For Quick Alerts
  ALLOW NOTIFICATIONS  
  For Daily Alerts

  ಹೊಸ 'ಚಾಟ್ ಶೋ'ಗೆ ಸಾರಥಿಯಾದ ಬಲ್ಲಾಳದೇವ 'ರಾಣಾ'

  By Suneel
  |

  'ಬಾಹುಬಲಿ-2' ಸಿನಿಮಾ ಪ್ರಪಂಚದಾದ್ಯಂತ ಗಮನ ಸೆಳೆದು ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ 'ಬಾಹುಬಲಿ' ಪಾತ್ರದಾರಿ ಪ್ರಭಾಸ್ ಮತ್ತು 'ಬಲ್ಲಾಳ ದೇವ' ಪಾತ್ರದಾರಿ ರಾಣಾ ದಗ್ಗುಬಾಟಿ ಇಬ್ಬರ ಅಭಿನಯ ನೋಡಿದವರು ಅವರ ಮುಂದಿನ ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

  'ಬಾಹುಬಲಿ-2' ನಂತರ ಪ್ರಭಾಸ್ 'ಸಾಹೋ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ರಾಣಾ ದಗ್ಗುಬಾಟಿ ಸಹ ತಮ್ಮ ಹೊಸ ಚಿತ್ರ 'ನೀನೆ ರಾಜು ನೀನೆ ಮಂತ್ರಿ' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ರಾಣಾ ಈಗ ಟಿವಿ ಕಾರ್ಯಕ್ರಮದ ಹೋಸ್ಟ್ ಆಗಿದ್ದು, ಹೊಸ ಚಾಟ್ ಶೋ ಸಾರಥಿಯಾಗಿದ್ದಾರೆ. ಆ ಶೋ ಯಾವುದು ಮತ್ತು ಎಂಬಿತ್ಯಾದಿ ಮಾಹಿತಿಗೆ ಮುಂದೆ ಓದಿರಿ..

  ಚಾಟ್ ಶೋ ಸಾರಥಿಯಾದ ರಾಣಾ

  ಚಾಟ್ ಶೋ ಸಾರಥಿಯಾದ ರಾಣಾ

  ರಾಣಾ ದಗ್ಗುಬಾಟಿ ಇದೇ ಮೊದಲ ಬಾರಿಗೆ ಚಾಟ್ ಶೋ ಒಂದರ ಹೋಸ್ಟ್ ಆಗಿದ್ದಾರೆ. ಈ ಶೋ'ಗೆ 'No 1 Yaari' ಎಂದು ಹೆಸರಿಡಲಾಗಿದೆ.

  'No 1 Yaari'

  'No 1 Yaari'

  ಕನ್ನಡ ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ರೀತಿಯ ಶೋ ತೆಲುಗು ಕಿರುತೆರೆಯ 'No 1 Yaari' ಚಾಟ್ ಶೋ ಆಗಿದೆ.

  ಸ್ಟಾರ್ ಸೆಲೆಬ್ರಿಟಿಗಳ ಜೊತೆ ಮಾತುಕತೆ

  ಸ್ಟಾರ್ ಸೆಲೆಬ್ರಿಟಿಗಳ ಜೊತೆ ಮಾತುಕತೆ

  'No 1 Yaari' ಶೋ ಸಾರಥ್ಯವಹಿಸಿರುವ ರಾಣಾ ದಗ್ಗುಬಾಟಿ ಟಾಲಿವುಡ್ ಸೆಲೆಬ್ರಿಟಿಗಳ ವೈಯಕ್ತಿಕ ಜೀವನ ಮತ್ತು ಸಿನಿ ಜೀವನದ ಕುರಿತು ಪ್ರಶ್ನೆಗಳನ್ನು ಕೇಳುತ್ತಾ ಚಾಟ್ ಶೋ ನಲ್ಲಿ ಮನರಂಜನೆ ನೀಡಲಿದ್ದಾರೆ. 'No 1 Yaari' ಚಾಟ್ ಶೋ ತೆಲುಗಿನಲ್ಲಿ ಜೆಮಿನಿ ಟಿವಿಯಲ್ಲಿ ಪ್ರಸಾರ ಆಗಲಿದೆ. ಈಗಾಗಲೇ ಮೊದಲ ಎಪಿಸೋಡ್ ನಲ್ಲಿ ನಾಗ ಚೈತನ್ಯ ಮತ್ತು ನಟಿ ಸಮಂತ ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ ಜೂನ್ 26 ರಿಂದ ಪ್ರಸಾರ ಆಗಲಿದೆ ಎಂದು ತಿಳಿದಿದೆ.

  ಬಿಗ್‌ಬಾಸ್ ಹೋಸ್ಟ್ ಆಗಿ ಜೂ.ಎನ್‌ಟಿ.ಆರ್

  ಬಿಗ್‌ಬಾಸ್ ಹೋಸ್ಟ್ ಆಗಿ ಜೂ.ಎನ್‌ಟಿ.ಆರ್

  ತೆಲುಗಿನ ಸ್ಟಾರ್ ನಟರಲ್ಲಿ ಟಿವಿ ಕಾರ್ಯಕ್ರಮದ ಹೋಸ್ಟ್ ಆಗಿ ರಾಣಾ ದಗ್ಗುಬಾಟಿ ಕೆಲಸ ಶುರುಮಾಡಿದ್ದಾರೆ. ಸದ್ಯದಲ್ಲೇ ಜೂನಿಯರ್ ಎನ್‌ಟಿಆರ್ ಸಹ ಟಿವಿ ಕಾರ್ಯಕ್ರಮದ ಹೋಸ್ಟ್ ಆಗಿ ಕಾಣಿಸಿಕೊಳ್ಳಲಿದ್ದು, 'ಬಿಗ್ ಬಾಸ್' ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರಂತೆ.[ಕನ್ನಡ 'ಬಿಗ್ ಬಾಸ್'ನಲ್ಲಿ ಸುದೀಪ್, ತಮಿಳಿನಲ್ಲಿ ಕಮಲ್, ತೆಲುಗಿನಲ್ಲಿ ಯಾರು?]

  English summary
  'Baahubalil-2' fame tollywood Actor Rana Daggubati is all set to turn chat show host for a programme which would invite his industry friends for a candid conversation. Which has titled 'No 1 Yaari'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X