For Quick Alerts
  ALLOW NOTIFICATIONS  
  For Daily Alerts

  ರಕ್ಷಿತಾಗೆ ವಿಶೇಷ ಉಡುಗೊರೆ ಕಳುಹಿಸಿ ಪ್ರೀತಿಯಿಂದ ಪತ್ರ ಬರೆದ ರಮ್ಯಾ

  |

  ಒಂದು ಕಾಲದಲ್ಲಿ ಚಂದನವನವನ್ನು ಆಳಿದ ನಟಿಯರು ರಮ್ಯಾ ಮತ್ತು ರಕ್ಷಿತಾ. 2000ದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಬ್ಬರೂ ಸ್ಟಾರ್ ನಟಿಯರಾಗಿ ಮೆರೆದು, ಕನ್ನಡ ಚಿತ್ರ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ಕಲಾವಿದರ ಚಿತ್ರಗಳಿಗೆ ಇಬ್ಬರಲ್ಲಿ ಒಬ್ಬರು ಇರಲೇ ಬೇಕಿತ್ತು.

  ಕ್ರೇಜಿ ಕ್ವೀನ್ ರಕ್ಷಿತಾಗೆ ರಮ್ಯಾ ಕೊಟ್ಟ ಉಡುಗೊರೆ ಏನ್ ಗೊತ್ತಾ? | Filmibeat Kannada

  ರಮ್ಯಾ ಮತ್ತು ರಕ್ಷಿತಾ ನಡುವೆ ಸ್ಟಾರ್ ವಾರ್ ಕೂಡ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು. ಇಬ್ಬರೂ ಕಟ್ಟ ವಿರೋಧಿಗಳು ಎಂದೇ ಹೇಳಲಾಗಿತ್ತು. ಅದರಂತೆ ಇಬ್ಬರೂ ಸಹ ಪೈಪೋಟಿಗೆ ಬಿದ್ದರಂತೆ ನಟಿಸುತ್ತಿದ್ದರು. ಅಂದು ವೈರಿಗಳಾಗಿದ್ದವರು ಇಂದು ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲೇ ಇಬ್ಬರ ಸ್ನೇಹ-ಬಾಂಧವ್ಯ ಬೆಸೆದಿದೆ. ಎಷ್ಟರ ಮಟ್ಟಿಗೆ ಎಂದರೆ ನೆಚ್ಚಿನ ಗೆಳತಿ ರಕ್ಷಿತಾಗೆ ರಮ್ಯಾ ಸರ್ಪ್ರೈಸ್ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ..

  ನನ್ನ ಸಿನಿ ಪಯಣ ನೀವಿಲ್ಲದೆ ಅಪೂರ್ಣ: ರಕ್ಷಿತಾಗೆ ಪ್ರೀತಿಯ ಶುಭಾಶಯ ಕೋರಿದ ರಮ್ಯಾನನ್ನ ಸಿನಿ ಪಯಣ ನೀವಿಲ್ಲದೆ ಅಪೂರ್ಣ: ರಕ್ಷಿತಾಗೆ ಪ್ರೀತಿಯ ಶುಭಾಶಯ ಕೋರಿದ ರಮ್ಯಾ

  ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ಮಾಡಿದ ಮೋಹಕ ತಾರೆ

  ಹುಟ್ಟುಹಬ್ಬಕ್ಕೆ ಪ್ರೀತಿಯ ವಿಶ್ ಮಾಡಿದ ಮೋಹಕ ತಾರೆ

  ಇಬ್ಬರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ವ್ಯಕ್ತ ಪಡಿಸುತ್ತಿರುತ್ತಾರೆ. ಇಬ್ಬರ ಗೆಳೆತನ ಎಷ್ಟು ಗಟ್ಟಿಯಾಗಿದೆ ಎಂದರೆ ಇತ್ತೀಚಿಗೆ ರಕ್ಷಿತಾ ಹುಟ್ಟುಹಬ್ಬಕ್ಕೆ ರಮ್ಯಾ ಹಳೆಯ ಫೋಟೋ ಹಂಚಿಕೊಂಡು ಪ್ರೀತಿಯ ಶುಭಾಶಯ ತಿಳಿಸಿದ್ದರು. ಇದೀಗ ರಕ್ಷಿತಾಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.

  ರಮ್ಯಾ ಕೊಟ್ಟ ಉಡುಗೊರೆ ಹಂಚಿಕೊಂಡ ರಕ್ಷಿತಾ

  ರಮ್ಯಾ ಕೊಟ್ಟ ಉಡುಗೊರೆ ಹಂಚಿಕೊಂಡ ರಕ್ಷಿತಾ

  'ನನ್ನ ಸಿನಿ ಪಯಣ ನೀವಿಲ್ಲದೆ ಪೂರ್ಣವಾಗಲ್ಲ' ಎಂದು ಹೇಳಿದ್ದ ರಮ್ಯಾ ಇಂದು ವಿಶೇಷವಾದ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಪ್ರೀತಿಯಿಂದ ಪತ್ರವನ್ನು ಬರೆದಿದ್ದಾರೆ. ರಮ್ಯಾ ಕೊಟ್ಟ ಉಡುಗೊರೆಯನ್ನು ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ನೀನು ನನ್ನ ಜೀವನದ ಉಡುಗೊರೆ': ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್'ನೀನು ನನ್ನ ಜೀವನದ ಉಡುಗೊರೆ': ರಕ್ಷಿತಾ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರೇಮ್

  ರಕ್ಷಿತಾಗೆ ಸೀರೆ ಗಿಫ್ಟ್ ಮಾಡಿದ ರಮ್ಯಾ

  ರಕ್ಷಿತಾಗೆ ಸೀರೆ ಗಿಫ್ಟ್ ಮಾಡಿದ ರಮ್ಯಾ

  ರಮ್ಯಾ ಗೆಳತಿ ರಕ್ಷಿತಾಗಾಗಿ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ, 'ನಿನಗೆ ಸೀರೆ ಇಷ್ಟವಾಗುತ್ತೆ ಮತ್ತು ಇದನ್ನು ಉಟ್ಟುಕೊಳ್ಳುತ್ತೀಯಾ ಎಂದು ಭಾವಿಸಿದ್ದೇನೆ. ಎಲ್ಲಾ ನೆನಪುಗಳಿಗೆ ಧನ್ಯವಾದಗಳು' ಎಂದು ಬರೆದಿದ್ದಾರೆ.

  ರಕ್ಷಿತಾ ಪ್ರತಿಕ್ರಿಯೆ ಹೀಗಿದೆ

  ರಕ್ಷಿತಾ ಪ್ರತಿಕ್ರಿಯೆ ಹೀಗಿದೆ

  ರಮ್ಯಾ ಕಡೆಯಿಂದ ಬಂದ ಗಿಫ್ಟ್ ನೋಡಿ ಫುಲ್ ಖುಷ್ ಆಗಿರುವ ರಕ್ಷಿತಾ ಧನ್ಯವಾದ ತಿಳಿಸಿದ್ದಾರೆ. ತುಂಬಾ ಇಷ್ಟವಾಯಿತು. ಎಲ್ಲಾ ನೆನಪುಗಳಿಗೂ ಧನ್ಯವಾದಗಳು. ಹೌದು, ನೀನಿಲ್ಲದೇ ನನ್ನ ಸಿನಿ ಜರ್ನಿ ನಿಜಕ್ಕೂ ಅಪರಿಪೂರ್ಣ' ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಇಬ್ಬರ ಸ್ನೇಹ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ರಮ್ಯಾ ಮತ್ತೆ ಚಂದನವನಕ್ಕೆ ವಾಪಸ್ ಆಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  English summary
  Actress Ramya sends saree as a gift to Rakshita Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X