For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಗೆ ರಮ್ಯಾ ಕೊಟ್ಟ ಬ್ರೇಕಿಂಗ್: 2019ರಲ್ಲಿ ಸಿನಿಮಾಗೆ ಕಮ್ ಬ್ಯಾಕ್.!

  By Bharath Kumar
  |
  ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಆಗಲಿದ್ದಾರೆ ರಮ್ಯಾ.!! | Filmibeat Kannada

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರ ಸಿನಿಮಾ ಜಗತ್ತಿನಿಂದ ದೂರುವಾದರು. ಆದ್ರೆ, ಅವರ ಅಭಿಮಾನಿಗಳು ಮಾತ್ರ ರಮ್ಯಾ ಮತ್ತೆ ಬನ್ನಿ, ರಮ್ಯಾ ಮತ್ತೆ ಬನ್ನಿ ಅಂತ ಕಾಯ್ತಿದ್ದಾರೆ.

  ಕಳೆದ ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಸ್ಪರ್ಧೆ ಮಾಡಿ ಸೋಲು ಕಂಡರು. ಬಳಿಕ ಇಂಡಸ್ಟ್ರಿಗೆ ವಾಪಸ್ ಆಗ್ತಾರೆ ಎಂದುಕೊಂಡಿದ್ದವರಿಗೆ ಅಚ್ಚರಿ ಉಂಟು ಮಾಡಿದ ಮೋಹಕ ತಾರೆ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡರು. ಅಲ್ಲಿಗೆ ಸಿನಿಮಾ ಆಸೆ ಕಮರಿ ಹೋಗಿತ್ತು.

  ಹೀಗಿದ್ದರೂ, ರಮ್ಯಾ ಮತ್ತೆ ಸಿಲ್ವರ್ ಸ್ಕ್ರೀನ್ ಗೆ ಬರ್ತಾರೆ, ಸಿನಿಮಾ ಮಾಡ್ತಾರೆ ಎಂಬ ಒಂದು ಆಸೆ ಕಾಡುತ್ತಿತ್ತು. ಇದೀಗ, ಈ ಆಸೆ ನೆರವೇರಬಹುದು ಎನ್ನಿಸುತ್ತಿದೆ. ಯಾಕಂದ್ರೆ, ಸ್ವತಃ ರಮ್ಯಾ ಅವರೇ ನಾನು ಮತ್ತೆ ಸಿನಿಮಾಗೆ ಬರ್ತೀನಿ ಎಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಾವಾಗ.? ಎಲ್ಲಿ.? ಮುಂದೆ ಓದಿ.....

  2019ರ ನಂತರ ರಮ್ಯಾ ಕಂಬ್ಯಾಕ್.!

  2019ರ ನಂತರ ರಮ್ಯಾ ಕಂಬ್ಯಾಕ್.!

  ರಮ್ಯಾ ಮತ್ತೆ ನೀವು ಯಾವಾಗ ಸಿನಿಮಾ ಮಾಡ್ತೀರಾ.? ಅಂತ ಅದೇಷ್ಟೋ ಜನ ಕೇಳಿದ್ದಾರೋ ಗೊತ್ತಿಲ್ಲ. ಅವರಿಗೆಲ್ಲ ಉತ್ತರ ಈಗ ಕೊಟ್ಟಿದ್ದಾರೆ. 2019ರ ನಂತರ ರಮ್ಯಾ ಅವರನ್ನ ಮತ್ತೆ ಬೆಳ್ಳಿತೆರೆಯಲ್ಲಿ ನೋಡಬಹುದಂತೆ.

  ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

  ರಕ್ಷಿತ್ ಶೆಟ್ಟಿಗೆ ಕೊಟ್ಟ ಉತ್ತರ

  ಅಂದ್ಹಾಗೆ, ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ನೋಡಿದ ರಮ್ಯಾ, ಟೀಸರ್ ಹಾಗೂ ರಕ್ಷಿತ್ ಶೆಟ್ಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನ ಕಂಡು ಖುಷಿಯಾದ ರಕ್ಷಿತ್ ಶೆಟ್ಟಿ 'ಥ್ಯಾಂಕ್ಸ್ ಹೇಳಿ, ನಿಮ್ಮನ್ನ ಮತ್ತೆ ಬೆಳ್ಳಿತೆರೆಯಲ್ಲಿ ನೋಡುವ ಆಸೆ ಇದೆ' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಮ್ಯಾ ''After 2019'' ಅಂತ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಗಾಂಧಿನಗರದಲ್ಲಿ ಮತ್ತೆ 'ಪದ್ಮಾವತಿ' ಪ್ರತ್ಯಕ್ಷ: ಪುನೀತ್ ಜೊತೆಗೆ ರಮ್ಯಾ ನಟನೆ! ಗಾಂಧಿನಗರದಲ್ಲಿ ಮತ್ತೆ 'ಪದ್ಮಾವತಿ' ಪ್ರತ್ಯಕ್ಷ: ಪುನೀತ್ ಜೊತೆಗೆ ರಮ್ಯಾ ನಟನೆ!

  2019ರ ನಂತರ ಯಾಕೆ.?

  2019ರ ನಂತರ ಯಾಕೆ.?

  ಇನ್ನು 2019ರ ನಂತರವೇ ಯಾಕೆ ರಮ್ಯಾ ಇಂಡಸ್ಟ್ರಿಗೆ ವಾಪಸ್ ಆಗ್ತಾರೆ ಎಂದು ಯೋಚನೆ ಮಾಡೋದಾದರೇ, 2019ರಲ್ಲಿ ಲೋಕಸಭೆ ಚುನಾವಣೆ ಇದೆ. ಈ ಚುನಾವಣೆಯಲ್ಲು ರಮ್ಯಾ ಅವರು ಸ್ಪರ್ಧೆ ಮಾಡಬಹುದು. ಈ ಚುನಾವಣೆಯ ಬಳಿಕ ತಮ್ಮ ಮುಂದಿನ ಭವಿಷ್ಯ ನಿರ್ಧಾರವಾಗಬಹುದು. ಹೀಗಾಗಿ, ಮುಂದಿನ ವರ್ಷವನ್ನ ಆಯ್ಕೆ ಮಾಡಿಕೊಂಡಿರಬಹುದು.

  ರಕ್ಷಿತ್ ಶೆಟ್ಟಿಗೆ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಯಾರ ಮೇಲೆ?ರಕ್ಷಿತ್ ಶೆಟ್ಟಿಗೆ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಯಾರ ಮೇಲೆ?

  ಗೆದ್ರೆ ರಾಜಕೀಯ, ಸೋತ್ರೆ ಸಿನಿಮಾ.?

  ಗೆದ್ರೆ ರಾಜಕೀಯ, ಸೋತ್ರೆ ಸಿನಿಮಾ.?

  ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ರಮ್ಯಾ ಗೆದ್ದರೇ ದೆಹಲಿಗೆ ತೆರಳಿ ಸಂಪೂರ್ಣ ರಾಜಕೀಯ ಮಾಡಬಹುದು. ಬಟ್, ಸೋತ್ರೆ ಕರ್ನಾಟಕದಲ್ಲೇ ಉಳಿದುಕೊಂಡು ಸಿನಿಮಾರಂಗಕ್ಕೆ ವಾಪಸ್ ಆಗಬಹುದು. ಇವರೆಡರಲ್ಲಿ ಏನಾಗಬಹುದು ಎಂದು ತಿಳಿಯಲು 2019ರಲ್ಲೇ ನೋಡಬೇಕು.

  ಊರು ಬಿಟ್ಟು ಹೊರಟ ರಮ್ಯಾ ಎಲ್ಲಿಗೆ? ಯಾಕೆ?

  ರಮ್ಯಾ ಕೊನೆಯ ಸಿನಿಮಾ

  ರಮ್ಯಾ ಕೊನೆಯ ಸಿನಿಮಾ

  2014ರಲ್ಲಿ ತೆರೆಕಂಡಿದ್ದ ಆರ್ಯನ್ ಸಿನಿಮಾದಲ್ಲಿ ರಮ್ಯಾ ಅಭಿನಯಿಸಿದ್ದರು. ಅದಾದ ಬಳಿಕ ವಿಷ್ಣುವರ್ಧನ್ ಅವರ 201ನೇ ಸಿನಿಮಾ ಎಂದೇ ಗುರುತಿಸಿಕೊಂಡಿದ್ದ 'ನಾಗಾರಹಾವು' ಸಿನಿಮಾದಲ್ಲೂ ರಮ್ಯಾ ಅಭಿನಯಿಸಿದ್ದರು. ನಂತರ ಯಾವ ಚಿತ್ರದಲ್ಲೂ ಮೋಹಕತಾರೆ ಅಭಿನಯಿಸಲೇ ಇಲ್ಲ.

  'ದಿಲ್ ಕಾ ರಾಜ' ನಿಂತು ಹೋಗಿದೆ

  'ದಿಲ್ ಕಾ ರಾಜ' ನಿಂತು ಹೋಗಿದೆ

  ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದ ದಿಲ್ ಕಾ ರಾಜ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ಕಾರಣಾಂತರಗಳಿಂದ ಈ ಸಿನಿಮಾವನ್ನ ಅರ್ಧಕ್ಕೆ ಬಿಟ್ಟಿದ್ದರು. ಅಲ್ಲಿಗೆ ದಿಲ್ ಕಾ ರಾಜ ನಿಂತು ಹೋಗಿದೆ. ರಮ್ಯಾ ಕಂಬ್ಯಾಕ್ ನಿಂದ ಮತ್ತೆ ಶುರುವಾಗುವ ನಿರೀಕ್ಷೆಯಲ್ಲಿದ್ದ ಚಿತ್ರತಂಡ ಆಮೇಲೆ ಸೈಲೆಂಟ್ ಆಗಿದೆ.

  ಮತ್ತೆ ಬಂದ್ರು ರಮ್ಯಾ ನಿಟ್ಟುಸಿರು ಬಿಟ್ಟ 'ದಿಲ್ KA ರಾಜಾ'ಮತ್ತೆ ಬಂದ್ರು ರಮ್ಯಾ ನಿಟ್ಟುಸಿರು ಬಿಟ್ಟ 'ದಿಲ್ KA ರಾಜಾ'

  English summary
  Actress-turned-politician Ramya, who has stayed away from acting, might be comeback in 2019 after lok sabha election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X