'ಇಂದಿನ ರಾಜಕೀಯ ಪ್ರಾಮಾಣಿಕರನ್ನು ಪ್ರೋತ್ಸಾಹಿಸುತ್ತಿಲ್ಲ' ಎಂದ ರಮ್ಯಾ

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ಐಎಎಸ್ ಆಫೀಸರ್ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಿರುವುದಕ್ಕೆ ನಟಿ-ರಾಜಕಾರಣಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ರಮ್ಯಾ ''ಪ್ರಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಇಂದಿನ ರಾಜಕೀಯ ಪ್ರೋತ್ಸಾಹಿಸುವುದಿಲ್ಲ'' ಎಂದಿದ್ದಾರೆ.

Recommended Video

Rohini Sindhuri ಬಗ್ಗೆ ನಟಿ Ramya ಏನ್ ಹೇಳಿದ್ದಾರೆ? | Filmibeat Kannada

ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಮತ್ತು ಡಿಸಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ವರ್ಗಾವಣೆಯಲ್ಲಿ ಅಂತ್ಯ ಕಂಡಿದೆ. ರೋಹಿಣಿ ಸಿಂಧೂರಿ ಅವರನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿದ್ರೆ, ಶಿಲ್ಪಾ ನಾಗ್‌ರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಇ-ಆಡಳಿತ ವಿಭಾಗದ ನಿರ್ದೇಶಕರಾಗಿ ಅಧಿಕಾರ ನೀಡಲಾಗಿದೆ. ಮುಂದೆ ಓದಿ...

ರೋಹಿಣಿ ಸಿಂಧೂರಿ ಕೆಲಸದ ಬಗ್ಗೆ ರಮ್ಯಾ ಮೆಚ್ಚುಗೆ

ರೋಹಿಣಿ ಸಿಂಧೂರಿ ಕೆಲಸದ ಬಗ್ಗೆ ರಮ್ಯಾ ಮೆಚ್ಚುಗೆ

ಮೈಸೂರು ಮಾಜಿ ಡಿಸಿ ರೋಹಿಣಿ ಸಿಂಧೂರಿ ಕೆಲಸದ ಬಗ್ಗೆ ಮಂಡ್ಯ ಮಾಜಿ ಸಂಸದೆ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ರಮ್ಯಾ ''ಸಿಂಧೂರಿ ಕಾರ್ಯ ವೈಖರಿಯನ್ನು ನಾನು ಅಂದು ಮೆಚ್ಚಿದ್ದೇನೆ, ಈಗಲೂ ಮೆಚ್ಚಿಕೊಳ್ಳುತ್ತೇನೆ. ಆದರೆ ಇಂದಿನ ರಾಜಕೀಯ, ಉತ್ತಮ ಕೆಲಸಗಳನ್ನು, ಪ್ರಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಹಾಗೂ ಬೆಂಬಲಿಸುತ್ತಿಲ್ಲ'' ಎಂದು ನಿರಾಸೆ ವ್ಯಕ್ತಪಡಿಸಿದರು.

ಸಿಂಧೂರಿ ಬಯೋಪಿಕ್ ಚರ್ಚೆ?

ಸಿಂಧೂರಿ ಬಯೋಪಿಕ್ ಚರ್ಚೆ?

ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಅವರ ಕುರಿತು ಸಿನಿಮಾ ಮಾಡುವ ಬಗ್ಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲಂಸ್ ಸಂಸ್ಥೆ ಈ ಚಿತ್ರ ನಿರ್ಮಿಸಲು ಚಿಂತನೆ ನಡೆಸಿದ್ದು, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ನಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಸಿನಿಮಾ ಮುಗಿದ ಅಧ್ಯಾಯ

ಸಿನಿಮಾ ಮುಗಿದ ಅಧ್ಯಾಯ

ರಾಜಕೀಯಕ್ಕೆ ಎಂಟ್ರಿ ಆದ್ಮೇಲೆ ನಟಿ ರಮ್ಯಾ ಯಾವುದೇ ಸಿನಿಮಾ ಮಾಡಿಲ್ಲ. ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದಲೂ ಮೋಹಕತಾರೆ ಅಂತರ ಕಾಯ್ದುಕೊಂಡಿದ್ದಾರೆ. ಹಾಗಾಗಿ, ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಆದರೆ, ಸಿನಿಮಾ ಮುಗಿದ ಅಧ್ಯಾಯ ಎಂದು ರಮ್ಯಾ ಅದಾಗಲೇ ಹೇಳಿಬಿಟ್ಟಿದ್ದಾರೆ.

ಸಿಂಧೂರಿ ಸಿನಿಮಾದಲ್ಲಿ ರಮ್ಯಾ?

ಸಿಂಧೂರಿ ಸಿನಿಮಾದಲ್ಲಿ ರಮ್ಯಾ?

ರೋಹಿಣಿ ಸಿಂಧೂರಿ ಕುರಿತು ಸಿನಿಮಾ ಮಾಡಲಾಗುವುದು ಎಂಬ ಚರ್ಚೆಯ ನಡುವೆ, ರಮ್ಯಾ ಅವರೇ ಆ ಪಾತ್ರ ಮಾಡಿದ್ರೆ ಹೆಂಗೆ ಎಂಬ ಆಸೆಯೂ ಇದೆ. ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರಬೇಕೆ? ಯಾವ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ರೆ ನಿಮಗೆ ಇಷ್ಟ ಆಗುತ್ತದೆ ಎಂದು ಕಾಮೆಂಟ್ ಮೂಲಕ ತಿಳಿಸಿ.

More from Filmibeat

English summary
Actress-Politician ramya disappointed after rohini sindhuri transferred from mysuru dc post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X