»   » ಕೆಲವೇ ದಿನಗಳಲ್ಲಿ ರಮ್ಯಾ ಕೊಡಲಿದ್ದಾರಂತೆ ಸಿಹಿ ಸುದ್ದಿ

ಕೆಲವೇ ದಿನಗಳಲ್ಲಿ ರಮ್ಯಾ ಕೊಡಲಿದ್ದಾರಂತೆ ಸಿಹಿ ಸುದ್ದಿ

By: ಉದಯರವಿ
Subscribe to Filmibeat Kannada
ಗೋಲ್ಡನ್ ಗರ್ಲ್ ರಮ್ಯಾ ಅವರು ಸಿಹಿ ಸುದ್ದಿ ಕೊಡಲು ಕಾತುರರಾಗಿದ್ದಾರೆ. ಅವರ ಅಭಿಮಾನಿಗಳು ಆ ಸುದ್ದಿಯನ್ನು ಕೇಳಲು ಅಷ್ಟೇ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ. ಅವರೇನಾದರೂ ಈ ವರ್ಷ ಮದುವೆಯಾಗುತ್ತೇನೆ ಎಂದು ಘೋಷಿಸಿಲಿದ್ದಾರೆಯೇ ಎಂಬ ಮಾತುಗಳು ಕಿವಿಗೆ ಬೀಳುತ್ತಿವೆ.

ಆದರೆ ರಮ್ಯಾ ಮಾತ್ರ ಅದರ ಬಗ್ಗೆ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. "I have some exciting news to share with you all ...in a few days :)" ಎಂದಷ್ಟೇ ಟ್ವೀಟಿಸಿ ಕುತೂಹಲ ಕೆರಳಿಸಿದ್ದಾರೆ.

ರಮ್ಯಾ ಅವರು ಇನ್ನೇನು ಸುದ್ದಿ ಕೊಡುತ್ತಾರೋ ಎಂದು ತಲೆಗೆ ಹುಳ ಬಿಟ್ಟುಕೊಂಡಿರುವ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತು ನಿರೀಕ್ಷಿಸುವಂತಾಗಿದೆ. ರಮ್ಯಾ ಅವರು ಯಾವುದೇ ಗುಟ್ಟನ್ನು ಅಷ್ಟು ಬೇಗ ಬಿಟ್ಟುಕೊಡುವವರಲ್ಲ ಬಿಡಿ.

ಅವರು ಇತ್ತೀಚೆಗೆ ರಾಜ್ ಮ್ಯೂಸಿಕ್ ಚಾನಲ್ ನಲ್ಲಿ ಮಾತನಾಡುತ್ತಾ ಬಾಯ್ ಫ್ರೆಂಡ್ ಗೆ ಟೂ ಬಿಟ್ರಂತೆ ಹೌದಾ ಎಂದು ಕೇಳಿದ್ದಕ್ಕೆ ಅಯ್ಯೋ ಯಾರು ಈ ರೀತಿ ಸುದ್ದಿ ಹಬ್ಬಿಸುತ್ತಾರೋ ಏನೋ ಗೊತ್ತಿಲ್ಲ. ತನ್ನ ಬಾಯ್ ಫ್ರೆಂಡ್ ಜೊತೆ ಹಾಯಾಗಿ ಇದ್ದೇನೆ ಎಂದಿದ್ದರು. ಮದುವೆ ಬಗ್ಗೆ ಸಂದರ್ಭ ಬಂದಾಗ ಹೇಳುತ್ತೇನೆ ಎಂದಿದ್ದರು.

ಕಳೆದ ಕೆಲ ವರ್ಷಗಳಿಂದ ರಮ್ಯಾ ತನ್ನ ಬಾಯ್ ಫ್ರೆಂಡ್ ರಾಫೆಲ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಆದರೆ ಸಂಕೋಚ ಸ್ವಭಾವದ ರಾಫೆಲ್ ಮಾಧ್ಯಮಗಳ ಮುಂದೆ ಪದೇ ಪದೇ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡು ಇಲ್ಲಸಲ್ಲದ ಸುದ್ದಿ ಹಬ್ಬಿಸುವುದನ್ನು ಬಿಡಬೇಕು ಎಂಬುದು ರಮ್ಯಾ ಅವರ ಹಿತವಚನ.

English summary
Golden Girl Ramya all set to give exiting news to her fans. She tweets, "I have some exciting news to share with you all ...in a few days :)...any idea what news she will giving.
Please Wait while comments are loading...