಾರೆ. ಏನೇನೋ ಅನ್ಕೊಬೇಡ್ರಪ್ಪಾ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಸಖತ್ ವೈರಲ್ ಆಗ್ತಿದೆ. ಇತ್ತೀಚೆಗೆ ನ್ಯೂಯಾರ್ಕ್ ಸಿಟಿಯಲ್ಲಿ ರಮ್ಯಾ, ವಿನಯ್ ಹಾಗೂ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಸುತ್ತಾಡಿದ್ದರು. ಆ ಫೋಟೊಗಳನ್ನು ರಮ್ಯಾ ಹಂಚಿಕೊಂಡಿದ್ದರು.

Ramya Clarifies Bond With Vinay Rajkumar He s Like My Brother Stop Assuming

ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರೋ ಪೋಸ್ಟ್‌ಗೆ ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಯಾರೂ ಕೂಡ ಕೆಟ್ಟದಾಗಿ ಕಾಮೆಂಟ್ ಮಾಡುವ ಸಾಹಸ ಮಾಡಿಲ್ಲ. ಇದೆಲ್ಲದರ ನಡುವೆ ರಮ್ಯಾ- ವಿನಯ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಕೆಲವರು ಕೆಲವರು ಊಹಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ. "ನೀವು ತುಂಬಾ ಫನ್ನಿ. ಏನಂತ ಗೊತ್ತು. ವಿನಯ್ ನನ್ನ ಸಹೋದರನಿದ್ದಂತೆ. ನಿಮ್ಮ ಊಹೆಗಳಿಗೆ ಬ್ರೇಕ್ ಹಾಕಿ" ಎಂದು ಬರೆದುಕೊಂಡಿದ್ದಾರೆ.

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದ 'ಅಭಿ' ಚಿತ್ರದ ಮೂಲಕ ರಮ್ಯಾ ಚಿತ್ರರಂಗಕ್ಕೆ ಬಂದವರು. ಅದಕ್ಕೂ ಮುನ್ನ 'ಅಪ್ಪು' ಚಿತ್ರಕ್ಕ ಆಡಿಷನ್ ಕೊಟ್ಟಿದ್ದರು. ಆ ಸಮಯದಿಂದಲೂ ದೊಡ್ಮನೆ ಸದಸ್ಯರ ಜೊತೆ ಆತ್ಮೀಯ ಒಡನಾಟ ಹೊಂದಿದ್ದಾರೆ. 'ಅಭಿ' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ವಿನಯ್ ಹಾಗೂ ಯುವ ಹೈಸ್ಕೂಲ್ ಓದುತ್ತಿದ್ದರು. ಅಂದಿನಿಂದಲೂ ಇಬ್ಬರನ್ನು ರಮ್ಯಾ ನೋಡುತ್ತಾ ಬಂದಿದ್ದಾರೆ. ಹಾಗಾಗಿ ವಿನಯ್ ಜೊತೆ ಉತ್ತಮ ಒಡನಾಟ ಇದೆ.

Ramya Clarifies Bond With Vinay Rajkumar He s Like My Brother Stop Assuming

ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಶುಭ ಹಾರೈಸಿದ್ದರು. ವೈರಲ್ ಫೋಟೊ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಕನ್ನಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿನಯ್ ಮಾತನಾಡಿದ್ದರು. "ಅಭಿ ಸಿನಿಮಾ ಸಮಯದಿಂದಲೂ ರಮ್ಯಾ ಅವ್ರು ಗೊತ್ತು. ಆಗ ನಾನು 9ನೇ ತರಗತಿ ಓದುತ್ತಿದ್ದೆ ಅನ್ನಿಸುತ್ತೆ. ಆಗಿನಿಂದಲೂ ನೋಡ್ತಾ ಬಂದಿದ್ದೀನಿ. ಆಗಾಗ್ಗೆ ಭೇಟಿ ಆಗ್ತೀವಿ, ಮಾತಾಡ್ತೀವಿ. ಬಹಳ ಒಳ್ಳೆ ಫ್ರೆಂಡ್ ಅವ್ರು" ಎಂದಿದ್ದರು.

ಈ ವರ್ಷ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿತ್ತು. ರಮ್ಯಾ ಹಾಗೂ ವಿನಯ್ ಇಬ್ಬರೂ ವೀರೇಶ್ ಚಿತ್ರಮಂದಿರದಲ್ಲಿ ಒಟ್ಟಿಗೆ ಸಿನಿಮಾ ನೋಡಿ ಎಂಜಾಯ್ ಮಾಡಿದ್ರು. ಸಿನಿಮಾ ನೋಡಿ ಹೊರಬರುವಾಗ ಅಭಿಮಾನಿಗಳು ಮುತ್ತಿಕೊಂಡಿದ್ದರು. ಆಗ ನೂಕು ನುಗ್ಗಲಿನಂತೆ ರಮ್ಯಾ ಬೆಂಬಲಕ್ಕೆ ವಿನಯ್ ನಿಂತಿದ್ದರು.

ಈ ಹಿಂದೆ ಕೂಡ ರಮ್ಯಾ ಕೆಲ ಪೋಸ್ಟ್‌ಗಳಲ್ಲಿ ವಿನಯ್ ರಾಜ್‌ಕುಮಾರ್ ಅವರು ಇದ್ದರು. ಅವಕಾಶ ಸಿಕ್ಕರೆ ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸುವುದಾಗಿಯೂ ಹೇಳಿದ್ದಾರೆ. ಇತ್ತೀಚೆಗೆ ಕಿಡಿಗೇಡಿಗಳು ನಟಿ ರಮ್ಯಾ ಅವರಿಗೆ ಕೆಟ್ಟ ಮೆಸೇಜ್ ಕಳುಹಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವನಯ್ "ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು" ಎಂದು ವಿನಯ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

More from Filmibeat

English summary
Ramya Shuts Down Dating Buzz With Vinay Rajkumar: “He’s Like My Brother
Read more about: ramya vinay rajkumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X