»   » ತಮಿಳಿನಲ್ಲಿ ನಟಿ ರಮ್ಯಾಗೆ ಕಡೆಗೂ ಕಲ್ಯಾಣ ಭಾಗ್ಯ

ತಮಿಳಿನಲ್ಲಿ ನಟಿ ರಮ್ಯಾಗೆ ಕಡೆಗೂ ಕಲ್ಯಾಣ ಭಾಗ್ಯ

By: ಶಂಕರ್, ಚೆನ್ನೈ
Subscribe to Filmibeat Kannada
ಗೋಲ್ಡನ್ ಗರ್ಲ್ ರಮ್ಯಾ ಅವರಿಗೆ ಕಡೆಗೂ ಕಲ್ಯಾಣ ಭಾಗ್ಯ ಕೂಡಿಬಂದಿದೆ. ಕಳೆದ ನಾಲ್ಕು ವರ್ಷಗಳಿಂದಲೂ ಅವರ ಕಲ್ಯಾಣಕ್ಕೆ ಮುಹೂರ್ತ ಕೂಡಿಬಂದಿರಲಿಲ್ಲ. ಈಗ ಶುಭ ಮುಹೂರ್ತ ಕೂಡಿಬಂದಿದೆ. ಶೀಘ್ರದಲ್ಲೇ ಅವರ ಕಲ್ಯಾಣ ನೆರವೇರಲಿದೆ.

ಅಯ್ಯೋ ಇದೇನಿದು. ರಮ್ಯಾ ಅವರು ರಾಫೇಲ್ ಎಂಬ ಬಾಯ್ ಫ್ರೆಂಡ್ ಜೊತೆ ಓಡಾಡುತ್ತಿದ್ದರಲ್ಲವೇ? ಈಗೇನಾದರೂ ತಮಿಳು ಹುಡುಗನ ಕೈಹಿಡಿಯುತ್ತಿದ್ದಾರಾಯೇ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಪೂರ್ಣವಿರಾಮ ಹಾಕಿ ಮುಂದೆ ಓದಿ...

ವಿಷಯ ಇಷ್ಟೇ...ನಾಲ್ಕು ವರ್ಷಗಳ ಹಿಂದೆ ಸೆಟ್ಟೇರಿದ ರಮ್ಯಾ ಅಭಿನಯದ ತಮಿಳು ಚಿತ್ರ 'ಕಾದಲ್ ಟು ಕಲ್ಯಾಣಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 2008ರಲ್ಲಿ ಸೆಟ್ಟೇರಿದ ಈ ಚಿತ್ರ ಕಾರಣಾಂತರಗಳಿಂದ 2009ರಲ್ಲಿ ಅರ್ಧಕ್ಕೆ ಶೂಟಿಂಗ್ ನಿಂತುಹೋಯಿತು.

ಬಳಿಕ ಈ ಚಿತ್ರದ ಸದ್ದಿರಲಿಲ್ಲ. ಆಮೇಲೆ 2010ರಲ್ಲಿ ಮತ್ತೆ ಶೂಟಿಂಗ್ ಪ್ರಾರಂಭವಾಯಿತು. ಚಿತ್ರದ ಬಹುತೇಕ ಕಥೆ ರೇಡಿಯೋ ಸ್ಟೇಷನ್ ಒಂದರಲ್ಲಿ ನಡೆಯುತ್ತದೆ. ಈ ಚಿತ್ರದ ನಾಯಕ ನಟ ತಮಿಳಿನ ಆರ್ಯ ಅವರ ಸಹೋದರ ಸತ್ಯ.

ಯುವನ್ ಶಂಕರ್ ರಾಜಾ ಅವರ ಸಂಗೀತ ಚಿತ್ರಕ್ಕಿದ್ದು, ಮಿರ್ಚಿ ಮೂವೀಸ್ ಹಾಗೂ ಈಸ್ಟ್ ಕೋಸ್ಟ್ ಎಂಟರ್ ಟೈನ್ ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಿವೆ. ಪಾತ್ರವರ್ಗದಲ್ಲಿ ಜಯಶ್ರೀ, ನಾಗೇಂದ್ರ ಪ್ರಸಾದ್, ಕಸ್ತೂರಿ ಹಾಗೂ ಅನುಜಾ ಅಯ್ಯರ್ ಮುಂತಾದವರಿದ್ದಾರೆ.

ಬೆಂಗಳೂರು ಮೂಲದ ಮಿಲಿಂದ್ ರಾವ್ (Milind Rau) ಚೊಚ್ಚಲ ನಿರ್ದೇಶನದ ಚಿತ್ರವಿದು. 'ಕಾದಲ್ ಟು ಕಲ್ಯಾಣಂ' ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ.

English summary
Golden Girl Ramya (Divya Spandana) and Sathya, brother of Tamil actor Arya starer Kadhal 2 Kalyanam is likely to hit screens in September. Directed by Bangalorean Milind Rau, the film was to have marked Sathya's debut.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada