ಅಂಬರೀಶ್ ನಿಧನಕ್ಕೆ ನಟಿ ರಮ್ಯಾ ಟ್ವೀಟ್
ನಟ ಅಂಬರೀಶ್ ನಿಧನಕ್ಕೆ ಇಡೀ ಕರ್ನಾಟಕಕ್ಕೆ ಕತ್ತಲು ಆವರಿಸಿದೆ. ಕನ್ನಡ ಚಿತ್ರರಂಗ ಮತ್ತೊಂದು ಹೆಮ್ಮೆಯ ನಟನನ್ನು ಕಳೆದುಕೊಂಡಿದೆ. ಚಿತ್ರರಂಗವೆಂಬ ಕುಟುಂಬದ ಒಬ್ಬ ಹಿರಿಯಣ್ಣ ಅಗಲಿದ್ದು, ಇಡೀ ಚಿತ್ರರಂಗ ಅವರಿಗೆ ಸಂತಾಪ ಸೂಚಿಸಿದೆ.
ನಟಿ ರಮ್ಯಾ ಸಹ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಅಂಬರೀಶ್ ಅವರ ನೆನಪು ಮಾಡಿಕೊಂಡಿದ್ದಾರೆ. ''ಅಂಬರೀಶ್ ಅಂಕಲ್ ಅವರ ಸುದ್ದಿ ಕೇಳಿ ನಾನು ತೀವ್ರ ದುಃಖಿತಳಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸಾವಿಗೆ ನನ್ನ ಸಂತಾಪಗಳು. ಅವರ ಪ್ರೀತಿಯನ್ನು ನಾವು ಎಂದಿಗೂ ನೆನೆಪಿನಲ್ಲಿಡುತ್ತೇವೆ.'' ಎಂದು ಟ್ವೀಟ್ ಮಾಡಿದ್ದಾರೆ.
ಅಂಬರೀಶ್ ಹಾಗೂ ರಮ್ಯಾ ಬಹಳ ವರ್ಷಗಳಿಂದ ಒಡನಾಟ ಹೊಂದಿದವರು. ಸಿನಿಮಾ ಮಾತ್ರವಲ್ಲದೆ ರಾಜಕೀಯ ಜೀವನದಲ್ಲಿ ಕೂಡ ಅಂಬರೀಶ್ ಜೊತೆ ರಮ್ಯಾ ಇದ್ದರು. ರಾಜಕೀಯ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು.

ಅಂದಹಾಗೆ, 'ಕಠಾರಿವೀರ ಸುರಸುಂದರಾಂಗಿ' ಸಿನಿಮಾದಲ್ಲಿ ಅಂಬರೀಶ್ ಹಾಗೂ ರಮ್ಯಾ ಒಟ್ಟಿಗೆ ನಟಿಸಿದ್ದರು.
ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಬರೀಶ್ ಅಂತಿಮ ಸಂಸ್ಕಾರ ನಡೆಯಲಿದೆ.


Click it and Unblock the Notifications











