'ರೊಮ್ಯಾಂಟಿಕ್' ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣ
ಟಾಲಿವುಡ್ ನಲ್ಲಿ ಇತ್ತೀಚಿಗಷ್ಟೆ 'ರೊಮ್ಯಾಂಟಿಕ್' ಸಿನಿಮಾದಲ್ಲಿ ಸೆಟ್ಟೆರಿತ್ತು. ಈ ಸಿನಿಮಾ ತಂಡಕ್ಕೆ ಈಗ ರಮ್ಯಾ ಕೃಷ್ಣ ಸೇರಿಕೊಂಡಿದ್ದಾರೆ. 'ಬಾಹುಬಲಿ' ಸಿನಿಮಾದ ನಂತರ ರಮ್ಯಾ ಕೃಷ್ಣ ಮತ್ತಷ್ಟು ಎತ್ತರಕ್ಕೆ ಬೆಳೆದರು. ಆ ಚಿತ್ರದ ಬಳಿಕ 'ಸೂಪರ್ ಡಿಲಕ್ಸ್', 'ದೇವ್' ಸಿನಿಮಾಗಳಲ್ಲಿ ನಟಿಸಿದರು. ಇದೀಗ ಮತ್ತೊಂದು ಹೊಸ ಸಿನಿಮಾವನ್ನು ರಮ್ಯಾ ಕೃಷ್ಣ ಒಪ್ಪಿಕೊಂಡಿದ್ದಾರೆ.
'ರೊಮ್ಯಾಂಟಿಕ್' ಸಿನಿಮಾಗೆ ರಮ್ಯಾ ಕೃಷ್ಣ ಸಹಿ ಹಾಕಿದ್ದಾರೆ. 'ರೊಮ್ಯಾಂಟಿಕ್' ನಿರ್ದೇಶಕ ಪೂರಿ ಜಗನ್ನಾಥ್ ಪುತ್ರ ಆಕಾಶ್ ಪೂರಿ ನಟನೆಯ ಸಿನಿಮಾ. ಇತ್ತೀಚಿಗಷ್ಟೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿ ಸೌತ್ ಇಂಡಿಯಾ ತುಂಬ ಸುದ್ದಿಯಾಗಿತ್ತು. ಸಿನಿಮಾದ ಹೆಸರಿಗೆ ತಕ್ಕ ಹಾಗೆ 'ರೊಮ್ಯಾಂಟಿಕ್' ಆಗಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದರು.

Recommended Video
ರಮ್ಯಾ ಕೃಷ್ಣ ಈ ಸಿನಿಮಾದಲ್ಲಿ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿಸಿರುವ ಚಿತ್ರತಂಡ ಆ ಪಾತ್ರದ ವಿವರವನ್ನು ಬಹಿರಂಗ ಪಡಿಸಿಲ್ಲ. ಚಿತ್ರದಲ್ಲಿ ಕೆತಿಕಾ ಶರ್ಮಾ ಸಿನಿಮಾದ ನಾಯಕಿಯಾಗಿದ್ದಾರೆ. ಪೋಸ್ಟರ್ ನಲ್ಲಿ ಹಾಟ್ ಆಗಿ ಈಕೆ ಕಾಣಿಸಿಕೊಂಡಿದ್ದಾರೆ.

ಉಳಿದಂತೆ, ಚಿತ್ರವನ್ನು ಅನಿಲ್ ಪಡುರಿ ನಿರ್ದೇಶನ ಮಾಡುತ್ತಿದ್ದಾರೆ. ಮಗನ ಸಿನಿಮಾಗೆ ಪೂರಿ ಜಗನ್ನಾಥ್ ಅವರೇ ಹಣ ಹಾಕುತ್ತಿದ್ದಾರೆ.


Click it and Unblock the Notifications











