For Quick Alerts
  ALLOW NOTIFICATIONS  
  For Daily Alerts

  ಕೊನೆಯ ಕನ್ನಡ ಸಿನಿಮಾ ನೋಡಿದ ಬಗ್ಗೆ ರಮ್ಯಾ ಹೇಳಿದ್ದೇನು? ಮೋಹಕ ತಾರೆ ಲಿಸ್ಟ್ ನಲ್ಲಿರುವ ಸಿನಿಮಾಗಳಿವು

  |

  ಸ್ಯಾಂಡಲ್ ವುಡ್ ನ ಮೋಹಕತಾರೆ ರಮ್ಯಾ ಸದ್ಯ ಸಿನಿಮಾರಂಗದಿಂದ ದೂರ ಉಳಿದ್ದಾರೆ. ರಾಜಕೀಯ ಪ್ರವೇಶ ಮಾಡಿದ ಬಳಿಕ ರಮ್ಯಾ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಸಿನಿಮಾದಿಂದ ದೂರ ಸರಿದ ರಮ್ಯಾ, ಸದ್ಯ ರಾಜಕೀಯದಲ್ಲೂ ಸಕ್ರೀಯರಾಗಿಲ್ಲ.

  ಸಾಮಾಜಿಕ ಜಾಲತಾಣದಿಂದನೂ ದೂರ ಆಗಿದ್ದ ರಮ್ಯಾ ಇತ್ತೀಚಿಗಷ್ಟೆ ವಾಪಸ್ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ರಮ್ಯಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅಲ್ಲದೆ ಕನ್ನಡ ಕಲಾವಿದರು ಹಾಕುವ ಪೋಸ್ಟ್ ಗಳಿಗೆ ರಮ್ಯಾ ಕಾಮೆಂಟ್ ಸಹ ಮಾಡುತ್ತಿರುತ್ತಾರೆ. ರಮ್ಯಾ ಮತ್ತೆ ಕನ್ನಡ ಸಿನಿಮಾರಂಗಕ್ಕೆ ವಾಪಸ್ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಮುಂದೆ ಓದಿ...

  ಬೆನ್ನುಮೂಳೆ ಇಲ್ಲದ ಬಾಲಿವುಡ್ ಎಂದ ನಟಿ ರಮ್ಯಾಬೆನ್ನುಮೂಳೆ ಇಲ್ಲದ ಬಾಲಿವುಡ್ ಎಂದ ನಟಿ ರಮ್ಯಾ

  ರಮ್ಯಾ ನೋಡಿದ ಕೊನೆಯ ಕನ್ನಡ ಸಿನಿಮಾ

  ರಮ್ಯಾ ನೋಡಿದ ಕೊನೆಯ ಕನ್ನಡ ಸಿನಿಮಾ

  ಕರ್ನಾಟಕದಿಂದ, ಕನ್ನಡ ಅಭಿಮಾನಿಗಳಿಂದ ಬಹು ದೂರ ಸಾಗಿರುವ ರಮ್ಯಾ ಮತ್ತೆ ಬಣ್ಣ ಹಚ್ಚಲಿ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ. ಇದೀಗ ರಮ್ಯಾ ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಕೊನೆಯದಾಗಿ ನೋಡಿದ ಕನ್ನಡ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  ಗಂಟುಮೂಟೆ ನೋಡಿ ಎಂದ ರಮ್ಯಾ

  ಗಂಟುಮೂಟೆ ನೋಡಿ ಎಂದ ರಮ್ಯಾ

  ಅಂದಹಾಗೆ ರಮ್ಯಾ ಕೊನೆಯದಾಗಿ ನೋಡಿದ ಕನ್ನಡ ಸಿನಿಮಾ 'ಗಂಟುಮೂಟೆ'. ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, 'ನಾನು ಕೊನೆಯದಾಗಿ ನೋಡಿದ ಕನ್ನಡ ಸಿನಿಮಾ ಗಂಟುಮೂಟೆ. ತುಂಬಾ ಇಷ್ಟ ಪಟ್ಟೆ' ಎಂದು ಹೇಳಿದ್ದಾರೆ. ಜೊತೆಗೆ ಮಲಯಾಳಂ ಸಿನಿಮಾದ ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ಸಿನಿಮಾಗಳನ್ನು ದಯವಿಟ್ಟು ನೋಡಿ ಎಂದು ಹೇಳಿದ್ದಾರೆ.

  ರಮ್ಯಾ ಲಿಸ್ಟ್ ನಲ್ಲಿರುವ ಸಿನಿಮಾಗಳಿವು

  ರಮ್ಯಾ ಲಿಸ್ಟ್ ನಲ್ಲಿರುವ ಸಿನಿಮಾಗಳಿವು

  ಇನ್ನು ಬೇರೆ ಸಿನಿಮಾವನ್ನು ನೋಡಲು ಸಿನಿಮಾ ಹೆಸರುಗಳನ್ನು ಸೂಚಿಸಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಅಭಿಮಾನಿಗಳು ಅನೇಕ ಸಿನಿಮಾಗಳನ್ನು ಸೂಚಿಸಿದ್ದಾರೆ. ಸಿನಿಮಾ ಹೆಸರು ಸೂಚಿಸಿದ ಅಭಿಮಾನಿಗಳಿಗೆ ರಮ್ಯಾ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ಲಿಸ್ಟ ನಲ್ಲಿ ಈಗ ನೋಡಲು ಇರುವ ಸಿನಿಮಾಗಳೆಂದರೆ, ಲವ್ ಮಾಕ್ ಟೇಲ್, ದಿಯಾ, ಭೀಮಸೇನ ನಳಮಹಾರಾಜ, ಕವಲುದಾರಿ, ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾಗಳಿವೆ.

  ದಿಶಾ ರವಿ ಬೆಂಬಲಕ್ಕೆ ನಿಂತ ರಮ್ಯಾ: ಆಕೆ ಮುಗ್ದೆ, ರೈತರ ಪರ ಹೋರಾಡುವುದು ಕ್ರೈಂ ಅಲ್ಲ ಎಂದ ನಟಿದಿಶಾ ರವಿ ಬೆಂಬಲಕ್ಕೆ ನಿಂತ ರಮ್ಯಾ: ಆಕೆ ಮುಗ್ದೆ, ರೈತರ ಪರ ಹೋರಾಡುವುದು ಕ್ರೈಂ ಅಲ್ಲ ಎಂದ ನಟಿ

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada
  ನೋಡಿದ ವೆಬ್ ಸೀರಿಸ್ ಬಗ್ಗೆ ಹೇಳುವೆ- ರಮ್ಯಾ

  ನೋಡಿದ ವೆಬ್ ಸೀರಿಸ್ ಬಗ್ಗೆ ಹೇಳುವೆ- ರಮ್ಯಾ

  ತಾವು ನೋಡಬೇಕಾಗಿರುವ ಕನ್ನಡ ಸಿನಿಮಾಗಳ ಲಿಸ್ಟ್ ಅನ್ನು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ನೋಡಿದ ವೆಬ್ ಸೀರಿಸ್ ಬಗ್ಗೆ ಹೇಳುವುದಾಗಿಯೂ ಹೇಳಿದ್ದಾರೆ.

  English summary
  Actress Ramya watched last kannada film Gantumoote and She loves it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X