ಏಪ್ರಿಲ್ ನಲ್ಲಿ ನಡೆಯಲಿದೆ ಫ್ಯಾನ್ಸ್ ಕ್ರಿಕೆಟ್ ಲೀಗ್
'ಫ್ಯಾನ್ಸ್ ಕ್ರಿಕೆಟ್ ಲೀಗ್' ಪಂದ್ಯಾವಳಿಯನ್ನ ಈ ಹಿಂದೆ ಯಶಸ್ವಿಯಾಗಿ 4 ಸೀಸನ್ ಗಳನ್ನು ಆಯೋಜನೆ ಮಾಡಿದ್ದು, ಈ ಬಾರಿ ಏಪ್ರಿಲ್ ನಲ್ಲಿ ಈ ಕ್ರಿಕೆಟ್ ಲೀಗ್ ಶುರು ಆಗುತ್ತಿದೆ.
ಮೊದಲ ಸೀಸನ್ ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬದ ವಿಶೇಷವಾಗಿ ಆಯೋಜನೆ ಮಾಡಿತ್ತು . ಅದರಲ್ಲಿ ರಮ್ಯಾ ಅಭಿಮಾನಿಗಳು ಗೆಲುವು ಕಂಡಿದ್ದರು. ಕಿಚ್ಚ ಸುದೀಪ್ ಅಭಿಮಾನಿಗಳು ಎರಡನೇ ಸ್ಥಾನ ಪಡೆದಿದ್ದರು
ಎರಡನೇ ಸೀಸನ್ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಹುಟ್ಟಿದ ಹಬ್ಬದ ಅಂಗವಾಗಿ ವಿದ್ಯಾರಣ್ಯಪುರದಲ್ಲಿ ಮಾಡಲಾಗಿತ್ತು ಪುನಃ ರಮ್ಯಾ ಅಭಿಮಾನಿಗಳು ವಿಜೇತರಾಗಿ ಹೊರಹೊಮ್ಮಿ, ಕಾಶೀನಾಥ್ ಅಭಿಮಾನಿಗಳು ಎರಡನೇ ಸ್ಥಾನ ಪಡೆದರು.

ಮೂರನೇ ಸೀಸನ್ ಅಭಿನಯ ಭಾರ್ಗವ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಹುಟ್ಟಿದ ಹಬ್ಬದ ಅಂಗವಾಗಿ ಯಲಹಂಕದಲ್ಲಿ ಆಯೋಜನೆ ಮಾಡಲಾಗಿತ್ತು ಅದರಲ್ಲಿ ದರ್ಶನ್ ತೂಗುದೀಪ ಅವರ ಅಭಿಮಾನಿ ಬಳಗ ತೂಗುದೀಪ ಗ್ರೂಪ್ಸ್ ವಿಜೇತರಾಗಿ, ಕನ್ನಡ ಮಾಣಿಕ್ಯ ತಂಡ ಎರಡನೇ ಸ್ಥಾನ ಪಡೆಯಿತು.
ಇನ್ನು ನಾಲ್ಕನೇ ಸೀಸನ್ ಸಹ ಬಹಳ ವಿಶೇಷವಾಗಿ ನಡೆದಿತ್ತು. ಇದು ಕೂಡ ಎಲ್ಲಾ ಸೀಸನ್ ನಂತೆ ಬಾರಿ ಯಶಸ್ವಿಯಾಗಿ ನಡೆದಿತ್ತು. ಇದರಲ್ಲಿ ಮೊದಲ ಪ್ರಶಸ್ತಿ ರಮ್ಯಾ ಫ್ಯಾನ್ಸ್ ಗೆದ್ದರೆ, ಎರಡನೇ ಸ್ಥಾನವನ್ನ ತೂಗುದೀಪ ತಂಡ ಪಡೆದುಕೊಂಡಿತ್ತು.
ಇದೀಗ ಯಶಸ್ವಿ ನಾಲ್ಕು ಸೀಸನ್ ಗಳ ನಂತರ ಐದನೇ ಸೀಸನ್ ಇದೇ ಏಪ್ರಿಲ್ 7 ರಂದು ನಡೆಯಲಿದ್ದು, ಇದಕ್ಕೆ ಇಡೀ ಸ್ಯಾಂಡಲ್ ವುಡ್ ನ ತಾರೆಯರು, ತಂತ್ರಜ್ಞರು ಹಾಗೂ ಅಭಿಮಾನಿಗಳು ಭಾಗಿಯಾಗಲಿದ್ದಾರೆ.
ಹೊಯ್ಸಳ ಕ್ರೀಡಾಂಗಣ ಯಲಹಂಕ ಉಪನಗರದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ನಟಿ ರಮ್ಯಾ ಅಭಿಮಾನಿಗಳ ಸಂಘದ ಭರತ್ ಎಸ್ ಎನ್ ಈ ಟೂರ್ನಿಯನ್ನು ಆಯೋಜನೆ ಮಾಡುತ್ತಿದ್ದಾರೆ.


Click it and Unblock the Notifications











