"HDK ಸಲೂನ್‌ನಲ್ಲಿ ಸಿಕ್ಕಿ ರಾಜಕೀಯಕ್ಕೆ ಮತ್ತೆ ಬರಬೇಕು ಅಂದ್ರು, BJP ಅವ್ರು ಮಿನಿಸ್ಟರ್ ಮಾಡ್ತಿನಿ ಅಂದ್ರು: ರಮ್ಯಾ

ರಾಜ್ಯದಲ್ಲಿ ಚುಣಾವಣೆ ಭರಾಟೆ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸ್ಟಾರ್ ಪ್ರಚಾರಕರನ್ನು ಕಣಕ್ಕಿಳಿಸುತ್ತಿದೆ. ನಟಿ ರಮ್ಯಾ ಕೂಡ ಕೆಲವು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗ್ತಿದೆ. ಈ ಮೂಲಕ ಪದ್ಮಾವತಿ ರಾಜಕೀಯರಂಗಕ್ಕೆ ರೀ ಎಂಟ್ರಿ ಕೊಡುತ್ತಾರೆ ಅನ್ನುವ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ಸ್ವತಃ ರಮ್ಯಾ ಈಗ ಪ್ರತಿಕ್ರಿಯಿಸಿದ್ದಾರೆ.

ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ರಮ್ಯಾ ಬರೀ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳಿಂದಲೂ ಬುಲಾವ್ ಬಂದಿದೆ ಎಂದಿದ್ದಾರೆ. ಮಂಡ್ಯ ಸಂಸದೆಯಾಗಿ ಒಮ್ಮೆ ಗೆದ್ದು ಮತ್ತೊಂದು ಸೋಲುಂಡ ರಮ್ಯಾ ನಂತರ ದೆಹಲಿ ಸೇರಿದ್ದರು. ಕಾಂಗ್ರೆಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಕೆಲಸ ನಿರ್ವಹಿಸಿದ್ದರು. 2019ರ ಚುನಾವಣೆಗೂ ಮೊದ್ಲೆ ಆರೋಗ್ಯ ಸಮಸ್ಯೆಯಿಂದ ನಾನು ರಾಜಕೀಯರಂಗದಿಂದ ದೂರಾಗಿದ್ದೆ. ಬ್ರೇಕ್ ಬೇಕು ಅಂತ ರಾಹುಲ್ ಗಾಂಧಿ ಅವರಿಗೆ ಹೇಳಿದ್ದೆ ಎಂದಿದ್ದಾರೆ.

Ramya on Poll campaign: She says BJP, congress, JDs has offered her assembly election ticket

"ನಾನು ಕಾಂಗ್ರೆಸ್‌ನ ಬೆಂಬಲಿಸುತ್ತಾ ಬರ್ತಿದ್ದೀನಿ. ಈ ಚುನಾವಣೆಗೂ ಮುನ್ನ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ನನ್ನ ಹಾಗೂ ಕಾಂಗ್ರೆಸ್ ನಡುವೆ ಎಲ್ಲವೂ ಸರಿಯಿಲ್ಲ ಎಂದುಕೊಂಡು ಮಾತನಾಡಿದ್ದರು. ನಾಳೆನೇ ನಿಮ್ಮನ್ನು ಮಿನಿಸ್ಟರ್ ಮಾಡ್ತೀವಿ ಅಂದ್ರು. ಬರೀ ಕಾಂಗ್ರೆಸ್, ಬಿಜೆಪಿ ಮಾತ್ರವಲ್ಲ ಜೆಡಿಎಸ್‌ನಿಂದರೂ ಆಮಂತ್ರಣ ಇತ್ತು. ದೊಡ್ಡ ದೊಡ್ಡ ನಾಯಕರೇ ಸಂಪರ್ಕಿಸಿದ್ದರು. ನಾನು ಬಿಜೆಪಿಯನ್ನು ದ್ವೇಷಿಸಲ್ಲ, ಆದರೆ ಅವರ ಕೆಲವು ಸಿದ್ದಾಂತಗಳನ್ನು ಒಪ್ಪಿಕೊಳ್ಳಲ್ಲ."

"ಜೆಡಿಎಸ್‌ನಿಂದಲೂ ಕೇಳಿದ್ದರು. ನಾನು ಒಮ್ಮೆ ಸಲೂನ್‌ನಲ್ಲಿ ಅಚಾನಕ್‌ ಆಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ರಮ್ಯಾ ಅವ್ರೇ ಹೇಗಿದ್ದೀರಾ? ಬಹಳ ವರ್ಷ ಆಯಿತು. ನೀವ್ಯಾಕೆ ರಾಜಕೀಯ ಬಿಟ್ರಿ? ನೀವು ಬರಲೇಬೇಕು ಎಂದರು. ಅವರು ಮಾತನಾಡುತ್ತಾ ನಿಮಗೆ ಸಾಕಷ್ಟು ಸಾಮರ್ಥ್ಯ ಇದೆ, ರಾಜಕೀಯ ಬಿಡಬೇಡಿ ಎಂದರು. ಈ ವಿಧಾನಸಭೆ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಲು ಕಾಂಗ್ರೆಸ್‌ ಹೇಳಿತ್ತು. ಆದರೆ ನಾನು ಅದಕ್ಕೆ ಸಿದ್ಧಳಿಲ್ಲ."

"ರಾಜಕೀಯ ಅಂದ್ರೆ ಸುಮ್ಮನೆ ಅಲ್ಲ. ಜನರ ಮಧ್ಯೆ ಇರಬೇಕು. ಅದಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡಬೇಕು, ಆದರೆ ಸದ್ಯಕ್ಕೆ ನಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಹಾಗಾಗಿ ನಾನು ಈ ಸ್ಪರ್ಧೆ ಒಲ್ಲೆ ಎಂದೆ" ಎಂಧು ರಮ್ಯಾ ಹೇಳಿದ್ದಾರೆ. 2019ರ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆಯಲು ಕಾರಣ ಏನು? ನಿಮಗೆ ಅಲ್ಲಿ ನೆಲೆನಿಲ್ಲಲೂ ಆಗಲಿಲ್ವಾ? ಎನ್ನುವ ಪ್ರಶ್ನೆಗೆ "ಖಂಡಿತ ಆ ರೀತಿ ಆಗುತ್ತದೆ. ಪಕ್ಷ ಅಂದಮೇಲೆ ಪೈಪೋಟಿ ಇರುತ್ತದೆ. ಕೆಲವೇ ಅವಕಾಶಗಳು ಇರುತ್ತವೆ. ಅದಕ್ಕಾಗಿ ಎಲ್ಲರೂ ಪೈಪೋಟಿ ನಡೆಸುತ್ತಿರುತ್ತಾರೆ" ಎಂದಿದ್ದಾರೆ.

Ramya on Poll campaign: She says BJP, congress, JDs has offered her assembly election ticket

ರಾಹುಲ್ ಗಾಂಧಿ ಜೊತೆಗಿನ ಒಡನಾಟದ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ಅವರೊಟ್ಟಿಗೆ ಈಗಲೂ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. "ತಂದೆಯ ಅಗಲಿಕೆಯ ನಂತರ ರಾಹುಲ್ ಗಾಂಧಿಯವರು ಭಾವನಾತ್ಮಕವಾಗಿ ಬೆಂಬಲ, ಧೈರ್ಯ ನೀಡಿದರು" ಎಂದು ರಮ್ಯಾ ಹೇಳಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡುವುದರ ಬಗ್ಗೆ ಮಾತನಾಡಿರುವ ರಮ್ಯಾ "ಸಿನಿಮಾ ತಾರೆಯರು ಅಂದಾಕ್ಷಣ ಹೆಚ್ಚು ಮತಗಳನ್ನು ಸೆಳೆಯಲು ಸಾಧ್ಯವಿಲ್ಲ. ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋದಾಗ ಜನರನ್ನು ಸೆಳೆಯಬಹುದು ಅಷ್ಟೇ"

ಇನ್ನು ಕಾಂಗ್ರೆಸ್‌ನಿಂದ ನಾನು ಯಾವತ್ತೂ ದೂರ ಆಗಿದ್ದ ಎಂದಿರುವ ರಮ್ಯಾ ಕೆಲ ವಿಚಾರಗಳ ಬಗ್ಗೆ ನನ್ನ ಅಸಂತೃಪ್ತಿ ತೋರ್ಪಡಿಸಿದ್ದೆ. ಇನ್ನು ಕೆಸಿ ವೇಣುಗೋಪಾಲ್ ಹಾಗೂ ಸುರ್ಜೆವಾಲಾರಂತಹ ಹಿರಿಯ ನಾಯಕರ ಮನವು ಮೇರೆಗೆ ಪ್ರಚಾರಕ್ಕೆ ಹೀಗುತ್ತಿದ್ದೇನೆ. ನನ್ನಿಂದ ಅಭ್ಯರ್ಥಿಗಳು ಗೆದ್ದರೆ ಅದಕ್ಕಿಂತ ಮತ್ತೇನು ಬೇಕಿದೆ" ಎಂದು ರಮ್ಯಾ ಹೇಳಿದ್ದಾರೆ.

More from Filmibeat

English summary
Ramya on Poll campaign: She says BJP, Congress, JDs has offered her assembly election ticket. She also Talk about had received proposal from H. D. Kumaraswamy. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X