»   » ಫೇಕ್ ಅಕೌಂಟ್ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಕ್ಲಾರಿಟಿ ಕೊಟ್ಟ ರಮ್ಯಾ

ಫೇಕ್ ಅಕೌಂಟ್ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಕ್ಲಾರಿಟಿ ಕೊಟ್ಟ ರಮ್ಯಾ

Posted By:
Subscribe to Filmibeat Kannada
ಫೇಕ್ ಅಕೌಂಟ್ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಕ್ಲಾರಿಟಿ ಕೊಟ್ಟ ರಮ್ಯಾ | Filmibeat Kannada

ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಟೀಕಿಸಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಅಧ್ಯಕ್ಷೆ ರಮ್ಯಾ ಟ್ವೀಟ್ ಮಾಡಿದ್ಮೇಲೆ ಬಿಜೆಪಿ ಪಕ್ಷದ ನಟ ಜಗ್ಗೇಶ್ ಹಾಗೂ ಶಿಲ್ಪಾ ಗಣೇಶ್ ಟ್ವಿಟ್ಟರ್ ಸಮರಕ್ಕೆ ನಾಂದಿ ಹಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

ಇದೇ ಗ್ಯಾಪ್ ನಲ್ಲಿ ಫೇಕ್ ಅಕೌಂಟ್ ಗಳ ಬಗ್ಗೆ ರಮ್ಯಾ ಮಾತನಾಡಿರುವ ವಿಡಿಯೋವೊಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ವೈರಲ್ ಆಯ್ತು. ಆ ವಿಡಿಯೋದಲ್ಲಿ ''ಫೇಕ್ ಅಕೌಂಟ್ ಕ್ರಿಯೇಟ್ ಮಾಡುವುದು ತಪ್ಪಲ್ಲ'' ಎನ್ನುವ ಅರ್ಥದಲ್ಲಿ ರಮ್ಯಾ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಮತ್ತೊಮ್ಮೆ ರಮ್ಯಾ ವಿವಾದದ ಕೇಂದ್ರ ಬಿಂದು ಆದರು.

ರಮ್ಯಾ ಅವರ ಈ ವಿಡಿಯೋ ನೋಡಿ ಜಗ್ಗೇಶ್, ಶಿಲ್ಪಾ ಗಣೇಶ್ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಚಾಟಿ ಏಟು ಕೊಟ್ಟರು. ಇದೀಗ ಇದೇ ವಿಡಿಯೋ ಬಗ್ಗೆ ರಮ್ಯಾ ಫೇಸ್ ಬುಕ್ ನಲ್ಲಿ ವಿವರವಾಗಿ ಸ್ಪಷ್ಟನೆ ನೀಡಿದ್ದಾರೆ.

ಅಂದು ಸಭೆಯಲ್ಲಿ ನಡೆದಿದ್ದು ಏನು.? ತಾವು ಆಡಿದ ಮಾತುಗಳೇನು.? ಎಂಬುದರ ಬಗ್ಗೆ ರಮ್ಯಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ...

ಫೇಕ್ ಅಕೌಂಟ್ ಅಂದ್ರೆ ಏನು.?

''ಫೆಬ್ರವರಿ-2018 ರಂದು ನಡೆದಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಸಂವಾದದಲ್ಲಿದ್ದ ಸಂದರ್ಭದಲ್ಲಿ ಅಲ್ಲಿದ್ದ ಒಬ್ಬರು ಫೇಕ್ ಅಕೌಂಟ್ ಗಳ ಬಗ್ಗೆ ಪ್ರಶ್ನಿಸಿದರು. ಆಗ ನಾನು ಹೇಳಿದ್ದಿಷ್ಟು- ''ನೀವು ನಿಮ್ಮ ನಿಜವಾದ ಗುರುತನ್ನು ತೋರಿಸಿಕೊಳ್ಳದೆ ಬೇರೆಯವರ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿದರೆ ಅದು ಫೇಕ್ ಅಕೌಂಟ್. ಇನ್ನೊಂದು ತರಹದ ಫೇಕ್ ಅಕೌಂಟ್ ಅಂದ್ರೆ ತಾವಾಗೇ ಕಾರ್ಯ ನಿರ್ವಹಿಸುವ Bot ಗಳು ಅಥವಾ ಮಷೀನ್ ಗಳು'' - ರಮ್ಯಾ

ಬಯಲಾಯ್ತು ರಮ್ಯಾ ಫೇಕ್ ಅಕೌಂಟ್ ಕಥೆ

ಎರಡು ಅಕೌಂಟ್ ಇರುವ ಬಗ್ಗೆ...

''ನೀವು ನಿಮ್ಮ ವೈಯುಕ್ತಿಕ ಅಕೌಂಟ್ ನೊಂದಿಗೆ ಇನ್ನೊಂದು ಅಕೌಂಟ್ ಅಫೀಶಿಯಲ್ ಕೆಲಸಕ್ಕಾಗಿ ಹೊಂದಿದ್ದರೆ ಅದು ಪರವಾಗಿಲ್ಲ. ನಾನು ಕೂಡ ಫೇಸ್ ಬುಕ್ ನಲ್ಲಿ ನನ್ನ ವೈಯುಕ್ತಿಕ ಖಾತೆ ದಿವ್ಯ ಸ್ಪಂದನ ಹಾಗೂ ಪೇಜ್ ದಿವ್ಯ ಸ್ಪಂದನ/ರಮ್ಯಾ ಹೊಂದಿದ್ದೇನೆ'' - ರಮ್ಯಾ

ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ರಮ್ಯಾ

ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಂತ ಹೇಳಿಲ್ಲ

''ಈ ಸಂವಾದದ ವಿಡಿಯೋವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ತಿರುಚಿರುವ ಬಿಜೆಪಿಯವರು ಇಂತಹ ಕೆಲಸ ಮಾಡ್ತಾ ಇರೋದು ಹೊಸದೇನಲ್ಲ. ಅದಕ್ಕೆ ಹೆದರುವ ಪ್ರಶ್ನೆಯೂ ಇಲ್ಲ. ನೀವು ಯಾವುದೇ ಪೇಜ್ ಗೆ ಅಡ್ಮಿನ್ ಆಗಿದ್ದರೆ ಇದು ಅರ್ಥವಾಗದ ವಿಷಯವೂ ಅಲ್ಲ. ನಾನ್ಯಾರಿಗೂ ಫೇಕ್ ಅಕೌಂಟ್ create ಮಾಡಿ ಅಂತ ಹೇಳಿಲ್ಲ . ಇಲ್ಲಿ ಸ್ಪಷ್ಟ ಪಡಿಸ್ತಾ ಇರೋದೂ ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆ ಇರುವ ಅಭಿಮಾನಿಗಳಿಗಾಗಿ ಹಾಗೂ ನನ್ನ ಎಲ್ಲ ಬೆಂಬಲಿಗರಿಗಾಗಿ'' - ರಮ್ಯಾ

ಕ್ಷುಲ್ಲಕ ವಿಷಯವನ್ನು ದೊಡ್ಡದು ಮಾಡುವುದು ಯಾಕೆ.?

''ನಾವೆಲ್ಲಾ ಮುಖ್ಯವಾಗಿ ಅರ್ಥ ಮಾಡ್ಕೋಬೇಕಾಗಿರೋದು ಯಾಕೆ ಈ ತರದ ಕ್ಷುಲ್ಲಕ ವಿಷಯವನ್ನು ಜನರ ಮುಂದೆ ದೊಡ್ಡದಾಗಿ ಮಾಡ್ತಾರೆ ಅಂದ್ರೆ ನಿಜವಾದ ಸಮಸ್ಯೆಗಳನ್ನು ಮುಚ್ಚಿ ಹಾಕೋಕೆ. ದಿನ ಬೆಳಗಾದ್ರೆ ಟ್ವಿಟ್ಟರ್ ಫೇಸ್ಬುಕ್ ವಾಟ್ಸ್ ಆಪ್ ನೋಡೋ ಪ್ರತಿಯೊಬ್ಬರಿಗೂ ಯಾವುದು ಸುಳ್ಳು ಯಾವುದು ನಿಜ ಅಂತ ಗೊತ್ತಾಗೋಕೆ ಸ್ವಲ್ಪ ಟೈಮ್ ಬೇಕಾಗಬಹುದು. ಆದ್ರೆ ಸತ್ಯ ಯಾವತ್ತಿದ್ರೂ ಮೇಲೆ ಬರುತ್ತೆ'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ರಮ್ಯಾ.

English summary
Kannada Actress, EX MP, Congress Politician Ramya has taken her Facebook account to clarify about Fake account video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada