"ನಾನ್ ಮಂಡ್ಯದವ್ಳು.. ನಾನು ಗೌಡ್ತಿ.. ಅಂಬಿ ಅಂತ್ಯಕ್ರಿಯೆಗೆ ಯಾಕೆ ಬಂದಿಲ್ಲ ಅಂದ್ರೆ"..

ಮಾಜಿ ಸಂಸದೆ, ನಟಿ ರಮ್ಯಾ ಚುನಾವಣೆ ಪ್ರಚಾರ ಕಣಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದಾರೆ. ಬಹಳ ವರ್ಷಗಳ ನಂತರ ರಮ್ಯಾ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆದರೆ ರಮ್ಯಾ ಸಕ್ಕರೆ ನಾಡಿಗೆ ಭೇಟಿ ಕೊಡುವುದನ್ನು ಅಂಬರೀಶ್ ಅವರ ಕೆಲ ಅಭಿಮಾನಿಗಳು ವಿರೋಧಿಸಿದ್ದರು. 'ಗೋಬ್ಯಾಕ್ ರಮ್ಯಾ' ಅಭಿಯಾನವನ್ನು ಕೂಡ ಕೈಗೊಂಡಿದ್ದರು.

ಅಂಬಿ ನಿಧನರಾದಾಗ ರಮ್ಯಾ ಬರಲಿಲ್ಲ. ಒಮ್ಮೆ ಸಂಸದೆಯಾಗಿ ಗೆದ್ದು ಮತ್ತೊಮ್ಮೆ ಸೋತ ಮೇಲೆ ನಿಧಾನವಾಗಿ ಮಂಡ್ಯದಿಂದ ಕಾಣೆ ಆಗಿದ್ದರು. ಇದೀಗ ಚುನಾವಣೆ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಇಷ್ಟು ದಿನ ಬಾರದವರು ಈಗ ಯಾಕೆ ಬರುತ್ತಿದ್ದಾರೆ ಎಂದು ಅಂಬಿ ಅಭಿಮಾನಿಗಳು ಪ್ರಶ್ನಿಸಿದ್ದರು. ಇದೀಗ ರಮ್ಯಾ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿದಿದ್ದಾರೆ. ಚುನಾವಣೆ ಪ್ರಚಾರಕ್ಕೂ ಮುನ್ನ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಇಷ್ಟು ದಿನ ಯಾಕೆ ಮಂಡ್ಯಕ್ಕೆ ಬರಲಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಅಂಬಿ ಅಂತ್ಯಕ್ರಿಯೆಯಲ್ಲೂ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

Ramya clarifies why She didnt attend actor Ambareeshs funeral in mandya

ಮಂಡ್ಯದಲ್ಲೇ ಮನೆ ಮಾಡ್ತೀನಿ ಎನ್ನುವ ಭರವಸೆ ಕೊಟ್ಟಿದ್ರಿ, ಆಮೇಲೆ ಈ ಕಡೆ ಬರಲೇ ಇಲ್ಲ, ಚುನಾವಣೆಯಲ್ಲಿ ಸೋತಮೇಲೆ ಇತ್ತ ಬರಲೇಯಿಲ್ಲ ಎನ್ನುವ ಪ್ರಶ್ನೆಗೆ "ನಮ್ಮ ತಾತನದ್ದು ಒಂದು ತೊಟ್ಟಿಮನೆ ಇದೆ. ನನಗೂ ಒಂದು ಮನೆ ಮಾಡುವ ಆಸೆ ಇದೆ. ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡ್ತಿ. ನಾನು ಗೌಡ್ತಿ ಎನ್ನುವುದನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇದು ನಮ್ಮ ತಾಯಿ ಊರು. ನಮ್ಮ ತಂದೆ ಸತ್ತಿದ್ದು ಇಲ್ಲೇನೆ. ಕಷ್ಟದಲ್ಲಿ ಇದ್ದಾಗ ಮಂಡ್ಯ ಜನತೆ ಬೆಂಬಲ ನೀಡಿದ್ದಾರೆ. ನನಗೆ ಅವರ ಮೇಲಿನ ಗೌರವ, ಪ್ರೀತಿ ಯಾವಾಗಲೂ ಹೀಗೆ ಇರುತ್ತೆ" ಎಂದಿದ್ದಾರೆ.

"ನಾನು ಮಂಡ್ಯಕ್ಕೆ ಆಗಾಗ್ಗೆ ಬಂದು ಹೋಗ್ತಿದ್ದೆ. ಇತ್ತೀಚೆಗೆ ನಿಮಿಷಾಂಬ ದೇವಸ್ಥಾನಕ್ಕೂ ಕೂಡ ಬಂದಿದ್ದೆ. ಕ್ಯಾಮರಾ ಮುಂದೆ ಕಾಣಿಸಿಕೊಂಡಿಲ್ಲ ಅದಕ್ಕೆ ನೀವು ಈ ರೀತಿ ಕೇಳುತ್ತಿದ್ದೀರಾ. ಇವತ್ತು ನಾನು ಸ್ಟಾರ್ ಕ್ಯಾಂಪೇನರ್ ಆಗಿ ನಮ್ಮ ಅಭ್ಯರ್ಥಿಗಳಿಗೆ ಸಪೋರ್ಟ್ ಮಾಡಲು ಇಲ್ಲಿಗೆ ಬಂದಿದ್ದೇನೆ. ಚುನಾವಣೆಗೆ ನಿಲ್ಲುವ ಯಾವುದೇ ನಿರ್ಧಾರ ನಾನು ಮಾಡಿಲ್ಲ" ಎಂದು ರಮ್ಯಾ ಹೇಳಿದ್ದಾರೆ.

ಅಂಬಿ ನಿಧನರಾದಾಗ ರಮ್ಯಾ ಬಾರದ ವಿಚಾರ

ಇನ್ನು ಅಂಬಿ ನಿಧನರಾದ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಹೋಗಿಲಿಲ್ಲ ಎನ್ನುವ ವಿಚಾರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ "ಅವ್ರು ತೀರಿಕೊಂಡಾಗ ನನಗೆ ಟ್ಯೂಮರ್ ಬಂದಿತ್ತು. ಸರ್ಜರಿ ಮಾಡಿಸಿಕೊಂಡಿದ್ದೆ. ಹಾಗಾಗಿ ನಾನು ಆ ಸಮಯದಲ್ಲಿ ಬರಲು ಸಾಧ್ಯವಾಗಲಿಲ್ಲ. ಅದನ್ನು ಸೋಶಿಯಲ್ ಮೀಡಿಯಾದಲ್ಲೂ ಬರೆದುಕೊಂಡಿದ್ದೆ. ನನ್ನ ಸ್ವಭಾವ ಎಲ್ಲವನ್ನು ಹಂಚುಕೊಳ್ಳುವುದಲ್ಲ. ಬೇರೆಯವರು ಕ್ಯಾಮರಾ ಮುಂದೆ ಬಂದು ಎಲ್ಲಾ ಹೇಳ್ತಾರೆ.

Ramya clarifies why She didnt attend actor Ambareeshs funeral in mandya

"ನಾನು ಚಿಕ್ಕವಳಿದ್ದಾಗಿನಿಂದ ನನ್ನ ಕೆಲಸದ ಬಗ್ಗೆ ಮಾತ್ರ ಮಾತನಾಡ್ತಿನಿ. ಯಾವುದೇ ವೈಯಕ್ತಿಕ ವಿಚಾರದ ಕುರಿತು ಮಾತನಾಡಲ್ಲ. ಆದ್ರೆ ಇದರ ಬಗ್ಗೆ ಕೆಲವ್ರು ಅಪಪ್ರಚಾರ ಮಾಡ್ತಾರೆ ಆದ್ರೆ ನಾನು ತಲೆಕೆಡಿಸಿಕೊಳ್ಳಲ್ಲ. ಸರ್ಜರಿ ಆದ ಬಳಿಕ ನನಗೆ ಆಟೋ ಇಮ್ಯೂನ್ ಕಂಡಿಷನ್ ಕೂಡ ಆಯ್ತು. ಇದನ್ನೆಲ್ಲ ಹೇಳಿ ಸಿಂಪಥಿ ಪಡೆಯಲು ನಂಗಿಷ್ಟ ಇಲ್ಲಾ. ಸದ್ಯಕ್ಕೆ ನಾನು ಸಕ್ರಿಯ ರಾಜಕಾರಣಕ್ಕೆ ಬರುವ ಚಿಂತನೆ ಮಾಡಿಲ್ಲ, ಮುಂದಿನ ದಿನಗಳಲ್ಲಿ ನೋಡೋಣ ಎಂದು ರಮ್ಯಾ ಹೇಳಿದ್ದಾರೆ.

ರಮ್ಯಾ ಚಿತ್ರರಂಗಕ್ಕೆ ವಾಪಸ್ ಬಂದಿದ್ಯಾಕೆ?

"ನಾನು ಸದ್ಯಕ್ಕೆ ಚಿತ್ರರಂಗದಲ್ಲಿ ಸಿನಿಮಾ ಪ್ರೊಡಕ್ಷನ್ ಮಾಡ್ತಿದಿನಿ ಅಷ್ಟೇ. ಎಷ್ಟು ದಿನ ಸುಮ್ಮನಿರುವುದು. ನಾನು ಏನಾದರೂ ಮಾಡಬೇಕು ಅಲ್ವಾ? ದುಡಿಯಬೇಕು ಅಲ್ವಾ? 'ಉತ್ತರಾಕಾಂಡ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದೀನಿ."

ನಾನು ಮಂಡ್ಯದವಳು, ನಾನು ಗೌಡ್ತಿ

"ನಾನು ಗೌಡ್ತಿ.. ಗೌಡ್ತಿ ಎನ್ನುವುದನ್ನು ನನ್ನಿಂದ ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಮ್ಮ ತಾಯಿ ಊರು ಕೂಡ ಮಂಡ್ಯ. ನಾನು ಕಷ್ಟದಲ್ಲಿದ್ದಾಗ ಮಂಡ್ಯ ಜನರು ನನ್ನ ಜೊತೆ ಇದ್ದು ಸಪೋರ್ಟ್ ಮಾಡಿದ್ದಾರೆ. ಅವ್ರ ಮೇಲೆ ಇರೋ ಗೌರವ ಯಾವತ್ತು ಕಡಿಮೆ ಆಗಲ್ಲ. ಬರೀ ರಾಜಕೀಯ ಅಲ್ಲ ಈ ಊರಿನಲ್ಲಿ ನನಗೆ ಫ್ಯಾಮಿಲಿಯ ಸಂಬಂಧವಿದೆ. ಇದನ್ನ ರಾಜಕೀಯ ಮಾಡೋದು ಬೇಡ.

ಮೈಸೂರು, ವರುಣ, ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆ ಪ್ರಚಾರಕ್ಕೆ ಹೋಗ್ತಿನಿ. ಮಂಡ್ಯ ಜನರು ತುಂಬಾ ಬುದ್ದಿವಂತರು. ಯಾರು ಏನು ಅನ್ನೋದು ಅವರಿಗೆ ಗೊತ್ತಿದೆ.

More from Filmibeat

English summary
Ramya clarifies why She didn't attend actor Ambareesh's funeral in mandya. congress Leader Ramya campaigns for congress candidate Ganiga Ravikumar from Mandya Assembly constituency. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X