ಹಳ್ಳಿ ಸೊಗಡಿನ 'ರಣಹೇಡಿ' ಸಿನಿಮಾ ಈ ವಾರ ತೆರೆಗೆ

'ರಣಹೇಡಿ' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಹಳ್ಳಿ ಸೊಗಡಿನ ಕಥೆಯನ್ನು ಈ ಸಿನಿಮಾ ಹೊಂದಿದೆ. ಈಗಾಗಲೇ ಸಿನಿಮಾ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿ ಗಾಂಧಿನಗರದಲ್ಲಿ ಸದ್ದು ಮಾಡಿವೆ.

ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎನ್ನುವ ನಿರ್ದೇಶಕರ ಆಸೆ ಈ ಮೂಲಕ ಈಡೇರಿದೆ. ರೈತರ ಸಮಸ್ಯೆಯನ್ನು ಈ ಮೂಲಕ ತೋರಿಸಲಾಗಿದೆ. ಗ್ರಾಮೀಣ ಪ್ರದೇಶದ ಸಿನಿಮಾಗಳು ಕಡಿಮೆ ಆಗಿರುವ ಸಮಯದಲ್ಲಿ ಹಳ್ಳಿ ಕಥೆಯನ್ನು 'ರಣಹೇಡಿ' ಹೇಳುತ್ತಿದೆ.

ಮನು ಕೆ ಶೆಟ್ಟಿಹಳ್ಳಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಕರ್ಣ ಕುಮಾರ್ ಸಿನಿಮಾದ ನಾಯಕನಾಗಿದ್ದಾರೆ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಖಳನಾಯಕ, ಪೋಷಕ ಪಾತ್ರದಲ್ಲಿ ನಟಿಸಿದ್ದ ಕರ್ಣ ಕುಮಾರ್ ಇಲ್ಲಿ ಹೀರೋ ಆಗಿದ್ದಾರೆ. ಕರ್ಣ ಕುಮಾರ್ ಗೆ ಐಶ್ವರ್ಯ ರಾವ್ ಜೋಡಿಯಾಗಿದ್ದಾರೆ.

Ranahedi Kannada Movie Will Be Releasing On November 29th

ಈ ಹಿಂದೆ 'ರವಿ ಹಿಸ್ಟರಿ' ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿ ಹಳ್ಳಿ ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಡಿ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚುತ್ ಕುಮಾರ್, ವಿ ಮನೋಹರ್, ಗಿರಿ ಚಿತ್ರದ ಪಾತ್ರಗಳಲ್ಲಿ ನಟಿಸಿದ್ದಾರೆ.

ಆಕ್ಷನ್ ರೊಮ್ಯಾಂಟಿಕ್ ದೃಶ್ಯಗಳು ಟ್ರೇಲರ್ ನಲ್ಲಿವೆ. ವಿ ಮನೋಹರ್ ಸಂಗೀತ ನೀಡಿದ್ದಾರೆ. ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೇ ಶುಕ್ರವಾರ ಅಂದರೆ, ನವೆಂಬರ್ 29 ರಂದು ಚಿತ್ರ ಬಿಡುಗಡೆ ಆಗುತ್ತಿದೆ.

More from Filmibeat

English summary
Ranahedi kannada movie will be releasing on November 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X