ನಟಿ ರಮ್ಯಾ 19 ವರ್ಷದ ಸಿನಿ ಪಯಣ: ಸದ್ಯದಲ್ಲೇ ಪದ್ಮಾವತಿ ಹೊಸ ಚಿತ್ರ!

ಸ್ಯಾಂಡಲ್‌ವುಡ್‌ನಲ್ಲಿ ರಾಣಿ ಅಂತಲೇ ಕರೆಸಿಕೊಳ್ಳುವ ನಟಿ ರಮ್ಯಾ ಕೆಲವು ವರ್ಷಗಳಿಂದೆ ಚಿತ್ರರಂಗದಿಂದ ದೂರಾಗಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಆದರೂ ಕೂಡ ರಮ್ಯಾಗೆ ಇರುವ ಫ್ಯಾನ್ ಕ್ರೇಜ್ ಕಡಿಮೆ ಆಗಿಲ್ಲ. ರಮ್ಯಾಳನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಲು ಕಾಯುತ್ತಿದ್ದಾರೆ.

ಈಗ ರಮ್ಯಾ ಬಗ್ಗೆ ಮಾತನಾಡುವುದಕ್ಕೆ ಕಾರಣ ರಮ್ಯಾ ಅವರೇ. ಹೌದು ನಟಿ ರಮ್ಯಾ ಬಣ್ಣ ಹಚ್ಚಿ ಬರೋಬ್ಬರಿ 19 ವರ್ಷಗಳು ಕಳೆದಿವೆ. ಪದ್ಮಾವತಿ ರಮ್ಯಾ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ಏಪ್ರಿಲ್ 25ಕ್ಕೆ 19 ವರ್ಷಗಳು ಪೂರೈಸಿವೆ. ಪುನೀತ್ ರಾಜ್ ಕುಮಾರ್ ಅಭಿನಯದ 'ಅಭಿ' ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ರಮ್ಯಾ ಆನಂತರ ಸಿನಿಮಾ ರಂಗದ ಸ್ಟಾರ್ ನಟಿಯಾಗಿ ಬೆಳೆದರು.

'ಅಭಿ' ಸಿನಿಮಾ ರಮ್ಯಾಗೆ ಅದೃಷ್ಟದ ಬಾಗಿಲನ್ನು ತೆರೆಯಿತು. ಮೊದಲ ಚಿತ್ರದ ನಂತರ ರಮ್ಯಾ ಸಾಲು, ಸಾಲು ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡದ ಬಹುಬೇಡಿಕೆಯ ನಟಿಯಾಗಿ ಬೆಳೆದು ನಿಂತರು. ರಮ್ಯಾಗೆ ಎಲ್ಲಿಲ್ಲದ ಬೇಡಿಕೆ ಹುಟ್ಟಿಕೊಂಡಿತು. ಕನ್ನಡ ದೊಡ್ಡ, ದೊಡ್ಡ ಚಿತ್ರಗಳಲ್ಲಿ ಮಾತ್ರವಲ್ಲ ಪರಭಾಷೆ ಚಿತ್ರಗಳಲ್ಲೂ ಕೂಡ ರಮ್ಯಾ ಅಭಿನಯಿಸಿದ್ದಾರೆ.

ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದ ರಮ್ಯಾ!

ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದ ರಮ್ಯಾ!

ಇನ್ನು ರಮ್ಯಾ ಅವರ ಸಿನಿಮಾ ಹೊರತಾದ ಜೀವನವನ್ನು ನೋಡುವುದಾದರೆ, ರಮ್ಯಾ ಮೊದಲ ಹೆಸರು ದಿವ್ಯ ಸ್ಪಂದನ. ಪ್ರಾಥಮಿಕ ಶಿಕ್ಷಣವನ್ನು ಊಟಿ ಮತ್ತು ಪ್ರೌಢ ಶಿಕ್ಷಣವನ್ನು ಚೆನ್ನೈನಲ್ಲಿ ಮುಗಿಸಿದ್ದಾರೆ. ಓದು ಮುಗಿದ ಬಳಿಕ ರಮ್ಯಾ ನೇರವಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟವರು. ರಮ್ಯಾ ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ. ಆದರೆ ಬಂದ ಬಳಿಕ ಖ್ಯಾತ ನಟಿಯಾಗಿ ಬೆಳೆದದ್ದು ದಾಖಲೆ.

'ಅಭಿ' ಚಿತ್ರದ ಮೂಲಕ ಬಣ್ಣ ಹಚ್ಚಿದ ರಮ್ಯಾ!

'ಅಭಿ' ಚಿತ್ರದ ಮೂಲಕ ಬಣ್ಣ ಹಚ್ಚಿದ ರಮ್ಯಾ!

ಇನ್ನು ರಮ್ಯಾ ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ 'ಅಪ್ಪು' ಮೂಲಕ ಲಾಂಚ್ ಆಗಬೆಕಿತ್ತು. ಆದರೆ ಕಾರಣಾಂತರಗಳಿಂದಾಗಿ ಈ ಸಿನಿಮಾದಲ್ಲಿ ರಮ್ಯಾ ನಟಿಸಲಿಲ್ಲ. ಆ ಪಾತ್ರ ರಕ್ಷಿತಾ ಪಾಲಾಯಿತು. ಹೀಗಾಗಿ ಕನ್ನಡದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಬ್ಯಾನರ್‌ನ, ಅಪ್ಪು ನಟನೆಯ ಎರಡನೇ ಚಿತ್ರಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು.

ಕನ್ನಡದ ನಂ.1 ನಟಿ ಆಗಿದ್ದ ರಮ್ಯಾ!

ಕನ್ನಡದ ನಂ.1 ನಟಿ ಆಗಿದ್ದ ರಮ್ಯಾ!

'ಅಭಿ' ನಂತರ ರಮ್ಯಾ ಅಭಿನಯಸಿದ 'ಎಕ್ಸ್‌ಕ್ಯೂಸ್ ಮಿ' ಚಿತ್ರ ಕೂಡ ಸೂಪರ್ ಹಿಟ್ ಆಯ್ತು. ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲೂ ಗೆದ್ದವು. ಹಾಗಾಗಿ ಮೂರನೇ ಚಿತ್ರವನ್ನು ರಮ್ಯಾ ತೆಲುಗಿನಲ್ಲಿ ಮಾಡಿದರು. ಅತೀ ಕಡಿಮೆ ಅವಧಿಯಲ್ಲಿ ಬೇರೆ ಭಾಷೆಗೆ ಹೋದ ಕನ್ನಡದ ನಟಿ ಎಂಬ ಕೀರ್ತಿ ರಮ್ಯಾಗೆ ಧಕ್ಕಿತು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ರಮ್ಯಾ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ಟಾಪ್‌ನಲ್ಲಿರುವಾಗಲೆ ರಮ್ಯಾ ರಾಜಕಿಯಕ್ಕೆ ಧುಮುಕಿದರು.

ಸದ್ಯದಲ್ಲೇ ರಮ್ಯಾ ಕಮ್‌ಬ್ಯಾಕ್!

ಸದ್ಯದಲ್ಲೇ ರಮ್ಯಾ ಕಮ್‌ಬ್ಯಾಕ್!

ಮಂಡ್ಯ ಕ್ಷೇತ್ರದ ಸಂಸದೆಯಾಗಿ ಕೆಲಸ ಮಾಡಿದರು. ನಂತರ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು. ಸದ್ಯ ಸಿನಿಮಾ ಮತ್ತು ರಾಜಕಾರಣದಿಂದ ದೂರವಿದ್ದಾರೆ. ಆದರೆ ಸಿನಿಮಾರಂಗಕ್ಕೆ ಮತ್ತೆ ಬರುವ ಹಸಿರು ನಿಶಾನೆಯನ್ನು ತೋರಿದ್ದಾರೆ. ನಟಿ ರಮ್ಯಾ ಮತ್ತೆ ಸಿನಿಮಾ ಮಾಡುವುದುದಾಗಿ ಹೇಳಿಕೊಂಡಿದ್ದರೆ. ಈಗಾಗಲೇ ಸಾಕಷ್ಟು ಕಥೆಗಳನ್ನು ಕಥೆಗಳನ್ನು ಕೇಳುತ್ತಿದ್ದಾರೆ. ತಮಗೆ ಹೊಂದಾಣಿಕೆ ಆಗುವ ಸಿನಿಮಾ ಕಥೆಯನ್ನು ಆಯ್ಕೆ ಮಾಡಿಕೊಂಡು ಬಿಗ್ ಸ್ಕ್ರೀನ್‌ಗೆ ರಮ್ಯಾ ರೀ ಎಂಟ್ರಿ ಕೊಡಲಿದ್ದಾರೆ.

More from Filmibeat

English summary
After Compliting 19 Years In Films Actress Ramya Comeback, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X