twitter
    For Quick Alerts
    ALLOW NOTIFICATIONS  
    For Daily Alerts

    'ಪಲ್ಲಂಗ' ಪ್ರಸ್ತಾಪಿಸಿದ ಜಗ್ಗೇಶ್ ಗೆ ಧಿಕ್ಕಾರ ಕೂಗುತ್ತಿರುವ ರಮ್ಯಾ ಅಭಿಮಾನಿಗಳು!

    By Harshitha
    |

    Recommended Video

    ಜಗ್ಗೇಶ್ ವಿರುದ್ಧ ಸಿಡಿದೆದ್ದ ರಮ್ಯಾ ಅಭಿಮಾನಿಗಳು | Filmibeat Kannada

    ನವರಸ ನಾಯಕ ಜಗ್ಗೇಶ್ ಹಾಗೂ ನಟಿ, ಮಾಜಿ ಸಂಸದೆ ರಮ್ಯಾ ನಡುವಿನ ಟ್ವಿಟ್ಟರ್ ವಾರ್ ಈಗ ಬೇರೆಯದ್ದೇ ಹಂತ ತಲುಪಿದೆ.

    ಬೆಂಗಳೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣದಲ್ಲಿ ''ರೈತರೇ ನಮ್ಮ ಪ್ರಮುಖ (TOP) ಆದ್ಯತೆ. TOP ಅಂದ್ರೆ ಟೊಮ್ಯಾಟೋ, ಈರುಳ್ಳಿ, ಆಲೂಗೆಡ್ಡೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಹೇಳಿಕೆಯನ್ನ ಟೀಕಿಸಲು ಮುಂದಾದ ರಮ್ಯಾ ''ನೀವು ನಶೆಯಲ್ಲಿ (POT) ಇದ್ದಾಗ ಹೀಗೆ ಆಗೋದು'' ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ನಿನ್ನೆ ಟ್ವಿಟ್ಟರ್ ಲೋಕದಲ್ಲಿ ವಿವಾದದ ಕೇಂದ್ರ ಬಿಂದು ಆಗಿತ್ತು.

    ರಮ್ಯಾ ಮಾಡಿದ ನಶೆ ಟ್ವೀಟ್ ಗೆ ಜಗ್ಗೇಶ್ ತಿರುಗೇಟು ನೀಡಿದ್ದರು. ''ಸ್ಟಾರ್ ಹೋಟೆಲ್ ನಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿ, ಪ್ರತಿ ಚಿತ್ರದ ಕ್ಯಾಚ್ ಗೆ ಅದೇ ಸ್ಟಾರ್ ಹೋಟೆಲ್ ನಲ್ಲಿ ಪಾರ್ಟಿ, ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್, ಆಮೇಲೆ ಮೆಟ್ಟಿಲು ಏರಲು ಹೆಡ್ ಆಫೀಸ್ ಕ್ಯಾಚ್ ಹಾಕಿದವರಿಗೆ ಮೋದಿ ಆದರೇನು? ಗಾಂಧಿ ಆದರೇನು? ಯಾರಿಗೆ ಬೇಕಾದರೂ ಹಂಗಿಸುತ್ತಾರೆ.! ಕಾರಣ, ಶ್ರಮವಿಲ್ಲದೆ ಪಲ್ಲಂಗ ಏರಿದವರಲ್ಲವೇ.?'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

    ಏಟಿಗೆ ಎದಿರೇಟು ನೀಡುವ ಭರದಲ್ಲಿ ಜಗ್ಗೇಶ್ 'ಪಾರ್ಟಿ' ಮತ್ತು 'ಪಲ್ಲಂಗ' ಎಂಬ ಪದ ಪ್ರಯೋಗ ಮಾಡಿದ್ರಿಂದಾಗಿ ರಮ್ಯಾ ಅಭಿಮಾನಿಗಳು ಕುಪಿತಗೊಂಡಿದ್ದಾರೆ. ಒಂದು ಹೆಣ್ಣಿನ ಬಗ್ಗೆ ಕೇವಲವಾಗಿ ಮಾತನಾಡಿದ ಜಗ್ಗೇಶ್ ಗೆ ರಮ್ಯಾ ಫ್ಯಾನ್ಸ್ ಶೇಮ್ ಶೇಮ್ ಎನ್ನುತ್ತಿದ್ದಾರೆ.

    ಟ್ವಿಟ್ಟರ್ ನಲ್ಲಿ #IStandWithRamya ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿರುವ ರಮ್ಯಾ ಅಭಿಮಾನಿಗಳು, ಇದೇ ಹ್ಯಾಶ್ ಟ್ಯಾಗ್ ಅಡಿ ತಮ್ಮ ಅಭಿಪ್ರಾಯ ಹಂಚಿಕೊಂಡು ಜಗ್ಗೇಶ್ ಗೆ ಧಿಕ್ಕಾರ ಕೂಗುತ್ತಿದ್ದಾರೆ. ಅಂತಹ ಕೆಲ ಟ್ವೀಟ್ ಗಳು ಇಲ್ಲಿದೆ ನೋಡಿ...

    ಒಂದೇ ಒಂದು ಮಾತು ಬೈಯ್ದಿಲ್ಲ.!

    ಒಂದೇ ಒಂದು ಮಾತು ಬೈಯ್ದಿಲ್ಲ.!

    ''ಈ ಮಣ್ಣಿನ ನಾಯಕಿ, ಚಂದನವನದ ರಾಣಿ, ಜಗ್ಗೇಶ್ ಬಗ್ಗೆ ಒಂದೇ ಒಂದು ಕೆಟ್ಟ ಪದವೂ ಆಡದ ರಮ್ಯಾಗೆ ಅವಮಾನಿಸಿದ ಜಗ್ಗೇಶ್ ಗೆ ತಲುಪುವವರೆಗೂ ಈ ಫೋಸ್ಟ್ ನ ಶೇರ್ ಮಾಡಿ'' ಎಂದು ರಮ್ಯಾ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

    ಪಾರ್ಟಿ ಕೊಟ್ಟು ಪಾರ್ಟ್ ಗಿಟ್ಟಿಸ್ತಿದ್ರಾ ರಮ್ಯಾ? ಜಗ್ಗೇಶ್ ಬಾಯಲ್ಲಿ 'ಪಲ್ಲಂಗ'ದ ಮಾತು! ಇದೇನಿದು?ಪಾರ್ಟಿ ಕೊಟ್ಟು ಪಾರ್ಟ್ ಗಿಟ್ಟಿಸ್ತಿದ್ರಾ ರಮ್ಯಾ? ಜಗ್ಗೇಶ್ ಬಾಯಲ್ಲಿ 'ಪಲ್ಲಂಗ'ದ ಮಾತು! ಇದೇನಿದು?

    ಚೀಪ್ ಮೆಂಟಾಲಿಟಿ

    ಚೀಪ್ ಮೆಂಟಾಲಿಟಿ

    ಜಗ್ಗೇಶ್ ಅವರದ್ದು ಚೀಪ್ ಪರ್ಸನಾಲಿಟಿ ಮತ್ತು ಚೀಪ್ ಮೆಂಟಾಲಿಟಿ.! ಹಾಗಂತಿರೋದು ರಮ್ಯಾ ಫ್ಯಾನ್ಸ್.

    ರಮ್ಯಾ ಜೊತೆ ನಾವಿದ್ದೇವೆ.!

    ರಮ್ಯಾ ಜೊತೆ ನಾವಿದ್ದೇವೆ.!

    ''ರಾಜಕೀಯ ಹಾಗೂ ಸಾಮಾಜಿಕವಾಗಿ ಹೆಣ್ಣು ಪರಿಚಯಿಸಿಕೊಂಡರೆ ಕೆಲವು ಗಂಡು ಕುಲಗಳು ಹೆಣ್ಣನ್ನು ಕೆಟ್ಟದಾಗಿ ಬಿಂಬಿಸುತ್ತವೆ. ಇದಕ್ಕೆ ಹೆದರಿ ಮನೆಯೊಳಗೆ ಕುಳಿತಿದ್ದರೆ ಇಂದಿರಾ, ಕಲ್ಪನಾ, ಮೇರಿ ಕೋಮ್, ಮದರ್ ತೆರೆಸಾ ಪ್ರಪಂಚದಲ್ಲಿ ಮಿಂಚುತ್ತಿರಲಿಲ್ಲ. ರಮ್ಯಾ ನಿಮ್ಮ ಜೊತೆ ನಾವಿದ್ದೇವೆ'' ಎಂದಿದ್ದಾರೆ ರಮ್ಯಾ ಅಪ್ಪಟ ಅಭಿಮಾನಿ ರೇಖಾ.

    ಶೇಮ್ ಶೇಮ್

    ಶೇಮ್ ಶೇಮ್

    ಜಗ್ಗೇಶ್ ಗೆ ಶೇಮ್ ಶೇಮ್ ಎನ್ನುತ್ತಿದ್ದಾರೆ ರಮ್ಯಾ ಅಭಿಮಾನಿಗಳು.

    ಎಂದೆಂದಿಗೂ ರಮ್ಯಾ ಪರ

    ಎಂದೆಂದಿಗೂ ರಮ್ಯಾ ಪರ

    ''ನಿನ್ನೆ, ಇಂದು ಮಾತ್ರ ಅಲ್ಲ. ನಾಳೆ, ನಾಡಿದ್ದು ಮತ್ತು ಎಂದೆಂದಿಗೂ ನಾವು ಪರ ನಿಲ್ಲುತ್ತೇವೆ'' ಎನ್ನುತ್ತಿದೆ ರಮ್ಯಾ ಅಭಿಮಾನಿ ಬಳಗ

    ಕನ್ನಡಿ ತೋರಿಸ್ತಾರಂತೆ.!

    ಕನ್ನಡಿ ತೋರಿಸ್ತಾರಂತೆ.!

    ಎಲ್ಲೆ ಮೀರಿ ಮಾತನಾಡಿರುವ ಜಗ್ಗೇಶ್ ಬಗ್ಗೆ ರಮ್ಯಾ ಅಭಿಮಾನಿಗಳು ಲೇವಡಿ ಮಾಡುತ್ತಿದ್ದಾರೆ.

    ಮಗಳಿದಿದ್ರೆ ಗೊತ್ತಾಗುತ್ತಿತ್ತು.!

    ಮಗಳಿದಿದ್ರೆ ಗೊತ್ತಾಗುತ್ತಿತ್ತು.!

    ''ಜಗ್ಗೇಶ್ ಗೆ ಓರ್ವ ಪುತ್ರಿ ಇರಬೇಕಿತ್ತು'' ಅಂತಾವ್ರೆ ರಮ್ಯಾ ಫ್ಯಾನ್ಸ್

    ಕೂಡಲೆ ಕ್ಷಮೆ ಕೇಳಿ

    ಕೂಡಲೆ ಕ್ಷಮೆ ಕೇಳಿ

    ''ರಮ್ಯಾ ಅವರನ್ನ ಸಿನಿಮಾ ಲೋಕಕ್ಕೆ ಪರಿಚಯಿಸಿದ್ದು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್. ಜಗ್ಗೇಶ್ ಹೇಳಿಕೆ ತುಂಬ ಕೀಳು ಮನಃಸ್ಥಿತಿಯದ್ದಾಗಿದೆ. ರಾಜ್ ಕುಮಾರ್ ಕುಟುಂಬಕ್ಕೆ ಮತ್ತು ಕನ್ನಡ ಚಲನ ಚಿತ್ರೋದ್ಯಮ ಹಾಗೂ ಸಮಸ್ತ ಕನ್ನಡ ನಟಿಯರಿಗೆ ಜಗ್ಗೇಶ್ ಅವಹೇಳನ ಮಾಡಿದ್ದಾರೆ. ಈ ಕೂಡಲೆ ಕ್ಷಮೆ ಕೇಳಬೇಕು'' ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

    ಜಗ್ಗೇಶ್ ಗೆ ಅಭಿಮಾನಿಗಳ ಪ್ರಶ್ನೆ

    ಜಗ್ಗೇಶ್ ಗೆ ಅಭಿಮಾನಿಗಳ ಪ್ರಶ್ನೆ

    ''ಕಲಾವಿದರು ಒಂದೇ ಕುಟುಂಬ ಅಂತ ಪದೇ ಪದೇ ಹೇಳುವ ಜಗ್ಗೇಶ್, ರಮ್ಯಾಗೆ ಕೊಡುವ ಗೌರವ ಇದೇನಾ.?'' ಎಂಬ ಪ್ರಶ್ನೆ ಸದ್ಯ ಉದ್ಭವ ಆಗಿದೆ

    ವ್ಯಾಪಕ ವಿರೋಧ ವ್ಯಕ್ತವಾಗಿದೆ

    ವ್ಯಾಪಕ ವಿರೋಧ ವ್ಯಕ್ತವಾಗಿದೆ

    ಒಂದು ಹೆಣ್ಣಿನ ಬಗ್ಗೆ ಬಹಿರಂಗವಾಗಿ ದೂಷಣೆ ಮಾಡಿರುವ ಜಗ್ಗೇಶ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

    ಸಹಿಸುವುದು ಹೇಗೆ.?

    ಸಹಿಸುವುದು ಹೇಗೆ.?

    ''ಯಾರೇ ಆಗಲಿ... ಯಾವ ಪಕ್ಷದವರೇ ಆಗಿರಲಿ... ಶ್ರಮವಿಲ್ಲದೇ ಪಲ್ಲಂಗ ಏರಿದವರು ಎಂದು ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದರೆ ಸಹಿಸುವುದಾದರೂ ಹೇಗೆ.?'' ಎಂಬ ಕಾಮೆಂಟ್ ಗಳೇ ಹೆಚ್ಚಾಗಿವೆ.

    English summary
    Ramya fans have taken their twitter account to criticize Jaggesh for his comment against Ramya. EX MP Ramya fans are trending #IStandWithRamya in Twitter.
    Tuesday, February 6, 2018, 13:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X