'ಅಭಿ'ಗೂ ಮುನ್ನ ಈ 3 ಚಿತ್ರಗಳಲ್ಲಿ ನಟಿಸಬೇಕಿತ್ತು ರಮ್ಯಾ; 'ದಿವ್ಯಾ ಸ್ಪಂದನ' ಹೆಸರನ್ನು ಬದಲಿಸಿದ್ದು ಯಾರು?

ರಮ್ಯಾ ಎವರ್‌ಗ್ರೀನ್ ಸ್ಯಾಂಡಲ್‌ವುಡ್ ಕ್ವೀನ್. ವಯಸ್ಸು ಇಂದಿಗೆ ( ನವೆಂಬರ್ 29 ) ನಲವತ್ತಾದರೂ ಸಹ ರಮ್ಯಾಗಿದ್ದ ಅಭಿಮಾನಿ ಬಳಗ ಆ ಕ್ರೇಜ್ ಕೊಂಚವೂ ಕಡಿಮೆ ಆಗಿಲ್ಲ. ಚಿತ್ರರಂಗದಿಂದ ಆರು ವರ್ಷ ದೂರವಿದ್ದ ರಮ್ಯಾ ಅವರನ್ನು ಮತ್ತೆ ಚಿತ್ರಗಳಲ್ಲಿ ಅಭಿನಯಿಸಿ ನಿಮ್ಮನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದೇವೆ ಎಂದು ಹಲವಾರು ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು.

ಅಭಿಮಾನಿಗಳ ಆಶಯದಂತೆ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿರುವ ಉತ್ತರ ಕಾಂಡ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಆಳ್ವಿಕೆ ಆರಂಭಿಸಲಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್. ಇನ್ನು ಸದ್ಯ ರಮ್ಯಾ ನಿರ್ಮಾಪಕಿ ಕೂಡ ಆಗಿ ದೊಡ್ಡ ಹೆಜ್ಜೆ ಇಟ್ಟಿದ್ದು ರಾಜ್ ಬಿ ಶೆಟ್ಟಿ ನಿರ್ದೇಶನದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಹೀಗೆ ಯಶಸ್ವಿ ನಟಿಯಾಗಿ ಸದ್ಯ ನಿರ್ಮಾಪಕಿಯಾಗಿಯೂ ಕೆಲಸ ಆರಂಭಿಸಿರುವ ರಮ್ಯಾ ಮೂಲ ಹೆಸರು ದಿವ್ಯ ಸ್ಪಂದನಾ. ಹೌದು, ರಮ್ಯಾ ಹುಟ್ಟಿದಾಗ ದಿವ್ಯ ಸ್ಪಂದನಾ ಎಂದು ಹೆಸರನ್ನು ಹೊಂದಿದ್ದರು. ಆದರೆ 2003ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ಅಭಿನಯದ ಎರಡನೇ ಚಿತ್ರ 'ಅಭಿ'ಯಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದಾಗ ಹೆಸರನ್ನು ದಿವ್ಯ ಸ್ಪಂದನಾದಿಂದ ರಮ್ಯಾಗೆ ಬದಲಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಚಿತ್ರಕ್ಕೂ ಮುನ್ನ ಕನ್ನಡದ ಮೂರು ಚಿತ್ರಗಳಿಗೆ ರಮ್ಯಾ ಅವರಿಗೆ ಅವಕಾಶ ಅಂತಿಮ ಹಂತದಲ್ಲಿ ಕೈತಪ್ಪಿತ್ತು. ಹೀಗೆ ರಮ್ಯಾ ಹೆಸರು ದಿವ್ಯಾ ಸ್ಪಂದನ ಆಗಿ ಬದಲಾಗಿದ್ದು ಹೇಗೆ ಮತ್ತು ಅಭಿ ಚಿತ್ರಕ್ಕೂ ಮುನ್ನ ಅಂತಿಮ ಹಂತದಲ್ಲಿ ರಮ್ಯಾ ಕೈತಪ್ಪಿದ ಆ ಚಿತ್ರಗಳು ಯಾವುವು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ರಮ್ಯಾ ಕೈತಪ್ಪಿದ್ದ ಮೂರು ಚಿತ್ರಗಳು

ರಮ್ಯಾ ಕೈತಪ್ಪಿದ್ದ ಮೂರು ಚಿತ್ರಗಳು

ಅಭಿ ಚಿತ್ರಕ್ಕೆ ರಮ್ಯಾ ನಾಯಕಿಯಾಗಿ ಆಯ್ಕೆಯಾಗುವ ಮುನ್ನ ಪುನೀತ್ ರಾಜ್‌ಕುಮಾರ್ ಅಭಿನಯದ ಅಪ್ಪು ಚಿತ್ರಕ್ಕೆ ರಮ್ಯಾ ನಾಯಕಿಯಾಗುವ ಸಂಭವವಿತ್ತು. ಆದರೆ ಅಂತಿಮ ಹಂತದಲ್ಲಿ ಈ ಆಫರ್ ರಕ್ಷಿತ ಪಾಲಾದ ಕಾರಣ ರಮ್ಯಾ ಅಪ್ಪು ಚಿತ್ರದ ಆಫರ್‌ನಿಂದ ವಂಚಿತರಾಗಿದ್ದರು. ನಂತರ ವಿಜಯ್ ರಾಘವೇಂದ್ರ ಅಭಿನಯದ 'ನಿನಗಾಗಿ' ಚಿತ್ರದ ಆಫರ್ ಕೂಡ ರಮ್ಯಾ ಕೈತಪ್ಪಿತ್ತು, ಬಳಿಕ ಈ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಅಷ್ಟೇ ಅಲ್ಲದೇ ಕನ್ನಡದ ದುಂಬಿ ಚಿತ್ರದ ಆಫರ್ ಕೂಡ ದಿವ್ಯ ಸ್ಪಂದನಾ ಕೈತಪ್ಪಿತ್ತು.

ದಿವ್ಯಾ ಸ್ಪಂದನ ಬದಲು ರಮ್ಯಾ ಹೆಸರಿಟ್ಟದ್ದು ಯಾರು?

ದಿವ್ಯಾ ಸ್ಪಂದನ ಬದಲು ರಮ್ಯಾ ಹೆಸರಿಟ್ಟದ್ದು ಯಾರು?

ಇನ್ನು ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ದಿವ್ಯಾ ಸ್ಪಂದನ ಹೆಸರನ್ನು ರಮ್ಯಾ ಎಂದು ಬದಲಿಸಿದ್ದು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್. ಅಂದು ಪಾರ್ವತಮ್ಮ ರಾಜ್‌ಕುಮಾರ್ ಇಟ್ಟ ಈ ಹೆಸರು ಭವಿಷ್ಯದಲ್ಲಿ ಕನ್ನಡ ಚಿತ್ರರಂಗದ ಇತಿಹಾಸವನ್ನು ಕೆದುಕುವವರಿಗೆ ದೊಡ್ಡ ಮಟ್ಟದಲ್ಲೇ ಕಾಣಿಸಿಕೊಳ್ಳಲಿದೆ.

ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ಗಳ ಜತೆ ಕೂಡ ನಟನೆ

ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ಗಳ ಜತೆ ಕೂಡ ನಟನೆ

ಇನ್ನು ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಯಶ್, ದರ್ಶನ್, ಸುದೀಪ್ ಹಾಗೂ ಗಣೇಶ್ ಈ ಮೂವರೂ ನಟರುಗಳ ಜತೆ ನಾಯಕಿಯಾಗಿ ನಟಿಸಿರುವ ಏಕೈಕ ನಾಯಕಿ ಎಂದರೆ ಅದು ರಮ್ಯಾ ಮಾತ್ರ. ನಂತರ ಹಲವಾರು ನಟಿಯರು ದೊಡ್ಡ ಸಕ್ಸಸ್‌ಗಳನ್ನು ಪಡೆದರೂ ಸಹ ಈ ಎಲ್ಲಾ ನಟರಿಗೆ ನಾಯಕಿಯಾಗಿ ಯಾರೊಬ್ಬರೂ ನಟಿಸುವ ಅವಕಾಶ ಪಡೆಯಲಿಲ್ಲ.

More from Filmibeat

English summary
Ramya missed these 3 movies offer before debuting through Abhi movie. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X