For Quick Alerts
ALLOW NOTIFICATIONS  
For Daily Alerts

  ಸದ್ಯಕ್ಕೆ ರಮ್ಯಾ 'ಆರ್ಯನ್'ಗೆ ಬಿಡುಗಡೆ ಭಾಗ್ಯವಿಲ್ಲ

  By ಜೀವನರಸಿಕ
  |

  ಗೋಲ್ಡನ್ ಗರ್ಲ್ ರಮ್ಯಾ ಹೀರೋಯಿನ್ ಆಗಿರುವ 'ಆರ್ಯನ್' ಸಿನಿಮಾ ಅಂತೂ ಇಂತು ಮುಗಿದಿದೆ. ಸಿನಿಮಾದ ಡಬ್ಬಿಂಗೂ ಶುರುವಾಗಿದೆ. ಆದರೆ ಸ್ಯಾಂಡಲ್ ವುಡ್ ಕಿಂಗ್-ಕ್ವೀನ್ ಜೋಡಿಯನ್ನ ತೆರೆ ಮೇಲೆ ನೋಡೋ ಅಭಿಮಾನಿಗಳ ಕಾತರಕ್ಕೆ ಸದ್ಯಕ್ಕೆ ಬ್ರೇಕ್ ಇಲ್ಲದಂತಾಗಿದೆ.

  ಚಿತ್ರ ತಂಡ ಕುಂಬಳಕಾಯಿ ಒಡೆಯೋ ಕಾರ್ಯಕ್ರಮ ಆಗಿ ಆಗಲೇ 15 ದಿನಗಳಾಗಿವೆ. ಹೆಚ್ಚಿನ ಭಾಗದ ಡಬ್ಬಿಂಗ್ ಕೂಡ ಮುಗಿದಿದೆ. 'ಆರ್ಯನ್' ಸಿನಿಮಾ ಹೇಗಿರಬಹುದು ಕನ್ನಡದ ಎಸ್ಆರ್ ಕೆ ಬಾಲಿವುಡ್ ನ ಎಸ್ಆರ್ ಕೆ ತರಹ ಕೋಚ್ ಆಗಿ ಮಿಂಚ್ತಾರಾ. ರಮ್ಯಾ ಹೇಗೆ ರಂಗು ರಂಗಾಗಿ ಕಾಣಿಸ್ತಾರೆ ಅನ್ನೋ ಎಲ್ಲ ಡೀಟೈಲ್ಸ್ಗಾಗಿ ಚಿತ್ರಪ್ರೇಮಿಗಳು ಮೇ ತಿಂಗಳ ಅಂತ್ಯದವರೆಗೂ ಕಾಯಲೇಬೇಕು. [ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು]


  ಯಾಕಂದ್ರೆ ಚುನಾವಣೆ ಘೋಷಣೆಯಾದ ನಂತರ ಮಂಡ್ಯದಲ್ಲಿ ರಮ್ಯಾ ಚುನಾವಣೆಗೆ ನಿಂತಿರೋದ್ರಿಂದ ಸಿನಿಮಾವನ್ನ ರಿಲೀಸ್ ಮಾಡುವಂತಿಲ್ಲ. ರಾಜಕೀಯದಲ್ಲಿ ಬಿಜಿಯಾಗಿದ್ದರಿಂದ ಶಿವಣ್ಣ ತಮ್ಮ ಡೇಟ್ಸ್ ಅಡ್ಜೆಸ್ಟ್ ಮಾಡಿಕೊಂಡಿದ್ರು.

  ಶಿವಣ್ಣಂಗೆ ಥ್ಯಾಂಕ್ಸ್ ಅಂದಿದ್ರು ರಮ್ಯಾ. ಈಗ ಚಿತ್ರತಂಡದವರು ರಮ್ಯಾಗಾಗಿ ಮೇ ಅಂತ್ಯದವರೆಗೂ ಕಾಯಬೇಕು. ಶಿವಣ್ಣ ಅಭಿಮಾನಿಗಳಿಗೂ ಶಿಕ್ಷೆ ತಪ್ಪಿದ್ದಲ್ಲ. ಡಿ.ರಾಜೇಂದ್ರ ಬಾಬು ಅವರ ನಿಧನದ ನಂತರ ಆರ್ಯನ್ ಚಿತ್ರಕ್ಕೆ ಚಿ.ಗುರುದತ್ ಆಕ್ಷನ್ ಕಟ್ ಹೇಳಿದ್ದಾರೆ.

  ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಅವರ ಸಂಗೀತ, ಚಂದ್ರಶೇಖರ್ ಅವರ ಛಾಯಾಗ್ರಹಣ ಇರುವ ಚಿತ್ರದ ಉಳಿದ ಪಾತ್ರವರ್ಗದಲ್ಲಿ ಶರತ್ ಬಾಬು, ಬುಲ್ಲೆಟ್ ಪ್ರಕಾಶ್, ವಿನಯಾ ಪ್ರಸಾದ್, ಅರ್ಚನಾ ಗುಪ್ತಾ ಮುಂತಾದವರಿದ್ದಾರೆ. ಚಿತ್ರದ ಬಿಡುಗಡೆ ಮಾತ್ರ ಅದ್ಯಾವಾಗೋ ಏನೋ?

  English summary
  Golden Girl Ramya and Sandalwood SRK Shivrajkumar lead much expected Kannada film 'Aaryan's release to get delayed due to Lok Sabha Elections 2014. The sports drama film. Initially directed by D. Rajendra Babu, who died while filming half-way, the direction responsibility went to Chi Guru Dutt.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more