ಜಾಮೀನಿನ ಮೇಲೆ ಹೊರಗಿರುವವ ನನ್ನ ಪ್ರಮಾಣಿಕತೆ ಪ್ರಶ್ನಿಸುತ್ತಾನೆ: ನಲಪಾಡ್‌ಗೆ ರಮ್ಯಾ ಪ್ರತ್ಯುತ್ತರ

ನಟಿ ರಮ್ಯಾ ನಿನ್ನೆ (ಏಪ್ರಿಲ್ 12) ರಂದು ಡಿ.ಕೆ.ಶಿವಕುಮಾರ್, ಕರ್ನಾಟಕ ಕಾಂಗ್ರೆಸ್ ವಿರುದ್ಧ ಮಾಡಿದ ಟ್ವೀಟ್‌ಗಳು ಚರ್ಚೆಗೆ ಕಾರಣವಾಗಿದೆ.

ಎಂಬಿ ಪಾಟೀಲ್ ವಿರುದ್ಧ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ತಕರಾರು ಎತ್ತಿ ಟ್ವೀಟ್ ಒಂದನ್ನು ರಮ್ಯಾ ಮಾಡಿದ್ದರು. ಆ ನಂತರ ತಮ್ಮ ಟ್ವೀಟ್‌ಗೆ ಬಂದ ಪ್ರತಿಕ್ರಿಯೆಯಗಳಿಂದ ಕೆರಳಿಸಿದ ರಮ್ಯಾ, ಈ ಕಾರ್ಯವನ್ನು ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಐಟಿ ಸೆಲ್‌ ಮಾಡುತ್ತಿದೆ ಎಂದಿದ್ದರು.

ಇದೀಗ ರಮ್ಯಾರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಡಿ.ಕೆ.ಶಿವಕುಮಾರ್‌ರ ಬೆಂಬಲಿಗ, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ರಮ್ಯಾ ಇಷ್ಟು ದಿನ ಎಲ್ಲಿದ್ದರು ಎಂಬುದು ಸಹ ಗೊತ್ತಿಲ್ಲ.ಈಗ ತಮ್ಮ ಇರುವಿಕೆಯನ್ನು ತೋರಿಸಲು ಹೀಗೆ ನಮ್ಮ ನಾಯಕರ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ಯಾವುದೋ ಹುದ್ದೆಯ ಆಸೆಗಾಗಿ ಅವರು ಹೀಗೆ ಮಾಡುತ್ತಿದ್ದಾರೆ. ಸೀಟಿನ ಮೇಲೆ ಟವೆಲ್ ಹಾಕುವ ತಂತ್ರ ಅವರದ್ದು, ಅವರು ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು'' ಎಂದಿದ್ದರು.

''ಜಾಮೀನಿನ ಮೇಲೆ ಹೊರಗಿರುವವ ನನ್ನ ಬಗ್ಗೆ ಪ್ರಶ್ನೆ ಮಾಡ್ತಾನೆ''

''ಜಾಮೀನಿನ ಮೇಲೆ ಹೊರಗಿರುವವ ನನ್ನ ಬಗ್ಗೆ ಪ್ರಶ್ನೆ ಮಾಡ್ತಾನೆ''

ನಲಪಾಡ್ ಮಾತಿನಿಂದ ಕೆರಳಿದಿರುವ ನಟಿ ರಮ್ಯಾ, ನಲಪಾಡ್‌ಗೆ ಖಡಕ್ ಪ್ರತಿಕ್ರಿಯೆಯನ್ನು ಟ್ವಿಟ್ಟರ್ ಮೂಲಕ ನೀಡಿದ್ದಾರೆ. 2018 ರಲ್ಲಿ ನಲಪಾಡ್‌ನಿಂದ ಹಲ್ಲೆಗೊಳಗಾಗಿ ವಿದ್ವತ್‌ನ ಚಿತ್ರದ ಜೊತೆಗೆ ನಲಪಾಡ್‌ ಹಾಗೂ ಆತನ ಬೆಂಬಲಿಗರು ಮಾಡಿದ್ದ ಇತರ ಅಪರಾಧ ಪ್ರಕರಣದ ಸುದ್ದಿಗಳ ಚಿತ್ರಗಳನ್ನು ಹಂಚಿಕೊಂಡಿರುವ ನಟಿ ರಮ್ಯಾ, ''ಜಾಮೀನಿನ ಮೇಲೆ ಹೊರಗಿರುವ ಹುಡುಗ, ಕರ್ನಾಟಕ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ, ಶಾಸಕ ಹ್ಯಾರಿಸ್ ಪುತ್ರ ನನ್ನ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾನೆ'' ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ವಿದ್ವತ್‌ ಮೇಲೆ ಹಲ್ಲೆ ನಡೆಸಿದ್ದ ನಲಪಾಡ್

ವಿದ್ವತ್‌ ಮೇಲೆ ಹಲ್ಲೆ ನಡೆಸಿದ್ದ ನಲಪಾಡ್

ಮೊಹಮ್ಮದ್ ನಲಪಾಡ್ 2018 ರಲ್ಲಿ ರೆಸ್ಟೊರೆಂಟ್ ಒಂದರಲ್ಲಿ ಕುಡಿತ ಮತ್ತಿನಲ್ಲಿ ವಿದ್ವತ್ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದ. ಆ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಅದು ಮಾತ್ರವೇ ಅಲ್ಲದೆ ಆ ನಂತರವು ನಲಪಾಡ್ ಹಾಗೂ ಬೆಂಬಲಿಗರ ಇನ್ನಷ್ಟು ಹಲ್ಲೆ ಆರೋಪಗಳು ಅಲ್ಲಲ್ಲಿ ಕೇಳಿ ಬಂದವು. ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದ ರಕ್ಷಾ ರಾಮಯ್ಯ ಬೆಂಬಲಿಗರ ಮೇಲೆ ಹಲ್ಲೆ, ಯುವ ಕಾಂಗ್ರೆಸ್‌ ಕಾರ್ಯದರ್ಶಿ ಯುವತಿಯೊಬ್ಬರ ಮೇಲೆ ಹಲ್ಲೆ, ಯಲಹಂಕದ ರೆಸ್ಟೊರೆಂಟ್ ಒಂದರಲ್ಲಿ ಹಲ್ಲೆ ಮಾಡಿದ ಆರೋಪಗಳು ನಲಪಾಡ್‌ ಹಾಗೂ ಬೆಂಬಲಿಗರ ಮೇಲೆ ಕೇಳಿ ಬಂದಿತ್ತು.

2019 ರ ಬಳಿಕ ರಮ್ಯಾ ಕಾಣೆಯಾಗಿದ್ದರು: ನಲಪಾಡ್

2019 ರ ಬಳಿಕ ರಮ್ಯಾ ಕಾಣೆಯಾಗಿದ್ದರು: ನಲಪಾಡ್

ಇದೀಗ ನಟಿ ರಮ್ಯಾರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಲಪಾಡ್, ''2019 ರ ಬಳಿಕ ನಟಿ ರಮ್ಯಾ ಕಾಣೆಯಾಗಿದ್ದರು. ಹಾಗಾಗಿ 2020 ರಲ್ಲಿ ಕೋವಿಡ್ ಬಂದಾಗ ನಲಪಾಡ್ ಹಾಗೂ ರಾಜ್ಯದ ಯುವ ಕಾಂಗ್ರೆಸ್ ರಾಜ್ಯದಲ್ಲಿ ಏನೇನು ಕೆಲಸ ಮಾಡಿದೆ ಎಂಬುದು ಅವರಿಗೆ ಗೊತ್ತಿಲ್ಲ. ಪ್ರತಿ ಜಿಲ್ಲೆಗೂ ಆಂಬುಲೆನ್ಸ್ ನೀಡಿದೆ. ಕೋವಿಡ್ ಸಮಯದಲ್ಲಿ ಬಡವರಿಗೆ ಉಚಿತ ಆಹಾರ ಒದಗಿಸಿದೆ. ಕಾರ್ಮಿಕರಿಗೆ ಸಹಾಯ ಮಾಡಿದೆ. ಆದರೆ ಇದೆಲ್ಲ ರಮ್ಯಾ ಅವರಿಗೆ ಗೊತ್ತಿಲ್ಲ. ಅದು ಅವರ ತಪ್ಪಲ್ಲ ಬಿಡಿ. ಹಿಂದೆ ಯಾವಾಗಲೋ ನಡೆದಿರುವ ಸಣ್ಣ ಘಟನೆಯನ್ನು ಇಟ್ಟುಕೊಂಡು ಮಾತನಾಡುವುದು ಸರಿಯಲ್ಲ. ನಾನು ಮಾಡಿರುವ ಒಳ್ಳೆಯ ಕೆಲಸಗಳ್ನು ನೋಡಿ'' ಎಂದಿದ್ದಾರೆ ನಲಪಾಡ್.

ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ

ರಾಜಕೀಯದಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ

ಕಳೆದ ಲೋಕಸಭಾ ಚುನಾವಣೆ ಬಳಿಕ ನಟಿ ರಮ್ಯಾ ರಾಷ್ಟ್ರೀಯ ಕಾಂಗ್ರೆಸ್ ಐಟಿ ಸೆಲ್‌ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದಾರೆ. ಈಗ ಮತ್ತೆ ಸಿನಿಮಾರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಚಿತ್ರಕತೆಗಳನ್ನು ಕೇಳುತ್ತಿದ್ದಾರೆ. ಕನ್ನಡದ ಹೊಸಬರ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಇನ್ನೇನು ಬಿಡುಗಡೆ ಆಗಬೇಕಿದೆ.

More from Filmibeat

English summary
Actress Ramya gave strong reply to youth congress president Mohammad Nalapad. She said the boy who out on bail questioning my integrity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X