For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಿನಿಮಾ-ರಾಜಕೀಯದಲ್ಲಿ ಸಕ್ರೀಯರಾಗ್ತಾರಾ ರಮ್ಯಾ? ಮೋಹಕತಾರೆ ಹೇಳಿದ್ದೇನು?

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ನಟಿ ರಮ್ಯಾ ಸದ್ಯ ಸಿನಿಮಾರಂಗದಿಂದ ಸದ್ಯ ದೂರ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಸಿನಿಮಾಗಳ ಬಗ್ಗೆ, ರಾಜಕೀಯ ಮತ್ತು ಪ್ರಸ್ತುತ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗ್ತಾರಾ, ರಾಜಕೀಯದಲ್ಲಿ ಸಕ್ರೀಯರಾಗುತ್ತಾರಾ ಅಂತ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಮತ್ತೆ ಬಣ್ಣ ಹಚ್ಚುವ ಬಗ್ಗೆ ರಮ್ಯಾ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ.

  ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ರಮ್ಯಾ ಅಭಿಮಾನಿಗಳ ಆಸೆ ಈಡೇರಲು ಸಾಧ್ಯವಿಲ್ಲ ಎನ್ನುವುದನ್ನು ಬಹಿರಂಗ ಪಡಿಸುವ ಮೂಲಕ ಶಾಕ್ ನೀಡಿದ್ದರು. ಈಗಿನ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎಂದು ಸ್ವತಃ ರಮ್ಯಾ ಅವರೇ ಹೇಳಿಕೊಂಡಿದ್ದರು. ''ಸಿನಿಮಾ ಎನ್ನುವುದು ಮುಗಿದು ಹೋದ ಅಧ್ಯಾಯ'' ಎಂದು ಹೇಳುವ ಮೂಲಕ ತಮ್ಮ ಫ್ಯಾನ್ಸ್ ಆಸೆಗೆ ಮತ್ತೆ ತಣ್ಣೀರೆರಚಿದ್ದರು. ಇದೀಗ ಈ ಬಗ್ಗೆ ಮತ್ತೆ ಮಾತನಾಡಿರುವ ರಮ್ಯಾ ಸಿನಿಮಾ ಮಾಡಲ್ಲ ಎಂದರೆ ಅಭಿಮಾನಿಗಳಿಗೆ ಬೇಸರ ಆಗುತ್ತದೆ ಎಂದು ಹೇಳಿದ್ದಾರೆ. ಮುಂದೆ ಓದಿ...

  ಮತ್ತೆ ಬಣ್ಣ ಹಚ್ಚುವ ಬಗ್ಗೆ ರಮ್ಯಾ ಪ್ರತಿಕ್ರಿಯೆ

  ಮತ್ತೆ ಬಣ್ಣ ಹಚ್ಚುವ ಬಗ್ಗೆ ರಮ್ಯಾ ಪ್ರತಿಕ್ರಿಯೆ

  ಇತ್ತೀಚಿಗಷ್ಟೆ ಆಂಗ್ಲ ವೆಬ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ಸಿನಿಮಾ ಮತ್ತು ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಗೆ ಮತ್ತೆ ಬರ್ತೀರಾ ಎಂದು ಕೇಳಿದ ಪ್ರಶ್ನೆಗೆ ರಮ್ಯಾ "ನಾನು ಹೌದು ಎಂದು ಹೇಳಲು ಬಯಸುತ್ತೇನೆ. ಯಾಕೆಂದರೆ ಹೀಗೆ ಹೇಳಿದರೆ ತುಂಬಾ ಜನರನ್ನು ಸಂತೋಷ ಪಡುತ್ತಾರೆ. ಸಿನಿಮಾ ತಂಡದವರು ನನ್ನನ್ನು ಅಪ್ರೋಚ್​ ಮಾಡಿದ್ದರು. ಆದರೆ, ಅವರಿಗೆ ನಾನು ಏನನ್ನೂ ಹೇಳಿಲ್ಲ. ಅವರಿಗೆ ನೋಡೋಣ ಎಂದು ಹೇಳಬೇಕು. ಇಲ್ಲ ಎಂದರೆ ಬಹಳಷ್ಟು ಜನರು ನಿರಾಸೆಗೊಳ್ಳುತ್ತಾರೆ. ಜೀವನದ ಒಂದು ಸತ್ಯ ಯಾವಾಗಲೂ ಇಲ್ಲ ಎಂದು ಹೇಳಬಾರದು" ಎಂದು ರಮ್ಯಾ ಹೇಳಿದ್ದಾರೆ.

  ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ ರಮ್ಯಾ

  ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ ರಮ್ಯಾ

  ಮೂಲಗಳ ಪ್ರಕಾರ ರಮ್ಯಾ ಅವರಿಗೆ ಈಗಾಗಲೇ ಸಾಕಷ್ಟು ಸಿನಿಮಾ ಆಫರ್ ಹೋಗಿದೆ. ಆದರೆ ರಮ್ಯಾ ಮಾತ್ರ ಮತ್ತೆ ಬಣ್ಣ ಹಚ್ಚಲು ಸಿದ್ಧರಿಲ್ಲ. ಸಿನಿಮಾ ಮಾತ್ರವಲ್ಲದೆ ಮತ್ತೆ ರಾಜಕೀಯಕ್ಕೂ ಎಂಟ್ರಿ ಕೊಡದಿರಲು ನಿರ್ಧರಿಸಿದ್ದಾರೆ. ಆದರೆ ರಮ್ಯಾ ಅವರ ಈ ದೃಢ ನಿರ್ಧಾರಕ್ಕೆ ಕಾರಣವೇನು ಎನ್ನುವುದನ್ನು ಮಾತ್ರ ಬಹಿರಂಗಪಡಿಸಿಲ್ಲ.

  ನೀನಾಸಂ ಸತೀಶ್ ಸಿನಿಮಾಗೆ ಸಾಥ್ ನೀಡಿದ್ದ ರಮ್ಯಾ

  ನೀನಾಸಂ ಸತೀಶ್ ಸಿನಿಮಾಗೆ ಸಾಥ್ ನೀಡಿದ್ದ ರಮ್ಯಾ

  ಇತ್ತೀಚಿಗಷ್ಟೆ ರಮ್ಯಾ ನೀನಾಸಂ ಸತೀಶ್ ನಟನೆಯ ಸಿನಿಮಾಗೆ ಸಾಥ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಸತೀಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದರು. ಅನೇಕ ವರ್ಷಗಳ ಬಳಿಕ ರಮ್ಯಾ ಸಿನಿಮಾ ಕೆಲಸಗಳ ಕಡೆ ಮಾಡಿದ್ದರು. ರಮ್ಯಾ ಅವರ ಈ ನಡೆ ಮತ್ತೆ ಚಿತ್ರರಂಗಕ್ಕೆ ಬರುವ ಪ್ಲಾನ್ ಏನಾದರೂ ಮಾಡುತ್ತಿದ್ದಾರಾ ಎನ್ನುವ ಅನುಮಾನ ಮೂಡಿಸಿತ್ತು.

  ನೀನಾಸಂ ಸತೀಶ್ ಬಗ್ಗೆ ರಮ್ಯಾ ಮಾತು

  ನೀನಾಸಂ ಸತೀಶ್ ಬಗ್ಗೆ ರಮ್ಯಾ ಮಾತು

  "ತುಂಬ ಉತ್ಸಾಹದಿಂದ ಲಾಂಚ್ ಮಾಡುತ್ತಿದ್ದೇನೆ, ಕನ್ನಡದ ನಮ್ಮ ಹೆಮ್ಮೆಯ ನಟ ಸತೀಶ್ ನೀನಾಸಂ ಅವರ ಪಗೈವನುಕು ಅರುಳ್ವಾಯ್ ಚಿತ್ರದ ಪಾತ್ರದ ಪೋಸ್ಟರ್. ಮೊದಲ ಬಾರಿಗೆ ಸತೀಶ್ ನೀನಾಸಂ ಅವರು ತಮಿಳಿನಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ" ಹಾಡಿ ಹೊಗಳಿದ್ದರು. ಅನೇಕ ವರ್ಷಗಳ ಬಳಿಕ ರಮ್ಯಾ ಕನ್ನಡ ನಟರೊಬ್ಬರನ್ನು ಹೊಗಳಿ ಅಚ್ಚರಿ ಮೂಡಿಸಿದ್ದರು.

  English summary
  Sandalwood Actress Ramya talks about comeback to film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X