twitter
    For Quick Alerts
    ALLOW NOTIFICATIONS  
    For Daily Alerts

    ಮೋದಿಗೆ ಕನ್ನಡ ಸಿನಿಮಾ ಟ್ರೈಲರ್ ನೋಡಿ ಎಂದ ರಮ್ಯಾ

    |

    ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಕರ್ನಾಟಕ ಪ್ರವಾಸ ನಿನ್ನೆ (ಜೂನ್ 21) ಕ್ಕೆ ಮುಗಿದಿದೆ. ಜೂನ್ 20ರಂದು ಬೆಂಗಳೂರಿನಲ್ಲಿ ಡಾ ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹೊಸ ಕಟ್ಟಡ ಉದ್ಘಾಟನೆ ಮಾಡಿದ ಮೋದಿ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಮೈಸೂರಿಗೆ ತೆರಳಿ ಅಲ್ಲಿಯೂ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು.

    ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಮೋದಿ ಅಲ್ಲಿ ಜನರನ್ನುದ್ದೇಶಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಜೂನ್ 21ರಂದು ಅರಮನೆ ಆವರಣದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಬಳಿಕ ದೆಹಲಿಗೆ ವಾಪಸ್ಸಾದರು.

    ಮೋದಿಯವರ ಈ ಎರಡು ದಿನದ ರಾಜ್ಯ ಭೇಟಿಯ ಬಗ್ಗೆ ವಿಪಕ್ಷಗಳು ಕೆಲವು ಟೀಕೆಗಳನ್ನು ಮಾಡಿವೆ, ಈ ಹಿಂದೆ ಕಾಂಗ್ರೆಸ್ ಪಕ್ಷದ ಸಕ್ರಿಯ ಸದಸ್ಯೆಯಾಗಿದ್ದ ನಟಿ ರಮ್ಯಾ ಮೊದಲಿನಿಂದಲೂ ಬಿಜೆಪಿ ಹಾಗೂ ಮೋದಿಯವರನ್ನು ಟೀಕಿಸುತ್ತಲೇ ಬಂದಿದ್ದಾರೆ. ಇದೀಗ ಮೋದಿ ಆಗಮನದ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಮೋದಿಗೆ ವ್ಯಂಗ್ಯವಾಗಿ ಸ್ವಾಗತ ಕೋರಿರುವ ಜೊತೆಗೆ, ಕನ್ನಡ ಸಿನಿಮಾ ಒಂದರ ಟ್ರೈಲರ್ ನೋಡುವಂತೆ ಸಹ ಸಲಹೆ ನೀಡಿದ್ದಾರೆ.

    ಮೈಸೂರಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿ ನೀಡಿದ ರಮ್ಯಾ

    ಮೈಸೂರಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿ ನೀಡಿದ ರಮ್ಯಾ

    ''ನಮ್ಮ ಮೈಸೂರಿಗೆ ಸ್ವಾಗತ ಮೋದಿ ಅವರೇ, ನಿಮಗೆ ಸಮಯ ಸಿಕ್ಕರೆ ಮೈಸೂರಿನಲ್ಲಿ ನೀವು ಮಾಡಬೇಕಾದ ಕೆಲಸಗಳ ಪಟ್ಟಿ ಇಲ್ಲಿದೆ. ಮೊದಲನೇಯದಾಗಿ ನೀವು ರಸ್ತೆಯ ಉದ್ಘಾಟನೆ ಮಾಡಬೇಕಿದೆ. ರಸ್ತೆಗಳು ನಮಗೆ ಅತ್ಯಂತ ಅವಶ್ಯಕವಾಗಿದೆ'' ಎಂದಿರುವ ರಮ್ಯಾ, ರಸ್ತೆ ಮಂಜೂರು ಮಾಡಿದ್ದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಹ ಹೇಳಿದ್ದಾರೆ. ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ ಕಾರ್ಯ ಬಹು ದಿನದಿಂದ ನಡೆಯುತ್ತಿದ್ದು, ರಸ್ತೆ ಉದ್ಘಾಟನೆ ಮಾಡಬೇಕೆಂದು ರಮ್ಯಾ, ಮೋದಿ ಬಳಿ ಕೇಳಿಕೊಂಡಿದ್ದಾರೆ.

    'ಆರ್ಕೆಸ್ಟ್ರಾ ಮೈಸೂರು' ಟ್ರೈಲರ್ ನೋಡಿ: ರಮ್ಯಾ

    'ಆರ್ಕೆಸ್ಟ್ರಾ ಮೈಸೂರು' ಟ್ರೈಲರ್ ನೋಡಿ: ರಮ್ಯಾ

    ಎರಡನೇಯದಾಗಿ ಮೈಸೂರಿನಲ್ಲಿ ಬಹಳ ಫೇಮಸ್ ಆಗಿರುವ ಮೈಲಾರಿ ಬೆಣ್ಣೆ ದೋಸೆ ಸವಿಯಿರಿ. ನೀವು ಈವರೆಗೆ ಸವಿಯದಿರುವಂತಹಾ ಮೆತ್ತನೆಯ ದೋಸೆ ಅದಾಗಿದೆ ಎಂದಿದ್ದಾರೆ ರಮ್ಯಾ. ಮೂರನೇಯದಾಗಿ, ಮೈಸೂರಿನ ಆರ್ಕೆಸ್ಟ್ರಾ ಸಂಸ್ಕೃತಿಕ ಬಗ್ಗೆ ತಿಳಿದುಕೊಳ್ಳಿ, ಅದು ಸಾಧ್ಯವಾಗದೇ ಹೋದರೆ ಮೈಸೂರಿನ ಯುವ ಪ್ರತಿಭಾವಂತರು ನಿರ್ಮಿಸಿರುವ 'ಆರ್ಕೆಸ್ಟ್ರಾ ಮೈಸೂರು' ಸಿನಿಮಾದ ಟ್ರೈಲರ್ ಅನ್ನು ಒಮ್ಮೆ ನೋಡಿ ಎಂದು ಸಲಹೆ ನೀಡಿದ್ದಾರೆ ರಮ್ಯಾ.

    ಯುವ ಪ್ರತಿಭಾವಂತರೆ ಮಾಡಿರುವ 'ಆರ್ಕೆಸ್ಟ್ರಾ ಮೈಸೂರು'

    ಯುವ ಪ್ರತಿಭಾವಂತರೆ ಮಾಡಿರುವ 'ಆರ್ಕೆಸ್ಟ್ರಾ ಮೈಸೂರು'

    ''ಆರ್ಕೆಸ್ಟ್ರಾ ಮೈಸೂರು' ಸಿನಿಮಾವನ್ನು ಯುವ ಪ್ರತಿಭಾವಂತರೆ ಸೇರಿ ನಿರ್ಮಿಸಿದ್ದಾರೆ. ಕನ್ನಡದ ಕೆಲವಾರು ಸಿನಿಮಾಗಳಲ್ಲಿ ನಟಿಸಿ ಈಗಾಗಲೇ ಉತ್ತಮ ನಟನೆಂದು ಹೆಸರು ಗಳಿಸಿರುವ ಮೈಸೂರು ಪೂರ್ಣ ಈ ಸಿನಿಮಾದ ನಾಯಕ. ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂದು ಕನಸು ಕಟ್ಟಿಕೊಂಡಿರುವ ಯುವಕನೊಬ್ಬನ ಕತೆಯನ್ನು ಈ ಸಿನಿಮಾ ಹೊಂದಿದೆ. ಆರ್ಕೆಸ್ಟ್ರಾದಲ್ಲಿ ಹಾಡುವ ಕನಸು ಕಟ್ಟಿಕೊಂಡಿರುವ ಯುವಕ ಅವಮಾನ ಅನುಭವಿಸಿ ಕೊನೆಗೆ ತಾನೇ ಹೇಗೆ ಆರ್ಕೆಸ್ಟ್ರಾ ಕಟ್ಟುತ್ತಾನೆ ಎಂಬುದೇ ಕತೆ. ಹಾಸ್ಯದ ಜೊತೆಗೆ ಭಾವುಕ ಕತೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ ಎಂಬುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ.

    'ಆರ್ಕೆಸ್ಟ್ರಾ ಮೈಸೂರು' ಸಿನಿಮಾಕ್ಕೆ ಡಾಲಿ ಧನಂಜಯ್ ಬೆಂಬಲ

    'ಆರ್ಕೆಸ್ಟ್ರಾ ಮೈಸೂರು' ಸಿನಿಮಾಕ್ಕೆ ಡಾಲಿ ಧನಂಜಯ್ ಬೆಂಬಲ

    'ಆರ್ಕೆಸ್ಟ್ರಾ ಮೈಸೂರು' ಸಿನಿಮಾಕ್ಕೆ ಡಾಲಿ ಧನಂಜಯ್ ಬೆಂಬಲವಿದ್ದು, ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸುನಿಲ್ ಮೈಸೂರು, ಮೈಸೂರು ಪೂರ್ಣ ಜೊತೆಗೆ ನಾಗಭೂಷಣ್ ಸಹ ಸಿನಿಮಾದಲ್ಲಿ ಇದ್ದಾರೆ. ರಾಜಲಕ್ಷ್ಮಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ರಘು ದೀಕ್ಷಿತ್. ಸಿನಿಮಾದ ಟ್ರೈಲರ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    English summary
    Actress, politician Ramya suggested Prime minister Modi to watch Orchestra Mysuru Kannada movie trailer to understand Orchestra culture of Mysore.
    Wednesday, June 22, 2022, 10:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X