ಅವಕಾಶ ಕೈಬಿಟ್ಟ ರಮ್ಯಾ: 'ರತ್ನನ್ ಪ್ರಪಂಚ'ದ ಒಡತಿ ಆಗಬೇಕಿದ್ದಿದ್ದು ಅವರೇ

ಡಾಲಿ ಧನಂಜಯ್ ನಟಿಸಿರುವ 'ರತ್ನನ್ ಪ್ರಪಂಚ' ಭಾರಿ ಸದ್ದು ಮಾಡುತ್ತಿದೆ. ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ಸಿನಿಮಾ ದೇಶ-ವಿದೇಶದ ಕನ್ನಡ ಸಿನಿಮಾ ಪ್ರೇಮಿಗಳನ್ನು ಬಹುವಾಗಿ ಸೆಳೆದಿದೆ.

ಸಿನಿಮಾ ಪ್ರೇಕ್ಷಕರು ಮಾತ್ರವೇ ಅಲ್ಲದೆ ಸೆಲೆಬ್ರಿಟಿಗಳು ಸಹ 'ರತ್ನನ್ ಪ್ರಪಂಚ' ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್, ಎಸ್ ನಾರಾಯಣ್ ಸೇರಿದಂತೆ ಇನ್ನೂ ಹಲವು ಸೆಲೆಬ್ರಿಟಿಗಳು 'ರತ್ನನ್ ಪ್ರಪಂಚ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನು ಮೆಚ್ಚಿಕೊಂಡ ಸೆಲೆಬ್ರಿಟಿಗಳ ಸಾಲಿಗೆ ನಟಿ ರಮ್ಯಾ ಸಹ ಸೇರಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಟಿ ರಮ್ಯಾ, 'ರತ್ನನ್ ಪ್ರಪಂಚ' ಸಿನಿಮಾವನ್ನು ಹೊಗಳುವ ಜೊತೆಗೆ ಕುತೂಹಲಕಾರಿ ವಿಷಯವನ್ನೂ ಹಂಚಿಕೊಂಡಿದ್ದಾರೆ.

Ramya Liked Rathnan Prapancha Movie, Wishes The Team

'ರತ್ನನ್ ಪ್ರಪಂಚ' ಸಿನಿಮಾದ ನಾಯಕಿ ಪಾತ್ರಕ್ಕೆ ಮೊದಲಿಗೆ ನಟಿ ರಮ್ಯಾರನ್ನು ಕೇಳಲಾಗಿತ್ತಂತೆ. ಆದರೆ ಸಿನಿಮಾ ರಂಗದಿಂದಲೇ ಬಹುತೇಕ ದೂರ ಉಳಿದಿರುವ ನಟಿ ರಮ್ಯಾ, 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ನಟಿಸಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರಮ್ಯಾ, 'ರತ್ನನ್ ಪ್ರಪಂಚ' ಸಿನಿಮಾದ ನಾಯಕಿ ಪಾತ್ರಕ್ಕೆ ನನ್ನನ್ನು ಕೇಳಲಾಗಿತ್ತು, ಈಗ ನಾನು ಏನು ಮಿಸ್ ಮಾಡಿಕೊಂಡೆ ಎಂದು ನೋಡಲು ಸಿನಿಮಾ ವೀಕ್ಷಿಸುತ್ತಿದ್ದೇನೆ'' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಸಿನಿಮಾ ನೋಡಿದ ಬಳಿಕ ಮತ್ತೊಂದು ಪೋಸ್ಟ್ ಮಾಡಿರುವ ರಮ್ಯಾ, '''ರತ್ನನ್ ಪ್ರಪಂಚ' ಬಹಳ ಸ್ವೀಟ್ ಆದ ಸಿನಿಮಾ. ಧನಂಜಯ್, ಪ್ರಮೋದ್, ವೈನಿಧಿ ಜಗದೀಶ್, ಅನು ಪ್ರಭಾಕರ್, ಉಮಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ರವಿಶಂಕರ್ ಎಲ್ಲರೂ ಬಹಳ ಚೆನ್ನಾಗಿ ನಟಿಸಿದ್ದಾರೆ. ನಾಯಕಿ ರೆಬಾ ಮೋನಿಕಾ ಮೊದಲ ಸಿನಿಮಾದಲ್ಲಿಯೇ ಅದ್ಭುತವಾಗಿ ನಟಿಸಿದ್ದಾರೆ. ನಾನು ಇಷ್ಟು ಚೆನ್ನಾಗಿ ನಟಿಸಲು ಆಗುತ್ತಿತ್ತೊ ಇಲ್ಲವೊ'' ಎಂದು ದೊಡ್ಡ ಹೊಗಳಿಕೆಯನ್ನೇ ನೀಡಿದ್ದಾರೆ ರಮ್ಯಾ.

ನಿರ್ಮಾಪಕರಿಗೂ ಪ್ರಶಂಸೆ ನೀಡಿರುವ ರಮ್ಯಾ, ''ಯೋಗಿರಾಜ್ ಮತ್ತು ಕಾರ್ತಿಕ್ ನಿಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ. ನಿಮ್ಮ ಜೇಬಿಗೆ ಇನ್ನಷ್ಟು ಹಣ ಎಂದೂ ಹೇಳಬಹುದು. ರೋಹಿತ್ ಪದಕಿ ಮತ್ತು ತಂಡಕ್ಕೆ ಅಭಿನಂದನೆಗಳು'' ಎಂದಿದ್ದಾರೆ.

''ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ನೋಡಿ. ನೋಡುವ ಮುನ್ನಾ ಕೆಲವು ಟಿಶ್ಯು ಪೇಪರ್‌ ಅನ್ನು ಮರೆಯದೇ ತೆಗೆದುಕೊಳ್ಳಿ. ಕ್ಲೈಮ್ಯಾಕ್ಸ್‌ ದೃಶ್ಯದಲ್ಲಿ ಮನಸಾರೆ ಅತ್ತು ಹಗುರಾಗಿ'' ಎಂದು ಸಿನಿಮಾ ನೋಡುವವರಿಗೆ ಸಲಹೆಯನ್ನೂ ನೀಡಿದ್ದಾರೆ ರಮ್ಯಾ.

ನಟಿ ರಮ್ಯಾ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದ ರಮ್ಯಾ ರಾಜಕೀಯದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ರಮ್ಯಾ ವಿದೇಶದಲ್ಲಿ ಸೆಟಲ್ ಆಗಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ. ರಮ್ಯಾ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಮರಳುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

More from Filmibeat

English summary
Actress Ramya liked Rathnan Prapancha movie wishes the team. She was first approached by the team to play lead lady role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X