'ಪರಿಮಳ ಲಾಡ್ಜ್'ನಲ್ಲಿ ಪ್ರತ್ಯಕ್ಷವಾದ ಮೋಹಕ ತಾರೆ ರಮ್ಯಾ!

Recommended Video

Parimala lodge movie : ಪರಿಮಳ ಲಾಡ್ಜ್ ಚಿತ್ರದಲ್ಲಿ ಮೋಹಕತಾರೆ ರಮ್ಯಾ ಏನ್ ಮಾಡ್ತಿದ್ದಾರೆ ? | Oneindia Kannada

ಪರಿಮಳ ಲಾಡ್ಜ್....ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ. ಸಿದ್ಲಿಂಗು, ನೀರ್ ದೋಸೆ ಅಂತಹ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ವಿಜಯ ಪ್ರಸಾದ್ ಅವರ ಸಾರಥ್ಯದಲ್ಲಿ ಬರ್ತಿರುವ ಮತ್ತೊಂದು ನಿರೀಕ್ಷೆಯ ಚಿತ್ರ.

ನೀನಾಸಂ ಸತೀಶ್, ಲೂಸ್ ಮಾದ ಯೋಗೇಶ್, ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಅಂತಹ ಪ್ರತಿಭಾನ್ವಿತ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಪಡ್ಡೆ ಹೈಕ್ಳಿಗೆ ಥ್ರಿಲ್ ಕೊಟ್ಟಿದೆ.

ಇದೀಗ, ಪರಿಮಳ ಲಾಡ್ಜ್ ನಲ್ಲಿ ಮೋಹಕತಾರೆ ಪ್ರತ್ಯಕ್ಷವಾಗಿದ್ದಾರೆ. ಇದನ್ನ ನೋಡಿದ ಪ್ರೇಕ್ಷಕರು ಸರ್ಪ್ರೈಸ್ ಆಗಿದ್ದು, ರಮ್ಯಾ ಇವರನ್ನ ಬಿಟ್ಟರೂ ಇವರು ರಮ್ಯಾನ ಬಿಡ್ತಿಲ್ವಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ, ಪರಿಮಳ ಲಾಡ್ಜ್ ನಲ್ಲಿ ರಮ್ಯಾ ನಟಿಸುತ್ತಿದ್ದಾರಾ? ಮುಂದೆ ಓದಿ.....

ಪರಿಮಳ ಲಾಡ್ಜ್ ಗೂ ರಮ್ಯಾಗೆ ಏನ್ ಸಂಬಂಧ?

ಪರಿಮಳ ಲಾಡ್ಜ್ ಗೂ ರಮ್ಯಾಗೆ ಏನ್ ಸಂಬಂಧ?

ಪರಿಮಳ ಲಾಡ್ಜ್ ಹೆಸರಿಗೆ ತಕ್ಕಂತೆ ಸಿನಿಮಾ ಕಥೆ ಲಾಡ್ಜ್ ವೊಂದರಲ್ಲಿ ನಡೆಯುತ್ತೆ. ಈಗ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್ ಮೊದಲ ದೃಶ್ಯದಲ್ಲೇ ರಮ್ಯಾ ಅವರ ಫೋಟೋ ದರ್ಶನವಾಗಿದೆ. ದತ್ತಣ್ಣ ಪೊಲೀಸ್ ಅಧಿಕಾರಿಯಾಗಿದ್ದು, ಪೊಲೀಸ್ ಠಾಣೆಯಲ್ಲಿ ರಮ್ಯಾ ಫೋಟೋ ಕಾಣಿಸಿಕೊಂಡಿದೆ.

ರಮ್ಯಾ ಫೋಟೋ ಯಾಕೆ?

ರಮ್ಯಾ ಫೋಟೋ ಯಾಕೆ?

ಸಿದ್ಲಿಂಗು ಚಿತ್ರದಲ್ಲಿ ರಮ್ಯಾ ನಾಯಕಿ. ನೀರ್ ದೋಸೆ ಚಿತ್ರದಲ್ಲಿ ನಟಿಸಬೇಕಿದ್ದ ರಮ್ಯಾ ವಿವಾದ ಮಾಡಿಕೊಂಡು ಮಾಡಲ್ಲ ಎಂದು ಬಿಟ್ಟು ಹೋಗಿದ್ದರು. ಅದೇ ಕೋಪದಲ್ಲಿ ಹರಿಪ್ರಿಯಾ ಅವರನ್ನ ಆ ಪಾತ್ರಕ್ಕೆ ಆಯ್ಕೆ ಮಾಡಿ ಸಿನಿಮಾ ಹಿಟ್ ಮಾಡಿದ್ದರು ನಿರ್ದೇಶಕರು. ಆದ್ರೆ, ಈ ಚಿತ್ರದಲ್ಲೂ ರಮ್ಯಾ ಅವರ ನೆನಪು ಬಿಡದ ನಿರ್ದೇಶಕರು ಅವರ ಫೋಟೋ ಯಾಕಿಟ್ಟರು ಎಂಬುದು ಕುತೂಹಲ.

ಈ ಬಗ್ಗೆ ನಿರ್ದೇಶಕ ಹೇಳಿದ್ದೇನು?

ಈ ಬಗ್ಗೆ ನಿರ್ದೇಶಕ ಹೇಳಿದ್ದೇನು?

ರಮ್ಯಾ ಫೊಟೋ ಯಾಕೆ ಅಂತ ಕೇಳಿದ್ರೆ ''ನಾನು ರಮ್ಯಾ ಅವರ ಅಭಿಮಾನಿ. ಹತ್ತಿರದಿಂದ ಅವರನ್ನು ಬಲ್ಲೆ, ಅವರ ವ್ಯಕ್ತಿತ್ವ ನನಗೆ ಇಷ್ಟ. ಯಾಕೆ ಫೋಟೋ ಇದೆ ತಿಳಿದುಕೊಳ್ಳಬೇಕು ಅಂದ್ರೆ ಸಿನಿಮಾ ನೋಡಬೇಕು. ಅದೆಲ್ಲ ಸಿನಿಮಾದಲ್ಲಿ ಬರುವ ಚೇಷ್ಟೆ. ಅದಕ್ಕೊಂದಯ ಕಥೆ ಇದೆ. ದತ್ತಣ್ಣ ಮೂಲಕ ಆ ಕಥೆ ಸಾಗುತ್ತೆ'' ಎಂದು ಮಾಹಿತಿ ಬಿಟ್ಟುಕೊಡದೆ ಸಂಬಂಧ ಇದೆ ಎಂದರು.

ಪರಿಮಳನೇ ರಮ್ಯಾ ಆಗಿರಬಹುದು!

ಪರಿಮಳನೇ ರಮ್ಯಾ ಆಗಿರಬಹುದು!

ನೀರ್ ದೋಸೆ ಚಿತ್ರದಿಂದ ರಮ್ಯಾ ಹೊರಹೋದ್ರು ಎಂಬ ಕಾರಣಕ್ಕೆ ರಮ್ಯಾ ಅವರನ್ನ ಅಣುಕಿಸುವಂತಹ ದೃಶ್ಯ ಅಥವಾ ಡೈಲಾಗ್ ಇರಬಹುದಾ ಎಂಬ ಅನುಮಾನ ಕಾಡ್ತಿದೆ. ಯಾಕಂದ್ರೆ, ನೀರ್ ದೋಸೆ ಚಿತ್ರದಲ್ಲೂ ಈ ರೀತಿ ಸಂಭಾಷಣೆ ಇತ್ತು. ಈಗ ಪರಿಮಳ ಲಾಡ್ಜ್ ನಲ್ಲೂ ರಮ್ಯಾ ಫೋಟೋ ಇದೆ. ಸೋ, ಪರಿಮಳನೇ ಇಲ್ಲಿ ರಮ್ಯಾ ಆಗಿರಬಹುದಾ ಎಂಬ ಅನುಮಾನನೂ ಕಾಡುತ್ತಿದೆ. ಇದೆಲ್ಲದಕ್ಕೂ ಸಿನಿಮಾದಲ್ಲೇ ಉತ್ತರ ಸಿಗಲಿದೆ.

More from Filmibeat

English summary
Sidlingu Fame Director Vijay prasad Parimala Lodge Movie teaser released. ramya photo used in this teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X