ರಮ್ಯಾ 43ನೇ ಹುಟ್ಟುಹಬ್ಬ ; ಮೋಹಕತಾರೆಯ ಬರ್ತ್‌ಡೇ ಸಂಭ್ರಮದಲ್ಲಿ ಭಾಗಿಯಾದ ವಿನಯ್ ರಾಜ್ ಕುಮಾರ್- ಫೋಟೊ ವೈರಲ್

ಹಿಂದೆ ಒಂದು ಕಾಲ ಇತ್ತು. ಚಿಕ್ಕ ಮಕ್ಕಳು ಕೂಡ ತಮ್ಮ ನೆಚ್ಚಿನ ನಟಿ ರಮ್ಯಾ ಎಂದು ಹೇಳುವ ಕಾಲ ಅದು. ಗ್ಲ್ಯಾಮರ್ ಹಾಗೂ ಗ್ರಾಮರ್ ನಿಂದ ಅಭಿಮಾನಿ ಬಳಗವನ್ನು ಹಾಗೂ ಭಗ್ನ ಪ್ರೇಮಿಗಳನ್ನು ಒಮ್ಮಿಂದೊಮ್ಮೆಲೆ ಸೃಷ್ಟಿಸಿಕೊಂಡಿದ್ದ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಮೋಹಕತಾರೆ, ಸ್ಯಾಂಡಲ್‌ವುಡ್ ಕ್ವೀನ್ ಎಂಬ ಪಟ್ಟಗಳನ್ನು ಅಲಂಕರಿಸಿದಾಗ್ಲೇ ರಾಷ್ಟ್ರ ರಾಜಕಾರಣದಲ್ಲಿ ಕಳೆದು ಹೋದರು.

ಇಷ್ಟೇ ಅಲ್ಲ ಸಕಾರಾತ್ಮಕವಾಗಿ.. ನಕಾರಾತ್ಮಕವಾಗಿ.. ಕಾಲೆಳೆಸಿಕೊಂಡ.. ಉಗಿಸಿಕೊಂಡ .. ಏಕೈಕ ಗಟ್ಟಿಗಿತ್ತಿ ಎಂಬ ಹೆಗ್ಗಳಿಕೆಗೂ ಕೂಡ ರಾಷ್ಟ್ರ ರಾಜಕಾರಣದಲ್ಲಿ ಕನ್ನಡ ಚಿತ್ರರಂಗದ ಈ ಗೋಲ್ಡನ್ ಗರ್ಲ್ ಪಾತ್ರರಾದರು. ಇಂಥಾ ರಮ್ಯಾ ನಿನ್ನೆ ( ನವೆಂಬರ್ 29 ) 43ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ.

Ramya s Glamorous 43rd Birthday Bash Vinay Rajkumar and Friends Light Up the Star-Studded Birthday

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಸ್ಟಾರ್‌ಗಳ ಬರ್ತ್‌ಡೇ ಅಂದರೆ ರಂಗು ರಂಗಾಗಿರುತ್ತೆ. ತಮ್ಮ ಆಪ್ತರು.. ಅತ್ಯಾಪ್ತರು.. ಸ್ನೇಹಿತರು.. ಹೀಗೆ ಎಲ್ಲರ ಜೊತೆ ನಗು ನಗುತ್ತಾ ಕಾಲ ಕಳೆಯಲು.. ರಾತ್ರಿಯಿಡೀ ಹರಟೆ ಹೊಡೆಯಲು ವೇದಿಕೆ ಸಿದ್ಧವಾಗಿರುತ್ತೆ. ಹೀಗಿದ್ದಾಗ ರಮ್ಯಾ ಬರ್ತ್‌ಡೇ ಪ್ರಯುಕ್ತ ತಾರೆಗಳ ಸಮಾಗಮ ಆಗದಿರಲು ಹೇಗೆ ಸಾಧ್ಯ..? ಸಂಭ್ರಮ ಮುಗಿಲು ಮುಟ್ಟದಿರಲು ಹೇಗೆ ಸಾಧ್ಯ..?

ಇದಕ್ಕೆ ಕೈಗನ್ನಡಿ ಎಂಬಂತೆ ರಮ್ಯಾ ತಮ್ಮ ಬರ್ತ್‌ಡೇಯನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಸ್ನೇಹಿತರ ಜೊತೆ ಕೇಕ್ ಕಟ್ ಮಾಡಿ ಕೇಕೆ ಹಾಕಿದ್ದಾರೆ.ವಿಶೇಷ ಅಂದರೆ ರಮ್ಯಾ ಅವರ ಈ ಸಂಭ್ರಮದಲ್ಲಿ ದೊಡ್ಮನೆಯ ಕುಡಿ ವಿನಯ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದಾರೆ. ರಮ್ಯಾ ಅವರ ಸಂಭ್ರಮವನ್ನು ಇನ್ನೂ ಹೆಚ್ಚಿಸಿದ್ದಾರೆ.

ಹಾಗಂಥ, ಇಲ್ಲದಿರುವುದನ್ನು ಯೋಚನೆ ಮಾಡುವ ಅವಶ್ಯಕತೆ ಇಲ್ಲ. ರಮ್ಯಾ ಮತ್ತು ವಿನಯ್ ರಾಜ್ ಕುಮಾರ್ ಸಂಬಂಧದ ಕುರಿತು ಹೆಚ್ಚೇನು ಮಾತನಾಡುವ ಪ್ರಮೇಯ ಕೂಡ ಇಲ್ಲ. ಯಾಕೆಂದರೆ.. ವಿನಯ್ ರಾಜ್ ಕುಮಾರ್ ಮತ್ತು ತಮ್ಮ ಸಂಬಂಧದ ಕುರಿತು ರಮ್ಯಾ ತುಂಬಾ ಹಿಂದೆಯೇ ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಹಿಂದೆ ಮಾತನಾಡಿದ್ದ ರಮ್ಯಾ, ವಿನಯ್ ರಾಜ್ ಕುಮಾರ್ ನನ್ನ ಸಹೋದರನಿದ್ದಂತೆ. ಸುಖಾಸುಮ್ಮನೆ ಏನೇನೋ ಊಹಿಸಿಕೊಳ್ಳಬೇಡಿ ಎಂದು ಹೇಳಿದ್ದರು. ನನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಇಷ್ಟವಾದದ್ದನ್ನು ಪೋಸ್ಟ್ ಮಾಡಲು ನನಗೆ ಸ್ವಾತಂತ್ರ್ಯವಿದೆ. ಜನರು ತಮ್ಮ ಸಣ್ಣ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಸಿದ್ಧರಿಲ್ಲ ಎಂದು ಕಿಡಿ ಕಾರಿದ್ದರು. ಒಂದು ವೇಳೆ ನಾನು ಡೇಟಿಂಗ್ ಮಾಡುತ್ತಿದ್ದರೆ, ಅಥವಾ ಮದುವೆ ಆಗುವಂತಿದ್ದರೆ ನಾನೇ ಅದನನು ಹೇಳುತ್ತೇನೆ ಎಂದು ಕೂಡ ಹೇಳಿದ್ದರು.

Ramya s Glamorous 43rd Birthday Bash Vinay Rajkumar and Friends Light Up the Star-Studded Birthday

ಆದರೂ ಕೂಡ ಕೆಲವರಿಗೆ ಇನ್ನೂ ಸಮಾಧಾನವಾಗಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ರಮ್ಯಾ ತಮ್ಮ ಬರ್ತ್‌ಡೇಯಂದು ವಿನಯ್ ರಾಜ್ ಕುಮಾರ್ ಅವರ ಜೊತೆ ಫೋಟೊ ಹಂಚಿಕೊಂಡಿದ್ದೇ ತಡ, ಹಲವರು ಮರಳಿ ಸೋಶಿಯಲ್ ಮೀಡಿಯಾಗೆ ದಾಂಗುಡಿ ಇಟ್ಟಿದ್ದಾರೆ. ಸುಖಾಸುಮ್ಮನೆ ಚರ್ಚೆ ಮಾಡುತ್ತಿದ್ದಾರೆ.

ಎಂದಿನಂತೆ ವ್ಯಕ್ತವಾಗುತ್ತಿರುವ ಈ ಅಭಿಪ್ರಾಯಗಳ ಬಗ್ಗೆ ರಮ್ಯಾ ತಲೆ ಕೆಡಿಸಿಕೊಂಡಿಲ್ಲ. ಬಹುಶಃ ತಲೆ ಕೆಡಿಸಿಕೊಳ್ಳುವುದು ಕೂಡ ಇಲ್ಲ. ಇನ್ನುಳಿದಂತೆ ರಮ್ಯಾ ಈ ಫೋಸ್ಟ್ ಹಂಚಿಕೊಂಡಿದ್ದೇ ತಡ ಹಲವರು ರಮ್ಯಾ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ದಿಯಾ ಖ್ಯಾತಿಯ ಖುಷಿ ರವಿ, ಆದಿತಿ ಪ್ರಭುದೇವ, ಅಮೃತಾ ಅಯ್ಯಂಗಾರ್.. ಹೀಗೆ ಚಿತ್ರರಂಗದ ಹಲವರು ಹ್ಯಾಪಿ ಬರ್ತ್‌ಡೇ ಮೋಹಕತಾರೆ ಎಂದು ಕಾಮೆಂಟ್ ಮಾಡುವ ಮೂಲಕ ಶುಭ ಕೋರಿದ್ದಾರೆ. ಅಭಿಮಾನಿಗಳು ತಮ್ಮ ಮನದ ಮಹಾರಾಣಿಯ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡು ಖುಷಿ ಪಡುತ್ತಿದ್ದಾರೆ. Any Ways Once Again Happy Birthday Sandalwood Queen.

More from Filmibeat

English summary
Actress Ramya celebrated her 43rd birthday in style! Get all the joyous details and heartwarming moments featuring special guest Vinay Rajkumar and her inner circle of friends
Read more about: ramya birthday filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X