ಢವಢವ, ಪುಕಪುಕ ; ರಮ್ಯಾಗೆ ಅಶ್ಲೀಲ ಸಂದೇಶ, 3 ಜನರನ್ನು ಬಂಧಿಸಿದ ಸೈಬರ್ ಪೊಲೀಸರು
ಫೇಸ್‌ಬುಕ್.. ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣು ಮಕ್ಕಳಿಗಾಗುತ್ತಿರುವ ಹಿಂಸೆಗಳು ಒಂದೆರಡಲ್ಲ. ಹೆಸರೇ ಗೊತ್ತಾಗದಂತೆ ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡುವ ಅನೇಕರು ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಕಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಪ್ರೊಫೈಲ್ ಫೋಟೊಗಳನ್ನೂ ಬೇರೆ ಯಾವದ್ದೋ ಖಾತೆಯಲ್ಲಿ ಹಂಚಿಕೊಂಡು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತು ಅನೇಕರು ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಮಾಡಿದರು ಕೂಡ ಇದಕ್ಕೆಲ್ಲ ಕಡಿವಾಣ ಹಾಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.
ಹೀಗಿರುವಾಗ ಈ ಡಿಜಿಟಲ್ ವಿಕೃತರ ವಿರುದ್ಧ ಕನ್ನಡ ಚಿತ್ರರಂಗದ ಮೋಹಕತಾರೆ ರಮ್ಯಾ ಸಮರ ಸಾರಿದ್ದು ಸದ್ಯ ಸೈಬರ್ ಕ್ರೈಂ ಪೊಲೀಸರು ಮೂವರು ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ''ಪಬ್ಲಿಕ್ ಟಿವಿ'' ವರದಿಯನ್ನು ಮಾಡಿದೆ.

ಹೌದು, ರಮ್ಯಾ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಶುರುವಾದ ಸಮರ ಎಲ್ಲರಿಗೆ ಗೊತ್ತಿರುವಂತಹದ್ದೇ. ಅಭಿಮಾನದ ಹೆಸರಿನಲ್ಲಿ ಅದೆಲ್ಲೋ ಕುಳಿತುಕೊಂಡು ರಮ್ಯಾ ಅವರಿಗೆ ಹಲವಾರು ಜನ ತೀರಾ ಅಸಹ್ಯ.. ಅಸಭ್ಯ.. ಅಶ್ಲೀಲ.. ಸಂದೇಶಗಳನ್ನು ಕಳುಹಿಸಿದ್ದರು.
ತಮ್ಮ ಮೇಲೆ ನಡೆದ ಈ ಸೈಬರ್ ದಾಳಿಯಿಂದ ಹೈರಾಣಾದ ರಮ್ಯಾ, ಆ ನಂತರ ಸೀದಾ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ತಮ್ಮ ದೂರಿನಲ್ಲಿ 43 ಅಕೌಂಟ್‍ಗಳ ಹೆಸರು ಉಲ್ಲೇಖಿಸಿದ್ದರು. ಪೊಲೀಸರ ಮುಂದೆ ಹೇಳಿಕೆ ನೀಡುವ ಸಮಯದಲ್ಲಿ ಮತ್ತೆ ಐದು ಅಕೌಂಟ್‍ಗಳನ್ನು ಸೇರಿಸಿ ಒಟ್ಟು 48 ಅಕೌಂಟ್‍ಗಳ ವಿರುದ್ದ ತಮ್ಮ ದೂರನ್ನು ರಮ್ಯಾ ದಾಖಲಿಸಿದ್ದರು.
ರಮ್ಯಾ ದೂರು ನೀಡುತ್ತಿದ್ದಂತೆಯೇ ನಡುಗಿದ ಹಲವರು, ತಮ್ಮ ಅಕೌಂಟ್‌ಗಳನ್ನು ಡಿಲೀಟ್ ಮಾಡಿದ್ದರು. ಆದರೆ ಅಷ್ಟರಲ್ಲಿ ಪೊಲೀಸರು ಐಪಿ ಅಡ್ರೆಸ್‌ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಈಗ ''ಕೋಲಾರ'' ಮತ್ತು ''ಚಿತ್ರದುರ್ಗ'' ಮೂಲದ ಮೂವರು ವ್ಯಕ್ತಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ ಎಂದು ''ಪಬ್ಲಿಕ್ ಟಿವಿ'' ವರದಿಯನ್ನು ಮಾಡಿದೆ.
ಮುಂದೆ ಓದಿ
* ಅಶ್ಲೀಲ ಸಂದೇಶ, ಮೂವರ ಬಂಧನ, ಉಳಿದವರಿಗೆ ಶುರುವಾಗಿದೆ ನಡುಕ
* ಅತ್ಯಾಚಾರ, ಜೀವ ಬೆದರಿಕೆ ಹಾಕಿದವರಿಗೆ ಢವಢವ ಪುಕಪುಕ
* ಬಂಧನಕ್ಕೊಳಗಾದ ಮೂವರು ದರ್ಶನ್ ಅಭಿಮಾನಿಗಳಾ ?
* ರಮ್ಯಾಗೆ ಸಿಕ್ಕಿದೆ ಅಪಾರವಾದ ಬೆಂಬಲ
ಇನ್ನು ಮೂವರನ್ನು ಸೈಬರ್ ಪೊಲೀಸರು ಬಂಧಿಸಿದ ಬೆನ್ನಲ್ಲೇ, ಬಾಕಿ ಉಳಿದ 45 ಜನರಿಗೆ ನಡುಕ ಶುರುವಾಗಿದ್ದರು ಆಗಿರಬಹುದು. ಯಾಕೆಂದರೆ ಈ ಪ್ರಕರಣವನ್ನು ಸಿಸಿಬಿ ಸೈಬರ್ ಪೊಲೀಸರು ಗಂಭೀರವಾಗಿ ಪರಗಣಿಸಿದ್ದಾರೆ. ತ್ವರಿತಗತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಕೋರ್ಟ್ ಅಲೆಯುವ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿಯೇ ಈಗ ರಮ್ಯಾಗೆ ಅತ್ಯಾಚಾರ.. ಜೀವ ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ್ದ, ಅಶ್ಲೀಲವಾದ ಮೆಸೇಜ್‌ಗಳನ್ನು ಮಾಡಿದವರ ಉಳಿದವರ ಕಥೆ ಏನಾಗಲಿದೆ ಎಂದು ನೋಡಬೇಕಿದೆ.
ಅಂದ್ಹಾಗೇ ರಮ್ಯಾ ಸೈಬರ್ ಕ್ರೈಂನ ಮೊರೆ ಹೋದ ನಂತರ, ಅಶ್ಲೀಲವಾದ ಸಂದೇಶಗಳನ್ನು ಕಳುಹಿಸಿದ್ದು ದರ್ಶನ್ ಅವರ ನಿಜವಾದ ಅಪ್ಪಟ ಅಭಿಮಾನಿಗಳೇ ಎನ್ನುವುದಕ್ಕೆ ಏನು ಸಾಕ್ಷಿ ಎಂಬ ಪ್ರಶ್ನೆಯನ್ನು ಅನೇಕರು ಮಾಡಿದ್ದರು. ದರ್ಶನ್ ಫೋಟೊ ಹಾಕಿಕೊಂಡ ಮಾತ್ರಕ್ಕೆ ಅವರನ್ನು ಅಭಿಮಾನಿ ಎನ್ನಲು ಸಾಧ್ಯ ಇಲ್ಲ ಎಂದು ವಾದ ಮಾಡಿದ್ದರು. ಸದ್ಯ ಈ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಒಂದು ವೇಳೆ ಪೊಲೀಸರು ಬಂಧನಕ್ಕೊಳಗಾದವರ ಮಾಹಿತಿಯನ್ನು ಹಂಚಿಕೊಂಡರೆ ಆಗ ಬಂಧನಕ್ಕೊಳಗಾದ ಮೂವರು ಯಾರ ಅಭಿಮಾನಿಗಳು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕರೂ ಸಿಗಬಹುದು.
ಇನ್ನುಳಿದಂತೆ ಈ ವಿಚಾರದಲ್ಲಿ ರಮ್ಯಾಗೆ ಜನರಿಂದ ಮತ್ತು ಚಿತ್ರರಂಗದಿಂದ ಅಪಾರವಾದ ಬೆಂಬಲ ಸಿಕ್ಕಿದೆ. ರಾಕ್‌ಲೈನ್ ವೆಂಕಟೇಶ್, ಧ್ರುವಾ ಸರ್ಜಾ, ಲೂಸ್ ಮಾದ ಯೋಗಿ, ವಿನಯ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಹೀಗೆ ಹಲವರು ರಮ್ಯಾ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮತ್ತು ಕಳುಹಿಸುವವರ ವಿರುದ್ಧ ಕಿಡಿಯನ್ನು ಕಾರಿದ್ದಾರೆ.


Click it and Unblock the Notifications











