For Quick Alerts
  ALLOW NOTIFICATIONS  
  For Daily Alerts

  Kabza Teaser: ಕಬ್ಜ ಟೀಸರ್ ಲಾಂಚ್: ರಾಣಾ ದಗ್ಗುಬಾಟಿ ಜೊತೆ ಕನ್ನಡದ ಸ್ಟಾರ್ ನಟ

  |

  ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹಾಗೂ ಆರ್ ಚಂದ್ರು ನಿರ್ದೇಶನದ ಬಹು ನಿರೀಕ್ಷಿತ ಕಬ್ಜ ಚಿತ್ರದ ಟೀಸರ್ ಇಂದು ( ಸೆಪ್ಟೆಂಬರ್ 17 ) ಸಂಜೆ 5.04ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

  ಕನ್ನಡ ಚಿತ್ರವಾದ ಕಬ್ಜ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದ್ದು ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಚಿತ್ರ ಅತ್ಯಂತ ರಿಚ್ ಆಗಿರಲಿದೆ ಹಾಗೂ ಮೇಕಿಂಗ್ ಮತ್ತೊಂದು ಹಂತದಲ್ಲಿ ಇರಲಿದೆ ಎಂಬ ಮಾಹಿತಿ ಆಪ್ತ ವಲಯಗಳಿಂದ ಈಗಾಗಲೇ ತಿಳಿದು ಬಂದಿದ್ದು, ಚಿತ್ರದ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ನೋಡಿದ ಸಿನಿ ಪ್ರೇಕ್ಷಕರು ಚಿತ್ರದ ಟೀಸರ್ ಹಾಗೂ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

  ಇನ್ನು ಚಿತ್ರದ ಕುರಿತು ನಿರ್ದೇಶಕ ಆರ್ ಚಂದ್ರು ಸಾಕಷ್ಟು ವಿಶ್ವಾಸವನ್ನು ಹೊಂದಿದ್ದು, ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ತೆಲುಗು ಚಿತ್ರರಂಗದ ಖ್ಯಾತ ನಟ ರಾಣಾ ದಗ್ಗುಬಾಟಿ ಅವರನ್ನು ಮುಖ್ಯ ಅತಿಥಿಯಾಗಿ ಕರೆತರುತ್ತಿದ್ದಾರೆ. ರಾಣಾ ದಗ್ಗುಬಾಟಿ ಜೊತೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಕೂಡ ವೇದಿಕೆ ಏರಲಿದ್ದಾರೆ ಎಂಬ ಸುದ್ದಿ ಇದೆ.

  ಈ ಕಾರ್ಯಕ್ರಮ ಇಂದು ಸಂಜೆ ಒರಾಯನ್ ಮಾಲ್ ಪಿವಿಆರ್ ಬಹುಪರದೆಯಲ್ಲಿ ನಡೆಯಲಿದ್ದು, ಮೊದಲಿಗೆ ಟೀಸರ್ ಅನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸಿ ನಂತರ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇನ್ನು ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಕೂಡ ಅಭಿನಯಿಸಿರುವುದು ವಿಶೇಷವಾಗಿ ಇರಲಿದ್ದು, ಟೀಸರ್ ಕಟ್ ಯಾವ ರೀತಿ ಇರಲಿದೆ ಎಂದು ಕನ್ನಡ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ.

  English summary
  Rana Daggubati and Shiva Rajkumar to grace Kabzaa teaser release event. Read on,
  Saturday, September 17, 2022, 11:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X