'ನೀರ್ ದೋಸೆ' ಪಾತ್ರದ ಬಗ್ಗೆ ರಮ್ಯಾ ಏನಂತಾರೆ?

<ul id="pagination-digg"><li class="previous"><a href="/news/director-vijayaprasad-siddlingu-fame-neer-dose-movie-069104.html">« Previous</a>

ವಿಜಯಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಜೊತೆ ನಟಿಸಿದ್ದ ರಮ್ಯಾಗೆ ನಿರ್ದೇಶಕ ವಿಜಯಪ್ರಸಾದ್ ನಿರ್ದೇಶನ ಮಾಡುವ ರೀತಿ ಬಹಳ ಇಷ್ಟವಾಗಿದೆಯಂತೆ. ಅವರ ನಿರ್ದೇಶನದಲ್ಲಿ ಮತ್ತೆ ನಟಿಸುವ ಬಯಕೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದ ರಮ್ಯಾ, ಕೆಲವು ತಿಂಗಳುಗಳ ಹಿಂದೆ ಈ ಚಿತ್ರದ ಕಥೆಯನ್ನು ಹೇಳಿದ್ದ ವಿಜಯಪ್ರಸಾದ್ ಅವರಿಗೆ ಚಿತ್ರದಲ್ಲಿ ನಟಿಸಲು ಒಪ್ಪಗೆ ನೀಡಿದ್ದರಂತೆ. ಒಟ್ಟಿನಲ್ಲಿ 'ನೀರ್ ದೋಸೆ'ಯಲ್ಲಿ ರಮ್ಯಾ ನಟಿಸುವುದು ಪಕ್ಕಾ ಆಗಿದೆ.

ಈ ಬಗ್ಗೆ ಮಾತನಾಡಿರುವ ರಮ್ಯಾ, "ನಾನು ಈ ಚಿತ್ರದಲ್ಲಿ ಮಾಡಿಲಿರುವ ಪಾತ್ರವು ಮಾಮೂಲಿ ನಾಯಕಿಯರ ಪಾತ್ರವಲ್ಲ. ಇಷ್ಟು ದಿನ ನಾನು ಮಾಡಿದ ಪಾತ್ರಕ್ಕಿಂತ ಈ ಪಾತ್ರ ತೀರಾ ಭಿನ್ನವಾಗಿದೆ. 'ಸಿದ್ಲಿಂಗು' ಚಿತ್ರದಲ್ಲಿ ವಿಜಯಪ್ರಸಾದ್ ಜೊತೆ ನಟಿಸಿದ ಅನುಭವ ನನಗೆ ಸಖತ್ ಖುಷಿ ನೀಡಿದೆ. ಹೀಗಾಗಿ ಅವರ ನಿರ್ದೇಶನದ ಈ ನೀರ್ ದೋಸೆ' ಚಿತ್ರದಲ್ಲಿ ನಟಿಸಲು ಉತ್ಸುಕಳಾಗಿದ್ದೇನೆ. ಚಿತ್ರವು ಕಾಮಿಡಿ ನಿರೂಪಣೆ ಹೊಂದಿದೆ" ಎಂದಿದ್ದಾರೆ.

ಮುಂದುವರಿದ ರಮ್ಯಾ, "ನಾನೀಗ ಮೊದಲಿನಂತೆ ಹೆಚ್ಚು ಹೆಚ್ಚು ಮರಸುತ್ತುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನನ್ನು ಎಲ್ಲಿಯವರೆಗೆ ನಿರ್ದೇಶಕರು ಒಂದೇ ರೀತಿಯ ಪಾತ್ರಗಳಲ್ಲಿ ತೋರಿಸಲು ಸಾಧ್ಯ? ನನಗೂ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳು ಬೇಕು, ತೆರೆಯಲ್ಲಿ ನನ್ನನ್ನು ತೋರಿಸುವ ನಿರ್ದೇಶಕರಿಗೂ ನೋಡುವ ಪ್ರೇಕ್ಷಕರಿಗೂ ನನ್ನ ಪಾತ್ರದಲ್ಲಿ ವಿಭಿನ್ನತೆ ಕಾಣಲೇಬೇಕು. ನಿಂತ ನೀರಾಗಲು ನನಗಿಷ್ಟವಿಲ್ಲ"

ಇತ್ತೀಚಿಗಷ್ಟೇ ದಿಗಂತ್ ನಾಯಕತ್ವ ಹಾಗೂ ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ನಾನು ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕಾ ರಾಜಾ' ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣ ನಾನು ರಜೆಯ ಮೇಲೆ ತೆರಳಲಿದ್ದೇನೆ. ಜನವರಿಯಲ್ಲಿ 14 ರಿಂದ ಪ್ರಾರಂಭವಾಗಲಿರುವ ಚಿತ್ರೀಕರಣಕ್ಕೆ ಹಾಜರಾಗುವವರೆಗೂ ನಾನು ರಜಾದ ಮಜ ಸವಿಯಲಿದ್ದೇನೆ" ಎಂದಿದ್ದಾರೆ.

ಅಂದಹಾಗೆ, ವಿಜಯಪ್ರಸಾದ್ ನಿರ್ದೇಶನದ 'ನೀರ್ ದೋಸೆ' ಚಿತ್ರದಲ್ಲಿ ಜಗ್ಗೇಶ್ ಹಾಗೂ ರಮ್ಯಾ ಜತೆ ಉಳಿದ ತಾರಾಗಣದ ಆಯ್ಕೆ ಇನ್ನಷ್ಟೇ ಪಕ್ಕಾ ಆಗಬೇಕಿದೆ. ಸಿದ್ಲಿಂಗು ಚಿತ್ರಕ್ಕೆ ಸಂಗೀತ ನೀಡಿದ್ದ ಅನೂಪ್ ಸೀಳಿನ್ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅದೇ ಜ್ಞಾನಮೂರ್ತಿ ಈ ನೀರ್ ದೋಸೆ ಚಿತ್ರಕ್ಕೂ ಛಾಯಾಗ್ರಹಕರು. ಆದರೆ ಸಂಕಲನಕಾರ ನಾಗೇಂದ್ರ ಅರಸ್, ಹೊಸ ಸೇರ್ಪಡೆ. ಒಟ್ಟಿನಲ್ಲಿ ಚಿತ್ರಕ್ಕೆ ಈಗಲೇ ನಿರೀಕ್ಷೆ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/director-vijayaprasad-siddlingu-fame-neer-dose-movie-069104.html">« Previous</a>

More from Filmibeat

English summary
Golden Girl Ramya and Navarasanayaka Jaggesh to acts together titled movie 'Neer Dose'. This movie to direct by 'Siddlingu' fame Vijayaprasad. Yesterday, on 24th October 2012 launched this movie to start shooting in January 14th afterwards. This news is confirmed by Vijayaprasad. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X