twitter
    For Quick Alerts
    ALLOW NOTIFICATIONS  
    For Daily Alerts

    ಪುರುಷರು ಮಾಡುವ ಎಲ್ಲಾ ಅಪರಾಧಗಳಿಗೆ ಮಹಿಳೆಯರನ್ನೇ ದೂಷಿಸಲಾಗುತ್ತದೆ: ನಟಿ ರಮ್ಯಾ ಅಸಮಾಧಾನ

    |

    ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಕ್ರೂರ ಕೃತ್ಯವನ್ನು ಅನೇಕರು ಖಂಡಿಸುತ್ತಿದ್ದಾರೆ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಕೆಲವರು ರಾಜಕಾರಣಿಗಳು ಆ ಯುವತಿ ರಾತ್ರಿ ಅಷ್ಟೊತ್ತಿಗೆ ಯಾಕೆ ಹೋಗಬೇಕಿತ್ತು?, ಅಷ್ಟೊತ್ತಿಗೆ ಅಲ್ಲಿಗೆ ಯಾಕೆ ಹೋಗಬೇಕಿತ್ತು? ಎನ್ನುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.

    ಇದರ ಬೆನ್ನಲ್ಲೇ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಮಹಿಳೆಯರದ್ದೇ ತಪ್ಪು ಎಂದು ಹೇಳುವರ ವಿರುದ್ಧ ನಟಿ ರಮ್ಯಾ ಕಿಡಿಕಾರಿದ್ದಾರೆ. ಪುರುಷರು ಮಾಡುವ ಪ್ರತಿಯೊಂದು ಅಪರಾಧಕ್ಕೂ ಮಹಿಳೆಯರಾದ ನಾವು ಯಾವಾಗಲೂ ದೂಷಿಸಲ್ಪಡುತ್ತೇವೆ ಎಂದು ಹೇಳಿದ್ದಾರೆ. ಇದು ಅತ್ಯಾಚಾರವಾಗಲಿ ಅಥವಾ ದೈಹಿಕವಾಗಲಿ ಅಥವಾ ಮೌಖಿಕವಾಗಿ ನಿಂದಿಸುವುದಿರಲಿ" ಎಂದಿದ್ದಾರೆ.

    "ನಾವು ಇದನ್ನ ಆಗಾಗ ಕೇಳುತ್ತಿರುತ್ತೇವೆ, ಇದು ನಿಮ್ಮ ತಪ್ಪು, ನೀವು ಹಾಗೆ ಹೇಳಬಾರದಿತ್ತು, ನೀವು ಅದನ್ನು ಮಾಡಬಾರದಿತ್ತು, ನೀವು ಅದನ್ನು ಧರಿಸಬಾರದು, ತುಂಬಾ ಬಿಗಿಯಾಗಿ, ತುಂಬಾ ಚಿಕ್ಕದಾಗಿದೆ, ತುಂಬಾ ಆಕರ್ಷಕವಾಗಿದೆ, ತುಂಬಾ ಉದ್ದವಾಗಿದೆ, ನೀವು ತಡರಾತ್ರಿ ಹೊರಗೆ ಹೋಗಬಾರದಿತ್ತು, ನಾವು ಮೇಕಪ್ ಹಾಕಬಾರದು, ಕೆಂಪು ಲಿಪ್ಸ್ಟಿಕ್ ಏಕೆ ಹಾಕುತ್ತೀರಿ, ನಾವು ಕಣ್ಣು ಮಿಟುಕಿಸಬಾರದಿತ್ತು, ನಿಮಗೆ ಅದಿರಬಾರದು, ಇದಿರಬಾದು..ಯಾಕೆ?. ಯಾಕೆಂದರೆ ಪುರುಷರು ಪುರುಷರಾಗಿ ಇರುತ್ತಾರೆ. ನಾವು ಎಲ್ಲದಕ್ಕೂ ರಾಜಿ ಮಾಡಿಕೊಳ್ಳಬೇಕು. ನಾವು ಬದಲಾಗಬೇಕು, ನಾವು ಹೊಂದಿಕೊಳ್ಳಬೇಕು, ನಾವು ಸಹಿಸಿಕೊಳ್ಳಬೇಕು.. ಈ ರೀತಿಯ ನಾನ್ಸೆಸ್ ಗಳಿಗೆ ಮೊದಲು ಫುಲ್ ಸ್ಟಾಪ್ ಹಾಕಬೇಕು."

    Ramya says As women are always blamed for every crime a man commits on a woman

    "ಮಹಿಳೆಯರ ವಿರುದ್ಧದ ಅಪರಾಧಗಳತ್ತಾ ಕಣ್ಣು ಮುಚ್ಚಿಕೂರಬೇಡಿ. ದಯವಿಟ್ಟು ಅದರ ಬಗ್ಗೆ ಮಾತನಾಡಿ" ಎಂದು ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ನಟಿ ರಮ್ಯಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಕೆಲವು ಘಟನೆಗಳ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.

    ಇನ್ನು ಮೈಸೂರು ಘಟನೆ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿ ಖಂಡಿಸಿದ್ದಾರೆ. ಇತ್ತೀಚಿಗಷ್ಟೆ ಹಿರಿಯ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿ, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಜಗ್ಗೇಶ್, "ಎಂಥ ಕ್ರೂರಿಗಳು. ತಾಯಿ ಹೆಣ್ಣಲ್ಲವೆ?, ಅಕ್ಕ-ತಂಗಿ ಹೆಣ್ಣಲ್ಲವೆ?, ಮಡದಿ ಹೆಣ್ಣಲ್ಲವೆ?, ಹೆಣ್ಣು ಗೌರವಿಸದವರು ರಕ್ಕಸರು, ಈ ಕೃತ್ಯ ಎಸಗಿದ ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು, ಈ ಕ್ರೂರ ಕೃತ್ಯಕ್ಕೆ ಖಂಡನೆ" ಎಂದು ಟ್ವೀಟ್ ಮಾಡಿದ್ದರು.

    ಇನ್ನು ನಟಿ ಅದಿತಿ ಪ್ರಭುದೇವ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಮಹಿಳೆಯರಿಗೆ ಹಲವು ಬಗೆಯಲ್ಲಿ ಕಿರುಕುಳ ನೀಡುವುದು ನಡಿಯುತ್ತಲೇ ಇದೆ. ಎಲ್ಲ ಹೆಣ್ಮಕ್ಕಳು ಸ್ಟ್ರಾಂಗ್ ಆಗಬೇಕು. ಅಸಹಾಯಕ ಸ್ಥತಿಗೆ ತಲುಪಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾಮುಕರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾಮೂಹಿಕ ಅತ್ಯಾಚಾರ ವೆಸಗಿ ಪರಾರಿಯಾಗಿದ್ದಾರೆ. ಈ ಘಟನೆ ಸಾಂಸ್ಕೃತಿಕ ನಗರಿ ಜನರ ನಿದ್ದೆಗೆಡಿಸಿದೆ. ಆಗಸ್ಟ್ 24 ಮಂಗಳವಾರ ರಾತ್ರಿ 7.30ಕ ಸುಮಾರಿಗೆ ಈ ಘಟನೆ ನಡೆದಿದೆ. ಯುವತಿಯನ್ನು ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಸಂತ್ರಸ್ತೆಯ ಸ್ನೇಹಿತನ ಹೇಳಿಕೆ

    ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದು, "ನಾನು ಮತ್ತು ನನ್ನ ಗೆಳತಿ ತರಗತಿ ಮುಗಿಸಿಕೊಂಡು ಬೈಕ್ ನಲ್ಲಿ ಸಂಜೆ 7.25 ರಿಂದ ಆರ್ಯವೇದಿಕ್ ಕಾಲೇಜಿನ ವಾಟರ್ ಟ್ಯಾಂಕ್ ಬಳಿ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ನಾನು ಯಾವಾಗಲೂ ಜಾಗಿಂಗ್ ಹೋಗುವ ಸ್ಥಳವದು. ಅಲ್ಲಿ ಹೋಗಿ ಬೈಕ್ ನಿಲ್ಲಿಸಿದಾಗ 25 ರಿಂದ 30 ವರ್ಷದ ಸುಮಾರು 6 ಮಂದಿ ಬಂದರು. ಬಲ ಭಾಗದಿಂದ ಏಕಾಏಕಿ ಬಂದು ದೊಣ್ಣೆಯಿಂದ ಹಲ್ಲೆ ಮಾಡಿದರು. ನನ್ನನ್ನು ತಳ್ಳಿ ಜೊತೆಯಲ್ಲಿದ್ದವಳನ್ನು ಪೊದೆಯೊಳಗಿರುವ ಜಾಗಕ್ಕೆ ಎಳೆದುಕೊಂಡು ಹೋದರು. ತೆಳ್ಳಗಿದ್ದ ಒಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊೆಡೆದ. ಪ್ರಜ್ಞೆ ಹೋಗಿ 15 ನಿಮಿಷಗಳ ನಂತರ ಬಂತು. ಆಗ 4 ಜನ ನನ್ನ ಮುಂದೆ ನಿಂತು ನನ್ನ ತಂದೆಗೆ ಕಾಲ್ ಮಾಡಿಸಿದರು. 3 ಲಕ್ಷ ರೂಪಾಯಿ ಹಣ ಕೊಡುವಂತೆ ಒತ್ತಾಯ ಮಾಡಿದರು. ನಾನು ಗೆಳತಿ ಎಲ್ಲಿ ಎಂದು ಕೇಳಿದಾಗ ಆಗ ಇಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡಿದ್ದಳು" ಎಂದು ಸ್ನೇಹಿತ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

    English summary
    Actress Ramya says As women we are always blamed for every crime a man commits on a woman.
    Friday, August 27, 2021, 12:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X