ತಾನೇ ನಟಿಸಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡಕ್ಕೆ ಶಾಕ್ ಕೊಟ್ಟ ರಮ್ಯಾ; 1 ಕೋಟಿ ಪರಿಹಾರಕ್ಕೆ ಒತ್ತಾಯ!

ಸದ್ಯ ಚಂದನವನದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ತನ್ನ ವಿಭಿನ್ನ ಹಾಗೂ ವಿನೂತನ ಪ್ರಚಾರದ ವೈಖರಿಯಿಂದ ಸುದ್ದಿಯಾಗುತ್ತಾ ಬಂದಿರುವ ಈ ತಂಡ ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ಸ್ಟಾರ್ ನಟರನ್ನು ಬಳಸಿಕೊಂಡು ಚಿತ್ರದ ಪ್ರಮೋಷನಲ್ ವಿಡಿಯೊಗಳನ್ನು ಮಾಡಿತ್ತು.

ಅದೇ ರೀತಿ ನಟಿ ರಮ್ಯಾ ಅವರನ್ನೂ ಸಹ ಪ್ರಚಾರದ ಕಾರ್ಯಕ್ಕಾಗಿ ಬಳಸಿಕೊಂಡಿದ್ದ ಈ ಚಿತ್ರತಂಡ ವಿಶೇಷ ಪ್ರೊಮೊವೊಂದನ್ನು ಬಿಡುಗಡೆಗೊಳಿಸಿತ್ತು ಹಾಗೂ ರಮ್ಯಾ ಈ ಚಿತ್ರದಲ್ಲಿ ಪ್ರಾಧ್ಯಾಪಕಿಯಾಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಹೀಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಜತೆ ಕೈಜೋಡಿಸಿದ್ದ ರಮ್ಯಾ ಇದೀಗ ಅದೇ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

Ramya issued legal notice to Hostel Hudugaru Bekagiddare team and demands 1 crore compensation

ಹೌದು, ಇತ್ತೀಚೆಗಷ್ಟೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿತ್ತು. ಈ ಟ್ರೈಲರ್‌ನಲ್ಲಿ ರಮ್ಯಾ ಪ್ರಾಧ್ಯಾಪಕಿ ರೋಲ್‌ನಲ್ಲಿ ನಟಿಸಿದ್ದರು. ಈ ದೃಶ್ಯವನ್ನು ಕಂಡು ರಮ್ಯಾ ಅಭಿಮಾನಿಗಳು ಹಾಗೂ ಸಿನಿ ರಸಿಕರು ಸಂತಸಪಟ್ಟಿದ್ದರು. ಆದರೆ ಈಗ ಅದೇ ದೃಶ್ಯದ ವಿರುದ್ಧ ರಮ್ಯಾ ಕಿಡಿಕಾರಿದ್ದಾರೆ. ತನ್ನ ಅನುಮತಿ ಇಲ್ಲದೇ ಈ ದೃಶ್ಯವನ್ನು ಬಳಸಿದ್ದಾರೆ ಎಂಬ ಆರೋಪದಡಿಯಲ್ಲಿ ರಮ್ಯಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೇ ತನ್ನ ಅನುಮತಿ ಇಲ್ಲದೇ ಬಳಸಲಾಗಿರುವ ದೃಶ್ಯ ಹಾಗೂ ಫೋಟೊಗಳನ್ನು ಎಲ್ಲಾ ಕಡೆಯಿಂದ ತೆಗೆದುಹಾಕಬೇಕು ಹಾಗೂ ಈ ತಪ್ಪಿಗೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ಬೇಡಿಕೆಯನ್ನೂ ಸಹ ಇಟ್ಟಿದ್ದಾರೆ ಎಂಬ ಸುದ್ದಿ ಇದೆ. ಈ ಸುದ್ದಿಯ ಕುರಿತು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ನಿರ್ಮಾಪಕ ವರುಣ್ ಮಾತನಾಡಿದ್ದು, ತಮಗೆ ಈ ರೀತಿಯ ಯಾವುದೇ ಲೀಗಲ್ ನೋಟಿಸ್ ಸಹ ಬಂದಿಲ್ಲ ಎಂದು ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

ಇನ್ನು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಇದೇ ಶುಕ್ರವಾರ ( ಜುಲೈ 21 ) ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಬುಕಿಂಗ್ ಸಹ ಆರಂಭಗೊಂಡಿದೆ. ಈ ಸಮಯದಲ್ಲಿ ಸ್ಟಾರ್ ನಟಿ ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಆಶ್ಚರ್ಯ ಮೂಡಿಸಿದೆ ಹಾಗೂ ಚಿತ್ರತಂಡಕ್ಕೆ ಹಿನ್ನಡೆಯನ್ನೂ ಸಹ ತಂದಿದೆ.

More from Filmibeat

English summary
Ramya issued legal notice to Hostel Hudugaru Bekagiddare team and demands 1 crore compensation. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X