For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ಶುಭಕೋರಿದವರಿಗೆ ಪ್ರೀತಿಯ ಸಂದೇಶ ರವಾನಿಸಿದ ನಟಿ ರಮ್ಯಾ

  By ಫಿಲ್ಮ್ ಡೆಸ್ಕ್
  |

  ಕನ್ನಡ ಸಿನಿಮಾರಂಗದ ಖ್ಯಾತ ನಟಿ, ಮೋಹಕ ತಾರೆ ರಮ್ಯಾ ಚಿತ್ರರಂಗದಿಂದ ದೂರ ಸರಿದಿದ್ದರು, ಅವರನ್ನು ಪ್ರೀತಿಸುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗುತ್ತಾರೆ, ಬಣ್ಣ ಹಚ್ಚುತ್ತಾರೆ ಅಂತ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

  ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ರಮ್ಯಾ ತನ್ನ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಮನತಣಿಸುತ್ತಿದ್ದಾರೆ. ಚಿತ್ರರಂಗದಿಂದ, ಅಭಿಮಾನಿಗಳಿಂದ ದೂರ ಇರುವ ರಮ್ಯಾ ಇತ್ತೀಚಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

  ಮೋಹಕ ತಾರೆಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ. ಅಭಿಮಾನಿಗಳು ಮತ್ತು ಸ್ನೇಹಿತರ ವಿಶ್ ಗೆ ರಮ್ಯಾ ಧನ್ಯವಾದ ಹೇಳಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಜೊತೆಗೆ ಸುಂದರ ಫೋಟೋವನ್ನು ಹಂಚಿಕೊಂಡಿದ್ದಾರೆ.

  'ಹುಟ್ಟುಹಬ್ಬದ ಪ್ರೀತಿಯ ಸಂದೇಶಕ್ಕೆ ಧನ್ಯವಾದಗಳು. ನನ್ನ ಹೃದಯ ನಿಮ್ಮ ವಿಶ್ ಮತ್ತು ಪ್ರೀತಿಯಿಂದ ತುಂಬಿದೆ. ಇದು ತುಂಬಾ ವಿಶೇಷವಾಗಿದೆ' ಎಂದು ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.

  ನಟಿ ರಮ್ಯಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸುದೀಪ್ ಸಹ ವಿಶ್ ಮಾಡಿದ್ದಾರೆ. ರಮ್ಯಾ ಅವರ ಫೋಟೋ ಶೇರ್ ಮಾಡಿ, ನಿಮ್ಮೊಂದಿಗಿನ ಸಿನಿಪಯಣ ಸದಾ ನೆನಪುಳಿಯುವಂತಹದ್ದು, ಸದಾ ಸಂತೋಷವಾಗಿರಿ' ಎಂದು ಶುಭಹಾರಿಸಿದ್ದರು.

  ನಟಿ ರಮ್ಯಾ ಸಿನಿಮಾರಂಗದಿಂದ ದೂರ ಆಗಿ ರಾಜಕೀಯದಲ್ಲಿ ಸಕ್ರೀಯರಾಗಿದ್ದರು. ಆದರೀಗ ರಾಜಕೀಯದಿಂದನೂ ಅಂತರ ಕಾಯ್ದು ಕೊಂಡಿದ್ದಾರೆ. ರಮ್ಯಾ ಕೊನೆಯದಾಗಿ ನಾಗರಹಾವು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ 2016 ರಿಲೀಸ್ ಆಗಿದೆ. ಬಳಿಕ ಮತ್ತೆ ಬಣ್ಣಹಚ್ಚಿಲ್ಲ.

  Arasu ಚಿತ್ರದ ಅತಿಥಿ ಪಾತ್ರಕ್ಕಾಗಿ Darshan ಕೇಳಿದ ಸಂಭಾವನೆ ಏನು ಗೊತ್ತಾ..? | Filmibeat Kannada

  ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಾರೆ, ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಯಾವಾಗ ವಾಪಸ್ ಆಗ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  Actress Ramya Says, My heart is full, sending yo all lots of love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X