For Quick Alerts
  ALLOW NOTIFICATIONS  
  For Daily Alerts

  'ಕಬ್ಜ' ಟೀಸರ್ ಲಾಂಚ್ ಈವೆಂಟ್.. ಸಮಯ, ಗೆಸ್ಟ್, ಸ್ಥಳ

  |

  ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಟೀಸರ್ ಲಾಂಚ್‌ ಈವೆಂಟ್‌ಗೆ ಭರ್ಜರಿ ಪ್ಲ್ಯಾನ್ ನಡೀತಿದೆ. ನಾಳೆ (ಸೆಪ್ಟೆಂಬರ್ 17) ಸಂಜೆ ಬಹಳ ಅದ್ಧೂರಿಯಾಗಿ ಒರಾಯನ್ ಮಾಲ್‌ನಲ್ಲಿ ಈವೆಂಟ್ ನಡೆಯಲಿದೆ. ಚಿತ್ರತಂಡದ ಜೊತೆಗೆ ಟಾಲಿವುಡ್ ಸೂಪರ್ ಸ್ಟಾರ್ ವೇದಿಕೆ ಎಂಟ್ರಿ ಕೊಡಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಕಬ್ಜ' ಚಿತ್ರದಲ್ಲಿ ಕಿಚ್ಚ ಸುದೀಪ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

  ಮೂರ್ನಾಲ್ಕು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ 'ಕಬ್ಜ' ಸಿನಿಮಾ ಸದ್ದು ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಉಪೇಂದ್ರ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. 1947ರಿಂದ ಸಿನಿಮಾ ಕಥೆ ಶುರುವಾಗುತ್ತದೆ. 70-80ರ ದಶಕದ ಕಾಲಘಟ್ಟದಲ್ಲಿ ಕಥೆ ನಡೆಯಲಿದೆ. ಶ್ರಿಯಾ ಶರಣ್ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಒಂದು ಹಾಡು ಹೊರತುಪಡಿಸಿ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.

  'ಕಬ್ಜ' ಸಿನಿಮಾಕ್ಕೆ ಬಲ ತುಂಬಲು ಬಂದ 'RRR' ನಿರ್ಮಾಪಕ'ಕಬ್ಜ' ಸಿನಿಮಾಕ್ಕೆ ಬಲ ತುಂಬಲು ಬಂದ 'RRR' ನಿರ್ಮಾಪಕ

  ಭರ್ಜರಿ ಫೋಟೊಶೂಟ್ ಮಾಡಿ ಚಂದ್ರು ಚಿತ್ರಕ್ಕೆ ಚಾಲನೆ ಕೊಟ್ಟಿದ್ದರು. ಗನ್‌ ಹಿಡಿದು ಸ್ಟೈಲಿಶ್ ಲುಕ್‌ನಲ್ಲಿ ರಿಯಲ್ ಸ್ಟಾರ್ ಖದರ್ ತೋರಿಸಿದ್ದರು. ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಸಿನಿಮಾ ಮುಹೂರ್ತ ನಡೆದಿತ್ತು. ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ, ಈ ಗ್ಯಾಂಗ್‌ಸ್ಟರ್ ಸಿನಿಮಾ ಕಥೆ ಕಟ್ಟಿಕೊಡಲಾಗಿದೆ. 'ಕಬ್ಜ' ಚಿತ್ರದ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾನೆ ಇದೆ. ಇದೀಗ ಉಪೇಂದ್ರ ಬರ್ತ್‌ಡೇ ಗಿಫ್ಟ್‌ ಆಗಿ ಟೀಸರ್ ರಿಲೀಸ್ ಮಾಡಲಾಗ್ತಿದೆ.

  ಇಷ್ಟು ದಿನ ಬರೀ ಪೋಸ್ಟರ್‌ಗಳನ್ನು ತೋರಿಸಿದ್ದ ಚಂದ್ರು ಇದೇ ಮೊದಲ ಬಾರಿಗೆ ಚಿತ್ರದ ದೃಶ್ಯಗಳನ್ನು ತೋರಿಸಲು ಹೊರಟಿದ್ದಾರೆ. ಸುಮಾರು 2 ನಿಮಿಷದ ಟೀಸರ್‌ನ ಕಟ್ ಮಾಡಿದ್ದಾರೆ. ರವಿ ಬಸ್ರೂರು ಹಂಟಿಂಗ್ ಬಿಜಿಎಂ ಹಿನ್ನೆಲೆಯಲ್ಲಿ ರಿಯಲ್ ಸ್ಟಾರ್ ಆರ್ಭಟ ಕಿಕ್ ಕೊಡಲಿದೆ. 'ಕಬ್ಜ' ಟೀಸರ್‌ ಲಾಂಚ್ ಮಾಡಲು 'ಬಾಹುಬಲಿ' ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಬೆಂಗಳೂರಿಗೆ ಬರ್ತಿದ್ದಾರೆ. 7 ಭಾಷೆಗಳಿಗೆ ಸೇರಿಸಿ ಒಂದೇ ಟೀಸರ್ ರಿಲೀಸ್ ಆಗಲಿದೆ.

  ಭಾರ್ಗವ್ ಭಕ್ಷಿ ಬಂದು ಹೋಗ್ತಿದ್ದಂತೆ 'ಕಬ್ಜ' ಟೀಸರ್‌ಗೆ ಕೈ ಹಾಕಿದ ಚಂದ್ರು: ಮುಹೂರ್ತ ಫಿಕ್ಸ್!ಭಾರ್ಗವ್ ಭಕ್ಷಿ ಬಂದು ಹೋಗ್ತಿದ್ದಂತೆ 'ಕಬ್ಜ' ಟೀಸರ್‌ಗೆ ಕೈ ಹಾಕಿದ ಚಂದ್ರು: ಮುಹೂರ್ತ ಫಿಕ್ಸ್!

  Rana Daggubati invited as a special guest at the Teaser launch event of Kabza

  ಇನ್ನು ರಾಣಾ ದಗ್ಗುಬಾಟಿ ಜೊತೆಗೆ ಇಡೀ ಚಿತ್ರತಂಡ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. ನಾಯಕಿ ಶ್ರಿಯಾ ಶರಣ್ ಕೂಡ ಹಾಜರಾಗಲಿದ್ದಾರೆ. ಸಂಜೆ 5 ಗಂಟೆಯಿಂದ 7 ಗಂಟೆಯವರೆಗೂ ಕಾರ್ಯಕ್ರಮ ನಡೆಯಲಿದ್ದು, ಅನುಶ್ರೀ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಒರಾಯನ್ ಮಾಲ್‌ನ ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ನಲ್ಲಿ ಟೀಸರ್ ಪ್ರದರ್ಶನವಾಗಲಿದೆ. ನಂತರ ಯೂಟ್ಯೂಬ್‌ಗೆ ಅಪ್‌ಲೋಡ್ ಆಗಲಿದೆ. ಎರಡು ಭಾಗಗಳಾಗಿ 'ಕಬ್ಜ' ಸಿನಿಮಾ ತೆರೆಗೆ ಬರ್ತಿದ್ದು, ಸಿನಿಮಾ ರಿಲೀಸ್ ಡೇಟ್ ಶೀಘ್ರದಲ್ಲೇ ಘೋಷಣೆಯಾಗಲಿದೆ.

  ಉಪೇಂದ್ರ ಹುಟ್ಟುಹಬ್ಬಕ್ಕೆ ಈ ವಿಶೇಷ ಗಿಫ್ಟ್ ಕೊಟ್ಟರೆ, ನಿಮಗೂ ಗಿಫ್ಟ್ ಸಿಗಲಿದೆ!ಉಪೇಂದ್ರ ಹುಟ್ಟುಹಬ್ಬಕ್ಕೆ ಈ ವಿಶೇಷ ಗಿಫ್ಟ್ ಕೊಟ್ಟರೆ, ನಿಮಗೂ ಗಿಫ್ಟ್ ಸಿಗಲಿದೆ!

  English summary
  Rana Daggubati invited as a special guest at the Teaser launch event of Kabza. Know More.
  Saturday, September 17, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X