»   » 46ರ ಪ್ರಾಯದಲ್ಲಿ ರಮ್ಯಕೃಷ್ಣ ಇಷ್ಟೊಂದು ಬೋಲ್ಡ್?

46ರ ಪ್ರಾಯದಲ್ಲಿ ರಮ್ಯಕೃಷ್ಣ ಇಷ್ಟೊಂದು ಬೋಲ್ಡ್?

Posted By:
Subscribe to Filmibeat Kannada

ಬಹುಭಾಷಾ ನಟಿ ರಮ್ಯಕೃಷ್ಣ ದಕ್ಷಿಣ ಚಿತ್ರಜಗತ್ತಿನ ಯಶಸ್ವಿ ನಾಯಕಿಯರಲ್ಲಿ ಒಬ್ಬರು. ರಜನಿಕಾಂತ್, ಚಿರಂಜೀವಿ, ರವಿಚಂದ್ರನ್ ಹೀಗೆ ಬಹುತೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದ ಈ ನಟಿಯ ವಯಸ್ಸು ಈಗ 46. ಅಂದು ಸ್ಟಾರ್ ನಾಯಕಿ ಆಗಿದ್ದ ರಮ್ಯಕೃಷ್ಣ ಈಗ ಅತಿ ಹೆಚ್ಚು ಬೇಡಿಕೆ ಹೊಂದಿರುವ ಪೋಷಕ ನಟಿ.

ಅದರಲ್ಲೂ, ಎಸ್.ಎಸ್ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರ ನಿರ್ವಹಿಸಿದ ನಂತರ ರಮ್ಯಕೃಷ್ಣ ಅವರ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್ ನಲ್ಲೂ ಈ ನಟಿಯ ಬಗ್ಗೆ ಟಾಕ್ ಶುರುವಾಗಿದೆ. ಹೀಗಿರುವಾಗ, ರಮ್ಯಕೃಷ್ಣ ಅವರು ಚಿತ್ರಪ್ರೇಮಿಗಳಿಗೆ ಅಚ್ಚರಿ ಜೊತೆ ಸರ್ಪ್ರೈಸ್ ವೊಂದನ್ನ ಕೊಟ್ಟಿದ್ದಾರೆ.

'ಶಿವಗಾಮಿ' ಪಾತ್ರ ರಿಜೆಕ್ಟ್ ಮಾಡಿದ್ದ ಶ್ರೀದೇವಿ ಈಗ ಗರಂ ಆಗಿದ್ದೇಕೆ?

Ramya Krishnan's Stylish Avatar On The Cover Of A Magazine

ಹೌದು, ಇಷ್ಟು ದಿನ ಸಂಪ್ರದಾಯಸ್ಥ ಪಾತ್ರಗಳಲ್ಲಿ ಮಿಂಚುತ್ತಿದ್ದ ರಮ್ಯಕೃಷ್ಣ ಈಗ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಫೋಸ್ ಕೊಟ್ಟಿದ್ದಾರೆ. ಸಿನಿಮಾಗಳಲ್ಲಿ ಟ್ರಡಿಷ್ನಲ್ ಆಗಿ ಕಂಗೊಳಿಸುವ ರಮ್ಯಕೃಷ್ಣ 'ಜಸ್ಟ್ ಫಾರ್ ವುಮೇನ್' ಎಂಬ ಮ್ಯಾಗಜಿನ್ ನ ಕವರ್ ಪುಟದಲ್ಲಿ ಯುವ ನಟಿಯರು ನಾಚುಚಂತೆ ಮಿಂಚಿದ್ದಾರೆ.

ಮ್ಯಾಗಜಿನ್ ಗಾಗಿ ಈ ಮಟ್ಟದ ಮೇಕ್ ಓವರ್ ಮಾಡಿಕೊಂಡಿರುವ ರಮ್ಯಕೃಷ್ಣ ಅವರು ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸದ್ಯ, ಕಮಲ್ ಹಾಸನ್ ರ ತಮಿಳು ಚಿತ್ರ 'ಸುಭಾಷ್ ನಾಯ್ಡು' ನಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ 'ಅಂಜನಿಪುತ್ರ' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.

'ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ

English summary
Ramya Krishnan was seen in a traditional avatar and now the picture of her that you’ll see on a leading magazine, is totally different. You’ll see a modern, trendy Ramya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada