ಆ ಒಂದೇ ಒಂದು ದೃಶ್ಯಕ್ಕಾಗಿ 37 ಟೇಕ್ 2 ದಿನ ತಗೊಂಡ್ರಂತೆ ರಮ್ಯಕೃಷ್ಣ.!
ಬಹುಭಾಷಾ ನಟಿ ರಮ್ಯಾಕೃಷ್ಣ ಬಹುತೇಕ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿ, ಅಮ್ಮ, ಅತ್ತೆ, ಖಳನಾಯಕಿ ಹೀಗೆ ಆಲ್ ಮೋಸ್ಟ್ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಆದ್ರೀಗ, ತಮ್ಮ ಜೀವನದಲ್ಲೇ ಅತಿ ಹೆಚ್ಚು ಚಾಲೆಂಜಿಂಗ್ ಆಗಿದ್ದ ಪಾತ್ರವನ್ನ ಹೊಸ ಚಿತ್ರದಲ್ಲಿ ಮಾಡಿದ್ದಾರಂತೆ.
ಇದೇ ಮೊದಲ ಬಾರಿಗೆ ನೀಲಿ ತಾರೆ ಪಾತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದು, ಇದು ತಮ್ಮ ಸಿನಿ ಜೀವನದ ಅತಿ ದೊಡ್ಡ ಚಾಲೆಂಜಿಂಗ್ ಆಗಿತ್ತಂತೆ ಎಂದು ಸ್ವತಃ ರಮ್ಯಾಕೃಷ್ಣ ಅವರೇ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಈ ಪಾತ್ರವನ್ನ ಮಾಡಬೇಕಾದರೇ ಒಂದು ದೃಶ್ಯಕ್ಕಾಗಿ ಸುಮಾರು 37 ಟೇಕ್ ತೆಗೆದುಕೊಂಡಿರುವುದಾಗಿ, ಅದಕ್ಕಾಗಿ ಎರಡು ದಿನ ಸಮಯ ಬೇಕಾಯಿತು ಎಂದು ಸ್ವತಃ ರಮ್ಯಾಕೃಷ್ಣ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಆ ಚಿತ್ರ ಯಾವುದು? ಆ ದೃಶ್ಯ ಯಾವುದು? ಮುಂದೆ ಓದಿ.....

ಸೂಪರ್ ಡಿಲೆಕ್ಸ್ ಚಿತ್ರದಲ್ಲಿ ರಮ್ಯಕೃಷ್ಣ
ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ತಮಿಳು 'ಸೂಪರ್ ಡಿಲೆಕ್ಸ್' ಚಿತ್ರದಲ್ಲಿ ರಮ್ಯಕೃಷ್ಣ ನೀಲಿತಾರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ತನ್ನ ವೃತ್ತಿ ಜೀವನದಲ್ಲೇ ಅತಿ ಚಾಲೆಂಜಿಂಗ್ ಆಗಿದ್ದ ಪಾತ್ರ. ಕಲಾವಿದರಿಗಿಂತ ಕಥೆಗೆ ಹೆಚ್ಚು ಪ್ರಾಮುಖ್ಯತೆ ಇದೆ'' ಎಂದು ರಮ್ಯಕೃಷ್ಣ ಸಂದರ್ಶನದಲ್ಲಿ ಹೇಳಿದ್ದಾರೆ.

37 ಟೇಕ್ 2 ದಿನ ಆಯ್ತು
ಈ ಚಿತ್ರದ ಒಂದು ಸನ್ನಿವೇಶವನ್ನ ಓಕೆ ಮಾಡಲು ರಮ್ಯಕೃಷ್ಣ ಅವರು ಸುಮಾರು 37 ಟೇಕ್ ತೆಗೆದುಕೊಳ್ಳಬೇಕಾಯಿತಂತೆ. ಇದಕ್ಕಾಗಿ ಎರಡು ದಿನ ಹೆಚ್ಚು ಸಮಯವೂ ಆಯ್ತಂತೆ. ''ಇದು ನನ್ನ ಸಹಾಯಕರಿಗೆ ಹೆಚ್ಚು ಅಚ್ಚರಿಯಾಯಿತು. ಕೆಲವು ಪಾತ್ರಗಳನ್ನ ದುಡ್ಡಿಗಾಗಿ ಮಾಡ್ತೀವಿ, ಕೆಲವು ಪಾತ್ರಗಳನ್ನ ಜನಪ್ರಿಯತೆಗಾಗಿ ಮಾಡ್ತೀವಿ, ಇನ್ನು ಕೆಲವು ಪಾತ್ರಗಳನ್ನ ಪ್ಯಾಷನ್ ಗಾಗಿ ಮಾಡ್ತೀವಿ, ಇದು ಪ್ಯಾಷನ್ ಗಾಗಿ ಮಾಡಿದ ಪಾತ್ರ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ರಮ್ಯಕೃಷ್ಣ ಪರ್ಫೆಕ್ಟ್
ಸೂಪರ್ ಡಿಲೆಕ್ಸ್ ಚಿತ್ರದ ಈ ಪಾತ್ರಕ್ಕಾಗಿ ರಮ್ಯಕೃಷ್ಣ ಸೂಕ್ತ ಆಯ್ಕೆ ಎಂದು ಸ್ವತಃ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ಹೇಳಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಪಾತ್ರಕ್ಕಾಗಿ ಇನ್ನೊಬ್ಬ ಹಿರಿಯ ನಟಿ ನದಿಯಾ ಅವರನ್ನ ಸಂಪರ್ಕಿಸಲಾಯಿತ್ತಂತೆ. ಆದ್ರೆ, ಅಂತಿಮವಾಗಿ ರಮ್ಯಕೃಷ್ಣ ಅವರೇ ಹೆಚ್ಚು ಸೂಕ್ತ ಎಂದು ಇವರನ್ನ ಕರೆತರಲಾಯಿತು ಎಂದು ನಿರ್ದೇಶಕ ಹೇಳಿದ್ದರು.

ವಿಜಯ್ ಸೇತುಪತಿ ಸೂಪರ್
ಸೂಪರ್ ಡಿಲೆಕ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಖತ್ ಕುತೂಹಲ ಮೂಡಿಸಿದೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ವಿಜಯ್ ಸೇತುಪತಿ ಡಿಫ್ರೆಂಟ್ ಪಾತ್ರ ಮಾಡಿದ್ದು, ಮಹಿಳಾಯಾಗಿ ಮಿಂಚಿದ್ದಾರೆ. ಹಲವು ವಿಷ್ಯಗಳ ಮೂಲಕ ಸದ್ದು ಮಾಡ್ತಿರುವ ಸೂಪರ್ ಡಿಲೆಕ್ಸ್ ಮಾರ್ಚ್ 29ಕ್ಕೆ ತೆರೆಮೇಲೆ ಬರಲಿದೆ.


Click it and Unblock the Notifications











