ಎಲ್ಲೋ ಒಂದು ಕಡೆ ದರ್ಶನ್ ತಮ್ಮ ಜೀವನ ಹಾಳು ಮಾಡಿಕೊಂಡರು- ರಮ್ಯಾ
ಹಣೆ ಬರಹಕ್ಕೆ ಹೊಣೆ ಯಾರು? ಬಂದದ್ದನ್ನು ಅನುಭವಿಸಲೇಬೇಕು. ಎಲ್ಲಾ ವಿಧಿಲಿಖಿತ.. ನಾವೇನು ಮಾಡೋಕಾಗುತ್ತೆ? ಈ ಮಾತುಗಳಿಗೆ ಸದ್ಯ ಅತ್ಯುತ್ತಮ ಉದಾಹರಣೆ ಅಂತಿರುವ ದರ್ಶನ್ ಮತ್ತೊಮ್ಮೆ ಜೈಲು ಪಾಲಾಗಿದ್ದಾರೆ. ಈ ಬಾರಿ ಈ ವನವಾಸ ಎಷ್ಟು ದಿನಗಳವರೆಗೆ ಮುಂದುವರೆಯಲಿದೆ ಎನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ ದರ್ಶನ್ ಅವರ ಈ ಹೀನ ಸ್ಥಿತಿಯ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ.
ಸ್ವಯಂ ಕೃತ ಅಪರಾಧ.. ಸಹವಾಸ ದೋಷ.. ದರ್ಶನ್ ಅವರನ್ನು ಈ ಹಂತಕ್ಕೆ ಕರೆತಂದು ನಿಲ್ಲಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಹೀಗಿರುವಾಗ ಇದೀಗ ದರ್ಶನ್ ಬಂಧನದ ಕುರಿತು ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೌದು, ನಿನ್ನೆ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರಮ್ಯಾ ಈಗ ''ಪಬ್ಲಿಕ್ ಟಿವಿ''ಯ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ''ಪಬ್ಲಿಕ್ ಟಿವಿ''ಯ ಜೊತೆ ಮಾತನಾಡಿರುವ ರಮ್ಯಾ ನ್ಯಾಯಾಲಯ ತೀರ್ಪು ನೀಡಿದಾಗ ನನ್ನಲ್ಲಿ ಮಿಶ್ರ ಭಾವನೆ ಇತ್ತು ಎಂದು ಹೇಳಿದ್ದಾರೆ. ಒಂದು ಕಡೆ ನನಗೆ ಬೇಜಾರ್ ಆಯ್ತು ಎಂದಿದ್ದಾರೆ.
ದರ್ಶನ್ ಅವರ ಜೊತೆ ನಾನು ಕೆಲಸ ಮಾಡಿದ್ದೇನೆ, ಅವರು ನನಗೆ ಗೊತ್ತು. ಎಲ್ಲೋ ಒಂದು ಕಡೆ ನನಗೆ ಬೇಜಾರು ಏನಂದರೆ ಅವರು ಅವರ ಜೀವನ ಹಾಳು ಮಾಡಿಕೊಂಡರು. ಯಾಕೆಂದರೆ ಅವರ ಜೊತೆ ನಾನು ಸಿನಿಮಾ[ದತ್ತ] ಮಾಡುವ ಸಮಯದಲ್ಲಿ ಕೆಲ ವಿಚಾರಗಳನ್ನು ಅವರು ನನ್ನ ಜೊತೆ ಹಂಚಿಕೊಂಡಿದ್ದರು ಎಂದಿರುವ ರಮ್ಯಾ, ಅವರು ನಡೆದುಕೊಂದು ಬಂದ ದಾರಿಯನ್ನು ನೋಡಿದಾಗ ಏನು ಇಲ್ಲದವರು ಲೈಟ್ ಬಾಯ್ ಆಗಿ ಕೆಲಸ ಮಾಡುತ್ತ ಈ ಹಂತಕ್ಕೆ ಬೆಳೆದಿದ್ದಾರೆ ಎಂದು ನನಗೆ ಅವರ ಮೇಲೆ ಹೆಮ್ಮೆಯಾಗಿತ್ತು ಎಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ಅವರ ನಡುವಳಿಕೆಯಿಂದ ನನಗೆ ತುಂಬಾ ಬೇಜಾರಾಯ್ತು ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಒಳ್ಳೆಯ ದಾರಿಯಲ್ಲಿ ಕರೆದುಕೊಂಡು ಹೋಗುವುದಕ್ಕೆ ಅವರ ಅಕ್ಕ ಪಕ್ಕ ಯಾರು ಒಳ್ಳೆಯವರಿಲ್ವೋ ಏನೋ ? ಗೊತ್ತಿಲ್ಲ. ಯಾಕೆಂದರೆ ಒಂದು ಮಟ್ಟಕ್ಕೆ ಬೆಳೆದ ಮೇಲೆ, ಸೆಲೆಬ್ರೆಟಿಯಾದ ಮೇಲೆ.. ಜವಾಬ್ದಾರಿ ಇರುತ್ತೆ. ಹೀಗಾಗಿ ನಮ್ಮ ಸುತ್ತ ಮುತ್ತ ಒಳ್ಳೆಯ ಕಂಪನಿ ಇರುವುದು ತುಂಬಾ ಮುಖ್ಯ ಎಂದು ಹೇಳಿರುವ ರಮ್ಯಾ ಇನ್ನೊಂದು ಕಡೆ ಈ ತೀರ್ಪಿನಿಂದ ರಿಲೀಫ್ ಕೂಡ ಸಿಕ್ಕಿದೆ ಎಂದು ಹೇಳಿದ್ದಾರೆ.
ನಾವು ಹೋಗುತ್ತಿರುವ ಸಮಾಜ ಕೆಟ್ಟ ದಾರಿಯಲ್ಲಿ ಹೋಗುತ್ತಿದೆ ಎಂದು ನನಗೆ ಅನಿಸಿತ್ತು. ಹೆಣ್ಣು ಮಕ್ಕಳ ರಕ್ಷಣೆ ಆಗಲಿ ಅವರಿಗೆ ಕೊಡಬೇಕಾದ ಗೌರವದ ವಿಷಯದಲ್ಲಾಗಲಿ.. ನಿಮಗೆ ಗೊತ್ತು ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ನಾನು ಮಾಡಿದ ಪೋಸ್ಟ್‌ಗೆ ಎಷ್ಟು ಜನ ಟ್ರೋಲ್ ಮಾಡಿದರು, ಕೆಟ್ಟ ಕೆಟ್ಟದಾಗೆಲ್ಲಾ ಮೆಸೆಜ್ ಕಳುಹಿಸಿದರು, ಹೀಗಾಗಿ ಒಂದು ಕಡೆ ರಿಲೀಫ್ ಸಿಕ್ಕಿದೆ ಎಂದು ಹೇಳಿರುವ ರಮ್ಯಾ ನಾವು ಸೊಸೈಟಿಯಾಗಿ ಹೇಗೆ ಇರಬೇಕು.. ಒಂದು ರೂಲ್ಸ್ ಅಂತ ಇರುತ್ತೆ, ಒಂದು ರೆಗ್ಯೂಲೆಷನ್ ಅಂತ ಇರುತ್ತೆ ಅದನ್ನು ಫಾಲೋ ಮಾಡಿದರೆನೇ ಉತ್ತಮ ಸಮಾಜವಾಗುತ್ತೆ. ನಾವೇ ಕಾನೂನು ಕೈಗೆತ್ತಿಕೊಂಡರೆ ಈ ತರಹದ ಕೆಟ್ಟ ಕೆಟ್ಟ ಕೆಲಸಗಳು ಆಗುತ್ತಾವೇ ಎಂದು ಹೇಳಿದ್ದಾರೆ.
ಈ ತರಹದ ಸರಿಯಾದ ತೀರ್ಪುಗಳಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ, ನಾವೆಲ್ಲರು ಸಮಾನರು, ದೊಡ್ಡವರಾಗಲಿ ಚಿಕ್ಕವರಾಗಲಿ ಕಾನೂನಿನ ಮುಂದೆ ಎಲ್ಲರು ಒಂದೇ ಎನ್ನುವ ಒಂದೊಳ್ಳೆಯ ಸಂದೇಶ ಹೋಗಿದೆ ನ್ಯಾಯ ನ್ಯಾಯನೇ ಎಂದು ಕೂಡ ರಮ್ಯಾ ಹೇಳಿದ್ದಾರೆ.


Click it and Unblock the Notifications











