For Quick Alerts
  ALLOW NOTIFICATIONS  
  For Daily Alerts

  ದಿಶಾ ರವಿ ಬೆಂಬಲಕ್ಕೆ ನಿಂತ ರಮ್ಯಾ: ಆಕೆ ಮುಗ್ದೆ, ರೈತರ ಪರ ಹೋರಾಡುವುದು ಕ್ರೈಂ ಅಲ್ಲ ಎಂದ ನಟಿ

  |

  '21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಬೆಂಗಳೂರು ಹುಡುಗಿ, ಕನ್ನಡತಿ. ನಾನು ಕರ್ನಾಟಕ ಸರ್ಕಾರದ ಬಳಿ ಮನವಿ ಮಾಡುತ್ತೇನೆ. ನಾವು ಅವಳ ಬೆಂಬಲಕ್ಕೆ ನಿಲ್ಲಬೇಕು. ಆಕೆ ಮುಗ್ದೆ, ರೈತರ ಬೆಂಬಲಕ್ಕೆ ನಿಲ್ಲುವುದು ಕ್ರೈಂ ಅಲ್ಲ' ಎಂದು ನಟಿ ಮತ್ತು ರಾಜಕಾರಣಿ ರಮ್ಯಾ ಬಂಧಿತ ದಿಶಾ ರವಿ ಪರ ಬ್ಯಾಟಿಂಗ್ ಮಾಡಿದ್ದಾರೆ.

  ದೆಹಲಿ ರೈತ ಹೋರಾಟದ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಿಶಾ ರವಿ ಬಂಧನ ಖಂಡಿಸಿ ಅನೇಕರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಸಿನಿಮಾತಾರೆಯರು ಸಹ ವಿರೋಧಿಸುತ್ತಿದ್ದಾರೆ.

  ಬೆಂಗಳೂರಿನ ಯುವತಿ ಬಂಧನ: ದೆಹಲಿ ಪೊಲೀಸರ ಮೇಲೆ ಸಿದ್ಧಾರ್ಥ್‌ ಗರಂಬೆಂಗಳೂರಿನ ಯುವತಿ ಬಂಧನ: ದೆಹಲಿ ಪೊಲೀಸರ ಮೇಲೆ ಸಿದ್ಧಾರ್ಥ್‌ ಗರಂ

  ತೆಲುಗಿನ ಖ್ಯಾತ ನಟ ಸಿದ್ಧಾರ್ಥ್ ದೆಹಲಿ ಪೊಲೀಸರ ವಿರುದ್ಧ ಗರಂ ಆದ ಬೆನ್ನಲ್ಲೇ ನಟಿ ರಮ್ಯಾ ಸಹ ದಿಶಾ ಬಂಧನ ಖಂಡಿಸಿದ್ದಾರೆ. ಅಲ್ಲದೆ ಕರ್ನಾಟಕ ಸರ್ಕಾರ ಆಕೆಯ ಪರ ನಿಲ್ಲಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಸ್ಟೇಟಸ್ ಹಾಕಿರುವ ರಮ್ಯಾ, ರೈತ ಹೋರಾಟದಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿಲ್ಲ. ಸರ್ಕಾರದ ನಡೆ ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ' ಎಂದಿದ್ದಾರೆ.

  'ಪ್ರಜಾಪ್ರಭುತ್ವ, ಸ್ವತಂತ್ರ್ಯ, ನಮ್ಮ ಹಕ್ಕು ಯಾವುದು ಇಲ್ಲ. ನಾವೆಲ್ಲರು ಜೈಲಿನಲ್ಲಿ ಇದ್ದೀವಿ ಎಂದು ಭಾಸವಾಗುತ್ತಿದೆ. ರೈತರ ಪರ ಹೋರಾಟ ಮಾಡುವುದು ತಪ್ಪೇ' ಎಂದಿದ್ದಾರೆ. 'ಯಾವುದೇ ಪ್ರತಿಭಟನೆ ಮತ್ತು ಆಂದೋಲನ ದೊಡ್ಡ ಮಟ್ಟದಲ್ಲಿ ಮಾಡುವ ಸಂದರ್ಭದಲ್ಲಿ ಟೂಲ್ ಕಿಟ್ ತಯಾರು ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಅಂತರಾಷ್ಟ್ರೀಯ ಷಡ್ಯಂತರವಿಲ್ಲ' ಎಂದು ರಮ್ಯಾ ಹೇಳಿದ್ದಾರೆ.

  ರಮ್ಯಾ ದಿಶಾ ರವಿ ಬಂಧನ ವಿರೋಧಿಸಿ ಸಾಲು ಸಾಲು ಸ್ಟೇಟಸ್ ಹಾಕಿದ್ದಾರೆ. ಜೊತೆಗೆ ದಿಶಾ ರವಿ ಪರ ಧ್ವನಿ ಎತ್ತಿ ಎಂದು ರಮ್ಯಾ ಮನವಿ ಮಾಡಿದ್ದಾರೆ.

  ಟಗರು ಕಣ್ಣಿಗೆ ಬೀಳಲಿಲ್ಲವೇ ಪೊಗರು ಅಸಹ್ಯಗಳು | Filmibeat Kannada

  ಇನ್ನು ಬಗ್ಗೆ ಟ್ವೀಟ್ ಮಾಡಿರುವ ನಟ ಸಿದ್ಧಾರ್ಥ್ 'ಪ್ರತಿಭಟನಾಕಾರರು ಚರ್ಚ್‌ನಲ್ಲಿ ಸೇರಿದರೆ ಅವರನ್ನು ಕ್ರಿಶ್ಚಿಯನ್ ಗೂಂಡಾಗಳು ಎನ್ನುತ್ತೀರಿ, ಅವರು ಬಿರಿಯಾನಿ ತಿಂದರೆ ಜಿಹಾದಿಗಳು ಎನ್ನುತ್ತೀರಿ, ತಲೆಗೆ ಮುಂಡಾಸು ಕಟ್ಟಿದರೆ ಜಿಹಾದಿಗಳು ಎನ್ನುತ್ತೀರಿ. ಅದೇ ಬೇರೆ ಸ್ಥಳದಲ್ಲಿ ಒಟ್ಟಾದರೆ 'ಟೂಲ್ ಕಿಟ್' ಎನ್ನುತ್ತೀರಿ. ಆದರೆ ನಾವು ಮಾತ್ರ ಈ ಫ್ಯಾಸಿಸ್ಟ್ ಸರ್ಕಾರದ ಬಗ್ಗೆ ಏನೂ ಮಾತನಾಡುವಂತಿಲ್ಲ' ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

  English summary
  Actress Ramya support Disha Ravi, said she is innocent we should support her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X