ಚಿತ್ರರಂಗದಲ್ಲಿ 16 ವರ್ಷ ಪೂರೈಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
Recommended Video

ನಟಿ ರಮ್ಯಾ ಚಿತ್ರರಂಗಕ್ಕೆ ಮತ್ತೆ ಬರಬೇಕು, ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಮಹದಾಸೆ. ಕನ್ನಡ ಚಿತ್ರರಂಗವನ್ನು ಹತ್ತು ವರ್ಷ ರಾಣಿಯಂತೆ ಆಳಿದ ಈ ಸುಂದರ ಮೊಗದ ನಟಿಗೆ ಇಂದಿಗೆ ಸರಿಯಾಗಿ ಚಿತ್ರರಂಗಕ್ಕೆ ಬಂದು 16 ವರ್ಷ ಪೂರೈಸಿದೆ.
ಏಪ್ರಿಲ್ 25, 2003 ರಲ್ಲಿ 'ಅಭಿ' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಮೂಲಕ ನಟಿ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಗೆ ತೆರೆಹಂಚಿಕೊಂಡ ಖ್ಯಾತಿ ಗಳಿಸಿದರು. ಪುನೀತ್ - ರಮ್ಯಾ ಕಾಂಬಿನೇಶನ್ ನಂತರ ಸೂಪರ್ ಹಿಟ್ ಜೋಡಿ ಅಂತ ಕರೆಸಿಕೊಂಡಿತು. ಆ ಬಳಿಕ ಈ ಇಬ್ಬರು 'ಆಕಾಶ್' 'ಅರಸು' ಸಿನಿಮಾದಲ್ಲಿಯೂ ಒಟ್ಟಿಗೆ ನಟಿಸಿದರು.

ರಮ್ಯಾ ಕಮರ್ಷಿಯಲ್ ಸಿನಿಮಾಗೆ ಹೇಳಿ ಮಾಡಿಸಿದ ನಟಿ ಆಗಿದ್ದರು. ಕನ್ನಡದ ಬಹುತೇಕ ನಟರ ಜೊತೆಗೆ ತೆರೆ ಹಂಚಿಕೊಂಡ ಈಕೆ ಲೇಡಿ ಸೂಪರ್ ಸ್ಟಾರ್ ಆಗಿ ಚಿತ್ರರಂಗ ಆಳಿದರು. ಇಂದಿಗೂ ಅನೇಕರು ರಮ್ಯಾ ರೀತಿಯ ನಟಿ ಕನ್ನಡಕ್ಕೆ ಇದುವರೆಗೆ ಸಿಕ್ಕಿಲ್ಲ ಎಂದು ಹೇಳುವುದುಂಟು. ಅಂದಹಾಗೆ, 'ಎಕ್ಸ್ ಕ್ಯೂಸ್ ಮಿ', 'ಗೌರಮ್ಮ', 'ಸಿದ್ಲಿಂಗು', 'ಸಂಜು ವೆಡ್ಸ್ ಗೀತಾ', 'ಜೊತೆ ಜೊತೆಯಲಿ' ಸಿನಿಮಾಳು ರಮ್ಯಾ ಕೆರಿಯರ್ ನ ಪ್ರಮುಖ ಸಿನಿಮಾಗಳಾಗಿವೆ.
ರಮ್ಯಾ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು 'ನಾಗರಹಾವು' ಸಿನಿಮಾದಲ್ಲಿ. ಸದ್ಯಕ್ಕೆ ರಮ್ಯಾ ರಾಜಕೀಯದಲ್ಲಿ ಬಿಜಿ ಇದ್ದಾರೆ. ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ಆಗಿರುವ ರಮ್ಯಾ ಮತ್ತೆ ಸಿನಿಮಾ ಮಾಡುವ ಸಾಧ್ಯತೆ ಬಹಳ ಕಡಿಮೆ.


Click it and Unblock the Notifications











