For Quick Alerts
  ALLOW NOTIFICATIONS  
  For Daily Alerts

  ಮಾಂಸಾಹಾರ ತ್ಯಜಿಸಿದ ನಟಿ ರಮ್ಯಾ: ಕಾರಣವೇನು?

  |

  ಸ್ಯಾಂಡಲ್ ವುಡ್ ನ ಮೋಹಕತಾರೆ, ರಾಜಕಾರಣಿ ನಟಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಸುಮಾರು ಒಂದು ವರ್ಷದಿಂದ ಅಭಿಮಾನಿಗಳಿಂದ, ಸಾಮಾಜಿಕ ಜಾಲತಾಣದಿಂದ ಮಾಯವಾಗಿದ್ದ ರಮ್ಯಾ ಇದೀಗ ಮತ್ತೆ ಸಕ್ರೀಯರಾಗಿದ್ದಾರೆ.

  ಸದಾ ಒಂದಲ್ಲೊಂದು ಪೋಸ್ಟ್ ಗಳನ್ನು ರಮ್ಯಾ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ರಮ್ಯಾ ಕಡೆಯಿಂದ ಬಂದ ಮಾಹಿತಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹೌದು, ರಮ್ಯಾ ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿರುವುದಾಗಿ ಹೇಳಿದ್ದಾರೆ. ಇತ್ತೀಚಿಗೆ ಅನೇಕ ನಟಿಯರು ಮಾಂಸಾಹಾರ ತ್ಯಜಿಸಿದ್ದಾರೆ. ಸಸ್ಯಹಾರಿ ಆಗಿರುವ ಬಗ್ಗೆ ರಮ್ಯಾ ಬಹಿರಂಗ ಪಡಿಸಿದ್ದಾರೆ. ಮಾಂಸಾಹಾರ ತ್ಯಜಿಸುವುದು ಸುಲಭವಲ್ಲ ಆದರೂ ನಾನು ತ್ಯಜಿಸಿದ್ದೇನೆ ಎಂದು ಹೇಳಿದ್ದಾರೆ.

  ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ನೀಡಿದ ನಟಿ ರಮ್ಯಾಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ನೀಡಿದ ನಟಿ ರಮ್ಯಾ

  ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಿದು

  ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಿದು

  ಮಾಂಸಾಹಾರ ತ್ಯಜಿಸಿರುವ ಬಗ್ಗೆ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 'ಈ ವರ್ಷದ ಆರಂಭದಲ್ಲಿ ನಾನು ಸಸ್ಯಹಾರಿಯಾಗಿ ಮಾರ್ಪಟ್ಟಿದ್ದೇನೆ. ಮತ್ತು ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಅನೇಕ ಕಾರಣಗಳಿಗಾಗಿ ನಿಮ್ಮ ದೇಹಕ್ಕೆ ಪ್ರೋಟೀನ್ ಬೇಕು. ಆದರೆ ನಾನು ಮಾಂಸಾಹಾರವಿಲ್ಲದೆ ಚೆನ್ನಾಗಿ ಇರುತ್ತೇನೆ.' ಎಂದಿದ್ದಾರೆ.

  ಐಸ್ ಕ್ರೀಮ್ ತುಂಬಾ ಇಷ್ಟ ಪಡುತ್ತೇನೆ

  ಐಸ್ ಕ್ರೀಮ್ ತುಂಬಾ ಇಷ್ಟ ಪಡುತ್ತೇನೆ

  'ನಾನು ಸಸ್ಯಹಾರದ ಬಗ್ಗೆ ಆಲೋಚಿಸುತ್ತೇನೆ. ಇದು ಕಷ್ಟ ಎನ್ನುವುದು ಗೊತ್ತು. ನಾನು ತುಂಬಾ ಇಷ್ಟ ಪಡುವ ಐಸ್ ಕ್ರೀಮ್ ಸೇರಿದಂತೆ ಬೇರೆ ಪರ್ಯಾಯಗಳಿವೆ ಎಂದು ನನಗೆ ತಿಳಿದಿದೆ. ನಾನು ನನ್ನ ಮನಸ್ಸನ್ನು ರೂಪಿಸಿಕೊಳ್ಳಬೇಕು.' ಎಂದು ಬರೆದುಕೊಂಡಿದ್ದಾರೆ. ಸ್ನೇಹಿತರ ಜೊತೆ ಹೋಟೆಲ್ ನಲ್ಲಿ ಕುಳಿತಿರುವ ಒಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  ಅಭಿಮಾನಿಗಳ ಮೆಚ್ಚುಗೆ

  ಅಭಿಮಾನಿಗಳ ಮೆಚ್ಚುಗೆ

  ರಮ್ಯಾ ನಿರ್ಧಾರಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೈತ ದಿನಾಚರಣೆಯ ಅಂಗವಾಗಿ ರಮ್ಯಾ ಮಧ್ಯಾಹ್ನದ ಊಟ ತ್ಯಜಿಸಿ ರೈತರಿಗೆ ಬೆಂಬಲ ಸೂಚಿಸಿದ್ದು. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ಮೋಹಕತಾರೆ 'ಕಿಸಾನ್ ದಿವಸ್ ಆದ ಇಂದು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಮಧ್ಯಾಹ್ನದ ಊಟ ತ್ಯಜಿಸಿದ್ದೇನೆ' ಎಂದು ತಿಳಿಸಿದ್ದರು.

  ಬಾಯ್ ಫ್ರೆಂಡ್ ಜೊತೆ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ ಗೊಗ್ಲಿ ಬೆಡಗಿ | Filmibeat Kannada

  ಮತ್ತೆ ಬಣ್ಣದ ಲೋಕಕ್ಕೆ ಬರ್ತಾರಾ?

  ರಮ್ಯಾ ಸದ್ಯ ಸಿನಿಮಾ ಮತ್ತು ರಾಜಕೀಯ ಎರಡರಿಂದನೂ ದೂರ ಸರಿದಿದ್ದಾರೆ. ಮತ್ತೆ ಸಿನಿಮಾರಂಗಕ್ಕೆ ವಾಪಸ್ ಆಗುತ್ತಾರೆ ಎನ್ನುವ ಮಾತುಗಳು ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ರಮ್ಯಾ ಬಣ್ಣ ಹಚ್ಚಲಿ, ಸಿನಿಮಾದಲ್ಲಿ ಮಿಂಚಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Actress Ramya turns vegetarian. She said it's the best decision I've made.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X