ಇಂತಹ ಸಂಕುಚಿತ ಮನಸ್ಸಿನ ಆಲೋಚನೆ ಬಿಟ್ಟುಬಿಡಿ- ಮತ್ತೆ ಕುಟುಕಿದ ನಟಿ ರಮ್ಯಾ

ನಟಿ ರಮ್ಯಾ ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಜೊತೆ ನ್ಯೂಯಾರ್ಕ್ ಪ್ರವಾಸ ಕೈಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಕೂಡಲೇ ವಿನಯ್ ಹಾಗೂ ರಮ್ಯಾ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಅರ್ಥದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು.

ಸ್ವತಃ ರಮ್ಮಾ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು. "ವಿನಯ್ ನನ್ನ ಸಹೋದರನಿದ್ದಂತೆ. ಸುಖಾಸುಮ್ಮನೆ ಏನೇನೋ ಊಹಿಸಿಕೊಳ್ಳಬೇಡಿ" ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಇದೇ ವಿಚಾರದ ಬಗ್ಗೆ ಮತ್ತೊಮ್ಮೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ. "ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟವಾದದ್ದನ್ನು ಪೋಸ್ಟ್ ಮಾಡಲು ನನಗೆ ಸ್ವಾತಂತ್ರ್ಯವಿದೆ. ಜನರು ತಮ್ಮ ಸಣ್ಣ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಿದ್ಧರಿಲ್ಲ" ಎಂದು ಬರೆದುಕೊಂಡಿದ್ದಾರೆ.

Ramya Hits Back at Rumors Stop Linking Me With Vinay Time to Change Your Mindset

ನಟ- ನಟಿ ಅಥವಾ ನಿರ್ದೇಶಕ- ನಟಿ, ನಿರ್ಮಾಪಕ- ನಟಿ ಸಾರ್ವಜನಿಕರವಾಗಿ ಸುತ್ತಾಡುವುದು ಕಂಡರೆ ಗುಸುಗುಸು ಶುರುವಾಗುತ್ತದೆ. ಇಬ್ಬರ ನಡುವೆ ಏನೋ ನಡೀತಿದೆ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ? ಅಂತೆಲ್ಲಾ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತದೆ. ಮೊಬೈಲ್ ಕ್ಯಾಮರಾ ಬಂದಮೇಲೆ ತಾರೆಯರು ಎಲ್ಲೇ ಹೋದರೂ ಬಂದರೂ ಫೋಟೊ, ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ತೇಲಿಬಿಡುತ್ತಾರೆ. ಇನ್ನು ತಾವೇ ಫೋಟೊ, ವೀಡಿಯೋ ಹಂಚಿಕೊಂಡರೆ ಊಹಾಪೋಹ ಗರಿಗೆದರುತ್ತದೆ.

ಹೀಗೆ ಒಟ್ಟೊಟ್ಟಿಗೆ ಸುತ್ತಾಡುವ ನಟ- ನಟಿಯರು ಬಳಿಕ ಪ್ರೀತಿಸಿ ಮದುವೆ ಆಗಿರುವ ಉದಾಹರಣೆಗಳು ಇವೆ. ಆದರೆ ಕೆಲವೊಮ್ಮೆ ಯಾರ್ಯಾರಿಗೂ ಏನೇನೊ ಲಿಂಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ತಮ್ಮ ಹಾಗೂ ವಿನಯ್ ಬಗ್ಗೆ ಇಂತಹ ಚರ್ಚೆ ಶುರುವಾಗುತ್ತಿದ್ದಂತೆ ಮೋಹಕ ತಾರೆ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಮತ್ತೊಂದು ಪೋಸ್ಟ್ ಮೂಲಕ ಎಲ್ಲರೂ ಬದಲಾಗಿ ಎಂದಿದ್ದಾರೆ.

Ramya Hits Back at Rumors Stop Linking Me With Vinay Time to Change Your Mindset

"ದಯವಿಟ್ಟು ಹೀಗೆಲ್ಲಾ ನಿರ್ಣಯಕ್ಕೆ ಬರುವುದನ್ನು ನಿಲ್ಸಿ. ವಿಶೇಷವಾಗಿ ಮಹಿಳೆಯರ ಬಗ್ಗೆ ಆ ರೀತಿ ಎಲ್ಲಾ ತೀರ್ಮಾನಕ್ಕೆ ಬಂದುಬಿಡಬೇಡಿ. ನಾನು ನನ್ನ ಪುರುಷ ಸ್ನೇಹಿತರೊಂದಿಗೆ (ಪ್ರಮುಖ ವ್ಯಕ್ತಿಗಳಾಗಿದ್ದಾಗ) ಚಿತ್ರಗಳನ್ನು ಪೋಸ್ಟ್ ಮಾಡಿದಾಗಲೆಲ್ಲಾ ನಾನು ಅವರೊಂದಿಗೆ ಮದುವೆಯಾಗಿದ್ದೇನೆ ಅಥವಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಅಂತ ಅಲ್ಲ. ಅಂತಹ ಸಂಕುಚಿತ ಮನಸ್ಸಿನ ಆಲೋಚನೆಯನ್ನು ನಾವು ಬಿಡಬೇಕಾದ ಸಮಯ ಇದು" ಎಂದು ರಮ್ಯಾ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ.

"ಒಂದು ವೇಳೆ ನಾನು ಡೇಟಿಂಗ್ ಮಾಡುತ್ತಿದ್ದರೆ, ಅಥವಾ ಮದುವೆ ಆಗುವಂತಿದ್ದರೆ ನಾನೇ ಅದನನು ಹೇಳುತ್ತೇನೆ. ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟವಾದದ್ದನ್ನು ಪೋಸ್ಟ್ ಮಾಡಲು ನನಗೆ ಸ್ವಾತಂತ್ರ್ಯವಿದೆ. ಜನರು ಯಾಕೋ ತಮ್ಮ ಸಣ್ಣ ಮನಸ್ಥಿತಿಯನ್ನು ಬದಲಾಯಿಸಲು ಬಯಸುವುದಿಲ್ಲ. 'ಸೆಲೆಬ್ರಿಟಿ' ಎಂಬ ಕಾರಣಕ್ಕಾಗಿ ಪೋಸ್ಟ್ ಮಾಡುವಾಗ ನಾನು ಹೆಚ್ಚು 'ಜವಾಬ್ದಾರಿಯುತ'ವಾಗಿರಬೇಕೆಂದು ನಿರೀಕ್ಷಿಸುವುದು ಬೇಸರದ ಸಂಗತಿ" ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಈ ಹಿಂದೆ ರಮ್ಯಾ ಅವರಿಗೆ ಉದ್ಯಮಿ ಸಂಜೀವ್‌ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಅದಕ್ಕೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದರು. ಇಬ್ಬರೂ ಜೊತೆಗಿರುವ ಫೋಟೊಗಳು ವೈರಲ್ ಆಗಿತ್ತು. ಆಗ ಕೂಡ ಇಬ್ಬರ ಡೇಟಿಂಗ್, ಮದುವೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿತ್ತು. ಅದೆಲ್ಲಾ ಸುಳ್ಳು ಎಂದು ರಮ್ಯಾ ಸ್ಪಷ್ಟನೆ ನೀಡಿದ್ದರು.

ವಿನಯ್ ರಾಜ್‌ಕುಮಾರ್ ಜೊತೆಗಿನ ಫೋಟೊಗಳನ್ನು ಈ ಹಿಂದೆ ಕೂಡ ರಮ್ಯಾ ಹಂಚಿಕೊಂಡಿದ್ದರು. 'ಅಭಿ' ಸಿನಿಮಾ ಸಮಯದಿಂದಲೂ ದೊಡ್ಮನೆ ಸದಸ್ಯರ ಜೊತೆ ರಮ್ಯಾ ಆತ್ಮೀಯ ಒಟನಾಟ ಇಟ್ಟುಕೊಂಡಿದ್ದಾರೆ. ವಿನಯ್ 9ನೇ ತರಗತಿ ಹುಡುಗನಾಗಿದ್ದ ಸಮಯದಿಂದಲೂ ಅವರನ್ನು ರಮ್ಯಾ ನೋಡುತ್ತಿದ್ದಾರೆ. ಹಾಗಾಗಿ ಇಬ್ಬರ ನಡುವೆ ಉತ್ತಮ ಒಡನಾಟ ಇದೆ ಅಷ್ಟೇ. ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ರಮ್ಯಾ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾಗಿ ವಿನಯ್ ಪ್ರತಿಕ್ರಿಯಿಸಿ ಬೆಂಬಲ ಸೂಚಿಸಿದ್ದರು.

More from Filmibeat

English summary
“Mindset Must Change, Not Everything Is Dating” – Ramya on Vinay Rajkumar Rumors
Read more about: ramya vinay rajkumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X