»   » 'ಬಾಹುಬಲಿ' ನಟ ರಾನಾ ದಗ್ಗುಬಾಟಿಗೆ ಬಂತು ಬಂಪರ್ ಆಫರ್.!

'ಬಾಹುಬಲಿ' ನಟ ರಾನಾ ದಗ್ಗುಬಾಟಿಗೆ ಬಂತು ಬಂಪರ್ ಆಫರ್.!

Posted By:
Subscribe to Filmibeat Kannada

ಬ್ಲಾಕ್ ಬಸ್ಟರ್ 'ಬಾಹುಬಲಿ' ಸಿನಿಮಾದಲ್ಲಿ 'ಬಲ್ಲಾಳದೇವ'ನಾಗಿ ಅಬ್ಬರಿಸಿ ಬೊಬ್ಬಿರಿದು ವಿಶ್ವದಾದ್ಯಂತ ಖ್ಯಾತಿ ಗಳಿಸಿದ ರಾನಾ ದಗ್ಗುಬಾಟಿಗೆ ಬಂಪರ್ ಆಫರ್ ಒಂದು ಹುಡುಕಿಕೊಂಡು ಬಂದಿದೆ.

'ಲಂಡನ್ ಡಿಜಿಟಲ್ ಮೂವಿ ಆಂಡ್ ಟಿವಿ ಸ್ಟುಡಿಯೋಸ್' ಎಂಬ ಸಂಸ್ಥೆ ನಿರ್ಮಾಣ ಮಾಡಲಿರುವ ಹಾಲಿವುಡ್ ಚಿತ್ರವೊಂದರ ಪ್ರಮುಖ ಪಾತ್ರದಲ್ಲಿ ನಟಿಸಲು ರಾನಾ ದಗ್ಗುಬಾಟಿಗೆ ಅವಕಾಶ ಲಭಿಸಿದೆ.

Rana Daggubati to make his hollywood debut

ನಿಮಗೆ ಗೊತ್ತೇ.? 'ಬಲ್ಲಾಳದೇವ' ನಟ ರಾಣಾ ಬಲಗಣ್ಣಿಗೆ ದೃಷ್ಟಿಯೇ ಇಲ್ಲ.!

ರಾನಾ ದಗ್ಗುಬಾಟಿ ಅಭಿನಯಿಸಲಿರುವ ಹಾಲಿವುಡ್ ಸಿನಿಮಾ 2018ರಲ್ಲಿ ಸೆಟ್ಟೇರಲಿದೆ. ಸಿನಿಮಾದ ತಾರಾಗಣ ಹಾಗೂ ತಂತ್ರಜ್ಞ ವರ್ಗ ಕುರಿತ ಮಾಹಿತಿ ಸೆಪ್ಟೆಂಬರ್ ತಿಂಗಳಿನಲ್ಲಿ ಹೊರಬೀಳಲಿದೆ.

ಹಾಲಿವುಡ್ ಗೆ ಹಾರುತ್ತಿರುವ ಬಗ್ಗೆ ರಾನಾ ದಗ್ಗುಬಾಟಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತೆಲುಗಿನ 'ನೇನೇ ರಾಜ ನೇನೇ ಮಂತ್ರಿ' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ರಾನಾ ದಗ್ಗುಬಾಟಿ ಬಿಜಿಯಾಗಿದ್ದಾರೆ.

English summary
Rana Daggubati to make his hollywood debut with the movie produced by The London Digital Movie and TV Studios.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada